ಸರ್ಕಾರ ಮತ್ತು ಶಿಕ್ಷಣ ಇಲಾಖೆ ಇಂತಹ ವಿನೂತನ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿರುವ ವಿಭಿನ್ನ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ
ಯಲಬುರ್ಗಾ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದು ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಯಲಬುರ್ಗಾ-ಕುಕನೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಮತ್ತು ಶಿಕ್ಷಣ ಇಲಾಖೆ ಇಂತಹ ವಿನೂತನ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿರುವ ವಿಭಿನ್ನ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಇದರಿಂದ ಮಕ್ಕಳಲ್ಲಿರುವ ಕಲೆ ಅನಾವರಣಕ್ಕೆ ಪ್ರೇರಣೆಯಾಗಿವೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾ ಮನೋಭಾವ ಬೆಳೆಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವಿ. ಧರಣಾ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ಮಕ್ಕಳು ಪ್ರತಿಭಾ ಕಾರಂಜಿಯಿಂದ ಜನಪದ ನೃತ್ಯ, ಗಜಲ್, ಚಿತ್ರಕಲೆ ಸೇರಿದಂತೆ ನಾನಾ ಪ್ರತಿಭೆ ಹೊರಹಾಕಲು ಸಾಧ್ಯವಾಗುತ್ತದೆ ಎಂದರು.ಸಂಗನಾಳ ಶಾಲೆ ಮುಖ್ಯಶಿಕ್ಷಕ ಬಸವರಾಜ ಮಾಸ್ತಿ ಮಾತನಾಡಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ, ಬಿಇಒ ಅಶೋಕ ಗೌಡರ, ಟಿ.ಜೆ.ದಾನಿ, ವೀರಭದ್ರಪ್ಪ ಅಂಗಡಿ, ಗೌಡಪ್ಪ ಬಲಕುಂದಿ, ಶ್ಯಾಮೀದ್‌ಸಾಬ್ ಮುಲ್ಲಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವನಗೌಡ ಪಾಟೀಲ್, ಎನ್‌ಜಿಒ ಅಧ್ಯಕ್ಷ ಎಸ್.ಎನ್. ಶ್ಯಾಗೋಟಿ, ಡಾ. ಮಂಜುನಾಥ ಕುಕನೂರು, ಭೀಮಣ್ಣ ಹವಳಿ, ಶಿವಪ್ಪ ಉಪ್ಪಾರ, ಬಸವರಾಜ ಮುಳಗುಂದ, ಜಗದೀಶ ಬಳಿಗಾರ, ಬಸವರಾಜ ಮುಳಗುಂದ, ಶರಣಗೌಡ ಪಾಟೀಲ್, ಶಿವಪ್ಪ ಈಬೇರಿ, ಶೇಖರಗೌಡ ಪಾಟೀಲ, ಸಂಗಯ್ಯ ಹಿರೇಮಠ, ಮುಖ್ಯಶಿಕ್ಷಕ ಯಮನಪ್ಪ ಹಾದಿಮನಿ, ಬಸವರಾಜ ಕರಾಟೆ ಸೇರಿದಂತೆ ಗ್ರಾಪಂ ಸದಸ್ಯರು, ಗುರು ಹಿರಿಯರು, ಯುವಕರು ಇದ್ದರು.