ಸಾರಾಂಶ
ಪಿಒಪಿ ಬಣ್ಣದ ಗಣಪತಿ ಪರಿಸರಕ್ಕೆ ಹಾನಿ ಮಾಡುತ್ತವೆ. ಮಣ್ಣಿನ ಗಣೇಶ ಉತ್ತಮವಾಗಿದ್ದು, ಮುಂದಿನ ವರ್ಷಕ್ಕೆ ಗೋಧಿ ಹಿಟ್ಟಿನ, ರಾಗಿಹಿಟ್ಟು, ಮ್ಯೆದಾಹಿಟ್ಟು ಅಕ್ಕಿ ಹಿಟ್ಟು ಸೇರಿಸಿ ಗಣಪನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಜಲಚರ ಜೀವಿಗಳಿಗೆ ಆಹಾರ ನೀಡಬಹುದು ಎಂದು ಮಾಜಿ ಶಾಸಕ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು. . ಮುಂದಿನ ವರ್ಷ ಗೋಧಿ ಹಿಟ್ಟಿನ, ರಾಗಿಹಿಟ್ಟು, ಮ್ಯೆದಾಹಿಟ್ಟು ಅಕ್ಕಿ ಹಿಟ್ಟು ಕಲೆಸಿ ಅ ಮೂಲಕ ಗಣಪ ಮಾಡಿ ಎಂದು ಸಲಹೆ ನೀಡಿದರು. ಗಣಪ ವ್ಯಾಪಾರವನ್ನು ಲಾಭದ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದಿಂದ ಇನ್ನು ಸುಧಾರಿತ ಗಣಪ ನಿರ್ಮಾಣವಾಗಲಿ ಎಂದರು. ಪಿಒಪಿ ಗಣಪತಿಯನ್ನು ಪತ್ತೆ ಹಚ್ಚಿ ಎಲ್ಲಾವನ್ನು ಸೀಜ್ ಮಾಡುವ ಮೂಲಕ ಎಚ್ಚರಿಕೆಯನ್ನು ಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಪಿಒಪಿ ಬಣ್ಣದ ಗಣಪತಿ ಪರಿಸರಕ್ಕೆ ಹಾನಿ ಮಾಡುತ್ತವೆ. ಮಣ್ಣಿನ ಗಣೇಶ ಉತ್ತಮವಾಗಿದ್ದು, ಮುಂದಿನ ವರ್ಷಕ್ಕೆ ಗೋಧಿ ಹಿಟ್ಟಿನ, ರಾಗಿಹಿಟ್ಟು, ಮ್ಯೆದಾಹಿಟ್ಟು ಅಕ್ಕಿ ಹಿಟ್ಟು ಸೇರಿಸಿ ಗಣಪನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಜಲಚರ ಜೀವಿಗಳಿಗೆ ಆಹಾರ ನೀಡಬಹುದು ಎಂದು ಮಾಜಿ ಶಾಸಕ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದೆ ಮಾತರಂ ಸಮಿತಿಯಿಂದ ಪ್ರಣಮ್ ಹಾಗೂ ಅವರ ಸ್ನೇಹಿತರ ಸಹಯೋಗದಲ್ಲಿ ನನ್ನ ಗಣಪ ಮಣ್ಣಿನ ಗಣಪ ಎಂಬ ಕಾರ್ಯಾಗಾರವನ್ನು ಕನ್ನಡ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣಿನ ಗಣಪತಿ ಪರಿಸರದ ಉಳಿವೆಗಾಗಿ ಮಾಡುತ್ತಿರುವುದು ಒಳ್ಳೆಯದು ಸಂಸ್ಕೃತಿ, ಪಿಒಪಿ ಬಣ್ಣದ ಗಣಪತಿ ಪರಿಸರಕ್ಕೆ ಹಾನಿ ಮಾಡುತ್ತವೆ. ಜೊತೆಗೆ ನಮ್ಮ ಸುತ್ತಮುತ್ತಲ ವಾತವರಣ ಕಲುಷಿತವಾಗಿದ್ದು, ಉತ್ತಮ ವಾತರವಣ ನಿಮಾಣ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಪರಿಸರ ಚನ್ನಾಗಿದ್ದರೇ ನಾವುಗಳೆಲ್ಲಾ ಆರೋಗ್ಯವಂತರಾಗಿರುತ್ತೇವೆ. ನನ್ನ ಗಣಪ ಮಣ್ಣಿನ ಗಣಪ ಎನ್ನುವ ಶೀರ್ಷಿಕೆ ಉತ್ತಮವಾಗಿದೆ. ಮುಂದಿನ ವರ್ಷ ಗೋಧಿ ಹಿಟ್ಟಿನ, ರಾಗಿಹಿಟ್ಟು, ಮ್ಯೆದಾಹಿಟ್ಟು ಅಕ್ಕಿ ಹಿಟ್ಟು ಕಲೆಸಿ ಅ ಮೂಲಕ ಗಣಪ ಮಾಡಿ ಎಂದು ಸಲಹೆ ನೀಡಿದರು. ಗಣಪ ವ್ಯಾಪಾರವನ್ನು ಲಾಭದ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದಿಂದ ಇನ್ನು ಸುಧಾರಿತ ಗಣಪ ನಿರ್ಮಾಣವಾಗಲಿ ಎಂದರು. ಪಿಒಪಿ ಗಣಪತಿಯನ್ನು ಪತ್ತೆ ಹಚ್ಚಿ ಎಲ್ಲಾವನ್ನು ಸೀಜ್ ಮಾಡುವ ಮೂಲಕ ಎಚ್ಚರಿಕೆಯನ್ನು ಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಸಲಹೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತಾನಾಡಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸವ ಕೆಲಸ ಆಗಬೇಕಾಗಿದೆ. ಇದರಿಂದ ಮಣ್ಣಿನ ಗಣಪ ಪೂಜೆಗೆ ಅನೂಕೂಲವಾಗಿದೆ. ಇಂತಹ ಗಣಪತಿ ತಯಾರು ಮಾಡುವ ಕಾರ್ಯಾಗಾರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಿದ್ದಾರೆ. ಸರ್ಕಾರ, ಜಿಲ್ಲಾಡಳಿತ ಬಣ್ಣದ ಪಿಒಪಿ ಗಣಪತಿ ತಯಾರಿಸುವುದನ್ನು ತಡೆದು ಪರಿಸರ ಅನೂಕೂಲವಾಗುವಂತಹ ಗಣಪತಿ ಮಾಡಲು ಜಾಗೃತಿ ಮೂಡಿಸಿ ಎಂದರು. ಬ್ರಾಹ್ಮಣ ಸಭಾದ ಅಧ್ಯಕ್ಷ ಹಾಗೂ ವಕೀಲ ಎಚ್.ಎಸ್. ಮಂಜುನಾಥ್ ಮೂರ್ತಿ ಮಾತನಾಡಿ, ಇನ್ನು ಆಕರ್ಷಣೆಯಾಗಿ ಕಾಣುವ ವ್ಯಕ್ತಿತ್ವ ಗಣಪತಿಗೆ ಇರುವುದಿಲ್ಲ. ಮಣ್ಣಿನ ಗಣಪತಿ ಮೂಲಕ ಆತ್ಮ ಸಂತೋಷ ಸಿಗುತ್ತದೆ. ಗೋಧಿ ಹಿಟ್ಟಿನ, ರಾಗಿಹಿಟ್ಟು, ಮೈದಾಹಿಟ್ಟು ಅಕ್ಕಿ ಹಿಟ್ಟು ಕಲೆಸಿ ಆ ಮೂಲಕ ಗಣಪ ಮಾಡಿ ಎಂದು ಮಾಜಿ ಶಾಸಕರು ಉತ್ತಮ ಸಂದೇಶ ಕೊಟ್ಟಿದ್ದಾರೆ. ಈ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಜಾಗೃತಿ ಮೂಡಿಸಲಿ ಎಂದರು. ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೆಳೆಯರ ಬಳಗದ ಮುಖ್ಯ ಸಂಚಾಲಕ ಪ್ರಣವ್ ಭಾರಧ್ವಾಜ್, ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ನಿರ್ದೇಶಕರಾದ ಶೋಭನ್ ಬಾಬು, ಶ್ರೀ ಸೀತರಾಮಾಂಜನೇಯ ದೇವಾಲಯದ ಅಧ್ಯಕ್ಷ ಶ್ರೀಕಾಂತ್, ವಕೀಲ ಮತ್ತು ಬ್ರಾಹ್ಮಣ ವಿಧ್ಯಾರ್ಥಿ ನಿಲಯದ ಅಧ್ಯಕ್ಷ ಮನು, ಚಿತ್ರ ಕಲಾವಿದರಾದ ನಾಗರಾಜ್, ರಂಗಭೂಮಿ ಕಲಾವಿದರು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂಜಾ ರಘುನಂದನ್, ಪತ್ರಕರ್ತ ರಘುನಂದನ್, ಮನೆ ಮನೆಯಲ್ಲಿ ಶ್ರೀ ಶಂಕರ ಪ್ರತಿಷ್ಠಾನ ಅಧ್ಯಕ್ಷ ಎಚ್.ಎಸ್. ಬಾಲಸುಬ್ರಹ್ಮಣ್ಯ ಪ್ರಸಾದ್, ಝೇಂಕಾರ್, ಪ್ರಜ್ವಲ್ ಗೌಡ, ದಿಗಂತ್, ಆದಿತ್ಯ, ಸೃಜನ್, ತನವ್, ಪೃಥ್ವಿಕ್, ಚಿದಾನಂದ್ ಹಾಗೂ ಬಳಗದ ಸದಸ್ಯರು, ಹಿತೈಷಿಗಳು, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಪೋಷಕರು, ಮಕ್ಕಳು ಇತರರು ಉಪಸ್ಥಿತರಿದ್ದರು.