ಪಾರಂಪರಿಕ ವೃತ್ತಿಯವರಿಗೆ ಪ್ರೋತ್ಸಾಹ ಹೆಚ್ಚಬೇಕು: ಕೆ.ಎಸ್.ಆನಂದ್

| Published : Apr 20 2025, 02:04 AM IST

ಸಾರಾಂಶ

ಕಡೂರು, ತಮ್ಮ ಕೌಶಲ್ಯದಿಂದ ಗ್ರಾಮೀಣ ಭಾಗಗಳಲ್ಲಿ ಪಾರಂಪರಿಕ ವೃತ್ತಿ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮತ್ತಷ್ಟು ಹೆಚ್ಚಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರು ಎಪಿಎಂಸಿ ಆವರಣದಲ್ಲಿ 119 ಫಲಾನುಭವಿಗಳಿಗೆ ಸರ್ಕಾರದ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ ಕಡೂರು

ತಮ್ಮ ಕೌಶಲ್ಯದಿಂದ ಗ್ರಾಮೀಣ ಭಾಗಗಳಲ್ಲಿ ಪಾರಂಪರಿಕ ವೃತ್ತಿ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮತ್ತಷ್ಟು ಹೆಚ್ಚಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಶನಿವಾರ ಕಡೂರು ಎಪಿಎಂಸಿ ಆವರಣದಲ್ಲಿ ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ಕ್ಷೌರಿಕ, ಕಾರ್ ಪೆಂಟರ್, ಡೋಬಿ, ಗಾರೆ ಕೆಲಸ ಮಾಡುವ 119 ಫಲಾನುಭವಿಗಳಿಗೆ ಸರಕಾರ ನೀಡುವ ಕಿಟ್ ವಿತರಿಸಿ ಮಾತನಾಡಿದರು.ಗ್ರಾಮೀಣ ಭಾಗಗಳಲ್ಲಿ ಈ ಕೆಲಸ ಮಾಡುತ್ತಿರುವವರಿಗೆ ಸರ್ಕಾರ ಪರಿಕರಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಆದರೆ ಈಗ ನೀಡುತ್ತಿರುವ ಪರಿಕರಗಳಿಗೆ ಕಾಲಮಾನಕ್ಕೆ ತಕ್ಕಂತೆ ಆಧುನಿಕ ಸ್ಪರ್ಶ ನೀಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಪ್ರಸ್ತುತ ಸುಮಾರು ಈ ಪರಿಕರಗಳ ಬೆಲೆ 8 ಸಾವಿರ ಇದ್ದು, ಇದರ ಮೊತ್ತ ಹೆಚ್ಚಬೇಕು. ಗುಣಮಟ್ಟದ ಪರಿಕರಗಳು ದೊರೆಯಬೇಕು. ಈ ಕುರಿತು ನಮ್ಮ ಮುಖ್ಯಮಂತ್ರಿಗಳ ಗಮನಕ್ಕೂ ತರಲು ಮುಂದಾಗುತ್ತೇನೆ ಎಂದರು.

ಗ್ರಾಮೀಣ ಕೈಗಾರಿಕೆ ಇಲಾಖೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಒಟ್ಟು 119 ವಿವಿಧ ಪಲಾನುಭವಿಗಳಿಗೆ ಪರಿಕರಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಒಟ್ಟು ₹9.50 ಲಕ್ಷ ಮೊತ್ತದ ಕಿಟ್ ಗಳನ್ನು ವಿತರಿಸ ಲಾಗುತ್ತಿದೆ ಎಂದು‌ ವಿವರ ನೀಡಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್.ರುದ್ರೇಗೌಡ, ಪುಟ್ಟೇಗೌಡ, ತೀರ್ಥಾಚಾರ್, ಗೋಪಾಲಾ ಚಾರ್ ಸೇರಿದಂತೆ ಮತ್ತಿತರರು ಇದ್ದರು.

19ಕೆಕೆಡಿಯು1.

ಶಾಸಕ ಕೆ.ಎಸ್.ಆನಂದ್ ರವರು ಕಡೂರು ಎಪಿಎಂಸಿ ಆವರಣದಲ್ಲಿ ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ 119 ಫಲಾನುಭವಿಗಳಿಗೆ ಸರಕಾರದ ಕಿಟ್ ವಿತರಿಸಿದರು.