5ನೇ ಫುಟಕ್ಕೆ..ಲೀಡ್‌...ಮಹಿಳಾ ಪತ್ರಕರ್ತರಿಗೆ ಪ್ರೋತ್ಸಾಹ ನಮ್ಮಿಂದಲೇ ಮೊದಲಾಗಲಿ

| Published : Jan 26 2025, 01:31 AM IST

5ನೇ ಫುಟಕ್ಕೆ..ಲೀಡ್‌...ಮಹಿಳಾ ಪತ್ರಕರ್ತರಿಗೆ ಪ್ರೋತ್ಸಾಹ ನಮ್ಮಿಂದಲೇ ಮೊದಲಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಂಗಳೂರು, ಮಂಗಳೂರು, ಮೈಸೂರು ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಲು ಮುಂದೆ ಬರಬೇಕು. ಅದಕ್ಕೆ ಪ್ರೋತ್ಸಾಹದಾಯಕ ಹೆಜ್ಜೆ ಇಡುವ ಯತ್ನಗಳು ಪತ್ರಕರ್ತರಿಂದಲೇ ಮೊದಲಾಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಂಗಳೂರು, ಮಂಗಳೂರು, ಮೈಸೂರು ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಲು ಮುಂದೆ ಬರಬೇಕು. ಅದಕ್ಕೆ ಪ್ರೋತ್ಸಾಹದಾಯಕ ಹೆಜ್ಜೆ ಇಡುವ ಯತ್ನಗಳು ಪತ್ರಕರ್ತರಿಂದಲೇ ಮೊದಲಾಗಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 2024ನೇ ಸಾಲಿನ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಬೆಳಗಾವಿ ಪತ್ರಕರ್ತರ ಬಳಗದಿಂದ ನಗರದ ವಾರ್ತಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರಲ್ಲಿ ವೃತ್ತಿಪರ ಸ್ಪರ್ಧೆ ಇರುವುದು ಸಹಜ ಮತ್ತು ಅದು ಆರೋಗ್ಯಕರ ಬೆಳವಣಿಗೆ. ವೃತ್ತಿಯ ಆಚೆಗೆ ನಾವೆಲ್ಲರೂ ಒಂದೇ ಎಂಬ ಭಾವತೋರಣದಲ್ಲಿ ಬಂಧಿಯಾಗಬೇಕು. ಆಗ ಮಾತ್ರ ಸಕಾರಾತ್ಮಕ ಬೆಳವಣಿಗೆಗಳು ಸಾಧ್ಯ. ನಮ್ಮ ನಡುವೆ ಸಾಕಷ್ಟು ಪ್ರತಿಭಾವಂತ, ಸೃಜನಾತ್ಮಕ ಬರವಣಿಗೆ ರೂಢಿಸಿಕೊಂಡ ಯುವ ಪತ್ರಕರ್ತರಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.ಸಂದ ಪ್ರಶಸ್ತಿ ಇಡೀ ಬೆಳಗಾವಿ ಜಿಲ್ಲೆಗೆ ಸೇರಿದ್ದು: ಶ್ರೀಕಾಂತ

ರಾಜಕೀಯ, ಶಿಕ್ಷಣ, ಪತ್ರಿಕೋದ್ಯಮ ಮಾತ್ರವಲ್ಲ ಎಲ್ಲ ರಂಗಗಳಲ್ಲೂ ದೊಡ್ಡ ಸದ್ದು ಮಾಡುವ ಜಿಲ್ಲೆ ಬೆಳಗಾವಿ. ಇಲ್ಲಿನ ಪತ್ರಿಕಾ ರಂಗದ ಹಿರಿಯರು ಕಿರಿಯರನ್ನು ಬೆಳೆಸುತ್ತ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರನ್ನೂ ಸರ್ಕಾರ ಗುರುತಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಶ್ರೀಕಾಂತ ಕುಬಕಡ್ಡಿ ಹೇಳಿದರು.ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿ ಪುರಸ್ಕೃತೆ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯೆ ಕೀರ್ತಿ ಶೇಖರ ಕಾಸರಗೋಡು ಮಾತನಾಡಿ, ಹೊಸ ವರ್ಷದ ಆರಂಭದಲ್ಲೇ ಸಾಲು ಸಾಲಾಗಿ ಪುರಸ್ಕಾರ ಸಿಕ್ಕಿದ್ದಷ್ಟೇ ಖುಷಿಯಾಗಿದೆ. ಬೆಳಗಾವಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂವರು ಪತ್ರಕರ್ತರಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಬೇಕು. ಈ ಪೈಕಿ ಒಂದು ಪ್ರಶಸ್ತಿಯನ್ನು ಮಹಿಳೆಗೆ ಮೀಸಲಿರಿಸಬೇಕು. ಅದಕ್ಕೆ ನಾನು ವೈಯಕ್ತಿಕವಾಗಿ ದತ್ತಿನಿಧಿ ಕೊಡುವೆ ಎಂದು ಭರವಸೆ ನೀಡಿದರು.ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪುರಸ್ಕೃತ ಪುಂಡಲೀಕ ಬಾಳೋಜಿ ಮಾತನಾಡಿ, ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಅದನ್ನು ನಿಭಾಯಿಸಲು ಪ್ರಯತ್ನಿಸುವೆ ಎಂದು ತಿಳಿಸಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಭಿವೃದ್ಧಿ ಪತ್ರಿಕೋದ್ಯಮ ವರದಿಗಾರಿಕೆಗೆ ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದ ನೌಶಾದ ಬಿಜಾಪುರ ಅವರನ್ನೂ ಅಭಿನಂದಿಸಲಾಯಿತು.ಹಿರಿಯ ಪತ್ರಕರ್ತ ಕೆ.ಸುರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡಪ್ರಭ ಬೆಳಗಾವಿ ಬ್ಯೂರೋ ಮುಖ್ಯಸ್ಥರಾದ ಬ್ರಹ್ಮಾನಂದ ಹಡಗಲಿ ಮಾತನಾಡಿದರು. ಪತ್ರಕರ್ತರಾದ ಶ್ರೀಶೈಲ ಮಠದ, ಮೆಹಬೂಬ್‌ ಮಕಾನದಾರ, ಮುನ್ನಾ ಬಾಗವಾನ, ಮಲ್ಲಿಕಾರ್ಜುನ ಮುಗಳಿ, ಮುರುಗೇಶ ಶಿವಪೂಜಿ, ಲೂಯಿಸ್‌ ರಾಡ್ರಿಗ್ಸ್‌, ಭೈರೋಬಾ ಕಾಂಬಳೆ, ಕುಂತಿನಾಥ ಕಲಮನಿ ಮತ್ತಿತರರು ಮಾತನಾಡಿದರು. ರವೀಂದ್ರ ಉಪ್ಪಾರ ನಿರೂಪಿಸಿದರು.-------------

ಕೋಟ್‌...

ಪತ್ರಕರ್ತರು ಸರಿಯಾದ ಪಥದಲ್ಲಿ ತಮ್ಮ ವೃತ್ತಿ ನಿಭಾಯಿಸುವ ಜತೆಗೆ, ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೂ ಧಾವಿಸಬೇಕು. ಮಾಧ್ಯಮ ಮಿತ್ರರನ್ನು ಅಭದ್ರತೆ ಭಾವದಲ್ಲಿ ಇರುತ್ತಾರೆ. ಅನಾರೋಗ್ಯ, ಅಪಘಾತ ಮತ್ತಿತರ ಗಂಭೀರ ಸಮಸ್ಯೆಗೆ ಸಿಲುಕಿದರೇ ಮಾನಸಿಕವಾಗಿ ಕುಗ್ಗುತ್ತಾರೆ. ಕೆಲವೊಮ್ಮೆ ಪತ್ರಕರ್ತರನ್ನೇ ನೆಚ್ಚಿಕೊಂಡಿದ್ದ ಅವರ ಕುಟುಂಬಗಳು ನಾನಾ ಸಮಸ್ಯೆ ಎದುರಿಸುತ್ತವೆ. ಆಗ ಪ್ರತಿಯೊಬ್ಬರೂ ಸಣ್ಣ, ಸಣ್ಣ ಸಹಾಯವನ್ನಾದರೂ ಮಾಡಬೇಕು. ಸಂಘಟನೆಯೇ ನಮ್ಮ ಬಲವಾಗಬೇಕು. ಎಲ್ಲರೂ ಒಂದಾಗಿ, ನೊಂದವರಿಗೆ ಬೆನ್ನಿಗೆ ನಿಲ್ಲಬೇಕಿದೆ.

-ಹೃಷಿಕೇಶ ಬಹದ್ದೂರ ದೇಸಾಯಿ, ಹಿರಿಯ ಪತ್ರಕರ್ತರು.

ಉತ್ತರ ಕರ್ನಾಟಕ ಪತ್ರಕರ್ತರು ಸರ್ಕಾರಿ ಪುರಸ್ಕಾರ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಪತ್ರಕರ್ತರಿಗಾಗಿ ಇರುವ ಪ್ರಶಸ್ತಿ, ಪುರಸ್ಕಾರ, ಫೆಲೊಷಿಪ್‌ಗಳ ಬಗ್ಗೆ ಮಾಹಿತಿ ಹಂಚಿಕೆ ಆಗಬೇಕಿದೆ.

-ಗುರುನಾಥ ಕಡಬೂರ, ಉಪನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.

-----------------ಬಾಕ್ಸ್‌.....

ವೃತ್ತಿಯಲ್ಲಿ ತಂತ್ರಜ್ಞಾನದ ಪ್ರಾವಿಣ್ಯತೆ ಪಡೆದಕೊಳ್ಳಿ: ಹೃಷಿಕೇಶಬೆಳಗಾವಿ: ಭವಿಷ್ಯದ ಪತ್ರಿಕೋದ್ಯಮದಲ್ಲಿ ಪತ್ರಿಕೆಗಳ ಹಾಗೂ ಪತ್ರಕರ್ತರ ನಡುವೆ ಪೈಪೋಟಿ ನಡೆಯದೇ ನಾವೆಲ್ಲರೂ ತಂತ್ರಜ್ಞಾನದ ಜತೆಗೆ ಪೈಪೋಟಿ ನಡೆಸುವ ಕಾಲ ಬರಬಹುದು. ವೃತ್ತಿಯಲ್ಲಿ ತಂತ್ರಜ್ಞಾನದ ಬಗ್ಗೆ ಪ್ರಾವಿಣ್ಯತೆ ಪಡೆದಕೊಳ್ಳುವುದು ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಹೇಳಿದರು.ಬೆಳಗಾವಿಯ ಕನ್ನಡಪ್ರಭ ಕಚೇರಿಯಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಯೋತ್ಪಾದನೆ ಎಂಬ ಪದವನ್ನು ಕನ್ನಡಪ್ರಭವೇ ಮೊದಲು ಬಳಕೆ ಮಾಡಿದ್ದು, ಹಾಗೆಯೇ ಪರ್ಷಿಯನ್‌ ಪದವಾದ ಪರಭಾರೆ ಪದಕ್ಕೆ ಕನ್ನಡದ ಅನ್ಯಮಾನ್ಯ ಸೇರಿದಂತೆ ಹಲವು ಪದಗಳ ಪ್ರಯೋಗವನ್ನು ಕನ್ನಡಪ್ರಭ ಬಳಕೆ ಮಾಡಿರುವ ಕುರಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಪತ್ರಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಶ್ರೀಕಾಂತ ಕುಬಕಡ್ಡಿ ಮತ್ತು ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಕೀರ್ತಿ ಶೇಖರ ಕಾಸರಗೋಡು ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಬೆಳಗಾವಿ ಕನ್ನಡಪ್ರಭ ಆವೃತ್ತಿ ಮುಖ್ಯಸ್ಥರಾದ ಬ್ರಹ್ಮಾನಂದ ಹಡಗಲಿ, ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರ ಶ್ರೀಶೈಲ ಮಠದ, ಏಷ್ಯಾನೆಟ್‌ ಸುವರ್ಣನ್ಯೂಸ್‌ ವರದಿಗಾರ ಅನಿಲ ಕಾಜಗಾರ, ಕ್ಯಾಮೆರಾಮನ್‌ ಅಡಿವೇಶ ಪಾಟೀಲ, ಪತ್ರಿಕಾ ಛಾಯಾಗ್ರಾಹಕ ವಿಜಯ ಮೋಹಿತೆ ಸೇರಿದಂತೆ ಕನ್ನಡಪ್ರಭ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಕೋಟ್....

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಕನ್ನಡಪ್ರಭ ಕಚೇರಿಗೆ ಆಹ್ವಾನಿಸಿ, ಸನ್ಮಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಕನ್ನಡಪ್ರಭ ಮುನ್ನುಡಿ ಹಾಕಿದೆ. ಕನ್ನಡಪ್ರಭ ಬಳಗಕ್ಕೆ ಅಭಿನಂದನೆಗಳು.

-ಹೃಷಿಕೇಶ ಬಹದ್ದೂರ ದೇಸಾಯಿ, ಹಿರಿಯ ಪತ್ರಕರ್ತ.