ಸಾರಾಂಶ
ಹೊಳೆಹೊನ್ನೂರು: ರೈತರ ಸಾಗುವಳಿ ಜಮೀನುಗಳಿಗೆ ಅರಣ್ಯ ಇಲಾಖೆ ಅತಿಕ್ರಮಿಸಬಾರದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಮೀಪದ ಲಕ್ಷ್ಮೀಪುರ ಸೇರಿದರಂತೆ ಯಡೇಹಳ್ಳಿ ಭಾಗದಲ್ಲಿ ಅರಣ್ಯ ಗಡಿ ಕಲ್ಲು ನೆಡುವ ಕಾಮಗಾರಿ ವಿರೋಧಿಸಿ ರೈತರು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಾವಿನಕಟ್ಟೆ ಉಪ ವಯಲ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಅರಣ್ಯಾಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.ಲಕ್ಷ್ಮೀಪುರ, ಯಡೇಹಳ್ಳಿ, ಅಶೋಕ ನಗರ ಭಾಗದಲ್ಲಿ ಶರಾವತಿ ಮುಳುಗಡೆ ನಿರಾಶ್ರಿತರಿದ್ದಾರೆ. ಮುಳುಗಡೆ ಸಂತ್ರಸ್ತರಿಗೂ ನೋಟಿಸ್ ನೀಡಿದ್ದಾರೆ. ಅಲ್ಲದೆ ಭೂಮಿ ಮಂಜೂರಾತಿ ಪ್ರಶ್ನಿಸಿ ಹೂಡಿದ ದಾವೆಗಳು ನ್ಯಾಯಾಲಯದಲ್ಲಿವೆ. ಆ ಭಾಗದ ರೈತಾಪಿಗಳು ಕಲ್ಲು ನೆಡುವುದು ಬೇಡವೆಂದರೂ ಅರಣ್ಯಾಧಿಕಾರಿಗಳು ರೈತರೊಂದಿಗೆ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿರುವುದು ಒಳ್ಳೇಯ ಬೆಳವಣಿಗೆಯಲ್ಲ ಎಂದರು.ರಾಜ್ಯದಲ್ಲಿ ಎಲ್ಲೂ ಇಲ್ಲದ ವಿಶೇಷ ಕಾನೂನು ಅರಣ್ಯ ಅಧಿಕಾರಿಗಳಿಗೆ ನೀಡಿದಂತೆ ಕಾಣುತ್ತಿದೆ. ಕಳೆದೆರಡು ತಿಂಗಳ ಹಿಂದೆ ಅರಣ್ಯ ಮಂತ್ರಿಗಳನ್ನು ಭೇಟಿ ಮಾಡಿದಾಗ ಜಿಲ್ಲೆಯಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸಾಗುವಳಿದಾರರ ಬೆನ್ನಿಗೆ ನಿಂತಿದ್ದರು. ಅರಣ್ಯಾಧಿಕಾರಿಗಳು ಅರಣ್ಯ ಮಂತ್ರಿಗಳ ಮಾತಿಗೂ ಬೆಲೆ ನೀಡದೆಂತೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.ಪರಿಸ್ಥಿತಿ ಹೀಗೆ ಮುಂದುವರೆದರೆ ಗ್ರಾಮೀಣ ಭಾಗದಲ್ಲಿ ರೈತರು ಹಾಗೂ ಅರಣ್ಯ ಸಿಬ್ಬಂದಿಗಳ ನಡುವೆ ಸಂಘರ್ಷಕ್ಕೆ ತಾರಕ್ಕೆರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರೈತರ ಜಮೀನಿನಲ್ಲಿ ಕಲ್ಲು ನೆಡಲು ಮುಂದಾಗುವ ಅರಣ್ಯ ಸಿಬ್ಬಂದಿಯನ್ನು ತಡೆದು ವಾಪ್ಪಾಸ್ ಕಳಿಸಿ ಯಾವುದೇ ಕಾರಣಕ್ಕೂ ಕಲ್ಲು ನೆಡಲು ಬಿಡಬಾರದು ಎಂದರು.ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ್ ಮಾತನಾಡಿ, ಸಾಗುವಳಿ ರೈತರ ಸಾಗುವಳಿ ಜಮೀನುಗಳಲ್ಲಿ ಕಾರ್ಯಾಚರಣೆ ಮಾಡದಂತೆ ಹತ್ತಾರು ಬಾರಿ ಮನವಿ ಮಾಡಿದರೂ ಇಲಾಖೆ ಸುಮ್ಮನಾಗುತ್ತಿಲ್ಲ. ರಾಜ್ಯದಲ್ಲಿ ಎಲ್ಲೂ ಇಲ್ಲದ ಸಾಗುವಳಿ ಸಮಸ್ಯೆ ಗ್ರಾಮಾಂತರ ಭಾಗದಲ್ಲೆ ಜಾಸ್ತಿಯಾಗುತ್ತಿದೆ ಎಂದು ಬೇಸವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ದಿನೇದಿನೆ ಅರಣ್ಯಾಧಿಕಾರಿಗಳ ಉಪಟಳ ಹೆಚ್ಚಾಗುತ್ತಿದೆ. ರೈತಾಪಿಗಳ ಸಾಗುವಳಿ ಜಮೀನುಗಳನ್ನು ಆಕ್ರಮಿಸಿಕೊಳ್ಳಲು ಅರಣ್ಯ ಇಲಾಖೆ ವ್ಯವಸ್ಥಿತ ಸಂಚು ರೂಪಿಸಿದಂತೆ ಕಾಣುತ್ತಿದೆ. ಹತ್ತಾರು ದಶಕಗಳ ಸಾಗುವಳಿಯನ್ನು ಪ್ರಶ್ನೆ ಮಾಡಿ ಗಡಿ ಗುರುತು ಮಾಡಲು ಮುಂದಾಗುತ್ತಾರೆ ಎಂದರೆ ರೈತರ ಪಾಡೇನಾಗಬೇಡ. ಗಡಿ ಕಲ್ಲು ನಡೆವ ವಿಚಾರದಲ್ಲಿ ಅರಣ್ಯಾಧಿಕಾರಿಗಳು ಮೊಂಡಾಟ ಮಾಡುತ್ತಿರುವುದು ಸರಿಯಲ್ಲ ಎಂದು ಸ್ಥಳದಲ್ಲಿದ ಅರಣ್ಯಾಧಿಕಾರಿ ಉಷಾರನ್ನು ತೀರ್ವವಾಗಿ ತರಾಟೆಗೆ ತೆಗೆದುಕೊಂಡರು.ಮತ್ತೇ ಕಲ್ಲು ನೆಡಲು ಬಂದಿದರು ಎಂದು ರೈತರು ಸಭೆಗೆ ತಿಳಿಸಿದರಿಂದ ಕೆಲ ಕಾಲ ಗೊಂದಲ ವಾತವರಣ ಉಂಟಾಯಿತ್ತು. ರೈತರನ್ನು ಸಮಾಧಾನ ಮಾಡಿದ ಶಾಸಕಿ ಶಾರದ ಪೂರ್ಯನಾಯ್ಕ್, ಗ್ರಾಮಾಂತರದಲ್ಲಿ ರೈತರನ್ನು ಒಕ್ಕೆಲೆಬ್ಬಿಸಲು ಬಿಡುವುದಿಲ್ಲ ರೈತರು ದೃತಿಗೆಡಬಾರದು ಎಂದರು.ಪರಿಷತ್ ಸದಸ್ಯ ಡಿ.ಎಸ್.ಅರುಣ್. ಮುಖಂಡ ಸುಬ್ರಮಣ್ಣಿ, ಡಿ.ಮಂಜುನಾಥ್, ನಾಗೇಶ್ವರರಾವ್, ವಡ್ನಾಳ್ ಅಶೋಕ್, ವಿಜಯ್‌ಸರ್ಜಿ, ಸಾಯಿಪ್ರಸಾದ್, ಜಯಪ್ಪ, ಮಂಜುನಾಥ್, ಸೋಮಶೇಖರ್, ಬಸೋಜಿರಾವ್, ಯಲ್ಲೋಜಿರಾವ್ ಇತರರಿದ್ದರು.