ಮಕ್ಕಳಿಗೆ ನೀಡುವ ಪ್ರೋತ್ಸಾಹ ಸಾಧನೆಗೆ ಪ್ರೇರಣೆ

| Published : Dec 28 2023, 01:47 AM IST

ಸಾರಾಂಶ

ಮಕ್ಕಳಿಗೆ ನೀಡುವ ಪ್ರೋತ್ಸಾಹ ಸಾಧನೆಗೆ ಪ್ರೇರಣೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಶಾಲೆಯ ಕಲಿಕಾ ಪ್ರಕ್ರಿಯೆಗಳಿಗೆ ಜೀವಂತಿಕೆ ತುಂಬುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು, ಹಿರಿಯರು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳಿಗೆ ನೀಡುವ ಪ್ರೋತ್ಸಾಹ, ಮಕ್ಕಳ ಸಾಧನೆಗೆ ಪ್ರೇರಣೆಯಾಗುತ್ತದೆ. ಅಲ್ಲದೆ, ಮಕ್ಕಳ ಕಲಿಕೆಯಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದು ಶಿಕ್ಷಕ ಆಸ್ಪಾಕ್ ನಾಯಿಕವಾಡಿ ಹೇಳಿದರು.

ತಾಲೂಕಿನ ಹಳಿಂಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಳೆ ವಿದ್ಯಾರ್ಥಿ ಕುಟುಂಬದ ಹಿರಿಯಜೀವಿ ಮಹಾವೀರ ದೇಸಾಯಿ ಅವರು ಬಡಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾವೀರ ದೇಸಾಯಿ ಮಾತನಾಡಿ, ಮಕ್ಕಳ ಕಲಿಕೆಗಾಗಿ ಬಡತನ ಅಡ್ಡಿಯಾಗಬಾರದೆಂಬ ಏಕೈಕ ಉದ್ದೇಶದಿಂದ ಕಲಿಕೆಯಲ್ಲಿ ಪ್ರಗತಿ ಹೊಂದಲು ನೆರವಾಗಲು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸುವುದು ಖುಷಿ ಎನಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮುಖ್ಯಗುರು ಪಾಂಡುರಂಗ ಪತ್ತಾರ, ಸಹಶಿಕ್ಷಕರಾದ ಎಸ್.ಎಸ್.ಹುದ್ದಾರ, ಎಂ.ಬಿ.ಆಲಬಾಳ, ಎ.ಬಿ.ಕಂಚಗೊಂಡ ಇದ್ದರು.