ಸಾರಾಂಶ
ಲೋಕಸಭಾ ಚುನಾವಣೆ ಹಿನ್ನೆಲೆ ಬೇರೆಡೆಯಿಂದ ಹೊನ್ನಾಳಿಗೆ ವರ್ಗಾವಣೆಯಾಗಿ, ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ಪುರಂದರ ಹಾಗೂ ನ್ಯಾಮತಿ ತಾಲೂಕಿನ ತಹಸೀಲ್ದಾರ್ ಫಿರೋಜ್ ಷಾ ಅವರು ಚುನಾವಣೆ ಮುಕ್ತಾಯ ಹಿನ್ನೆಲೆ ಸರ್ಕಾರದ ಆದೇಶದಂತೆ ಪುರಂದರ ಅವರು ಪುತ್ತೂರು ಹಾಗೂ ಫಿರೋಜ್ ಷಾ ಅವರು ಬ್ಯಾಡಗಿ ತಾಲೂಕಿಗೆ ವರ್ಗಾವಣೆಗೊಂಡರು. ಈ ಹಿನ್ನೆಲೆ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಎಲ್ಲ ನೌಕರರು ಉಭಯ ತಹಸೀಲ್ದಾರರನ್ನು ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.
- ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಂದಾಯ ನೌಕರರಿಂದ ಅಧಿಕಾರಿಗಳಿಗೆ ಸನ್ಮಾನ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಲೋಕಸಭಾ ಚುನಾವಣೆ ಹಿನ್ನೆಲೆ ಬೇರೆಡೆಯಿಂದ ಹೊನ್ನಾಳಿಗೆ ವರ್ಗಾವಣೆಯಾಗಿ, ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್ ಪುರಂದರ ಹಾಗೂ ನ್ಯಾಮತಿ ತಾಲೂಕಿನ ತಹಸೀಲ್ದಾರ್ ಫಿರೋಜ್ ಷಾ ಅವರು ಚುನಾವಣೆ ಮುಕ್ತಾಯ ಹಿನ್ನೆಲೆ ಸರ್ಕಾರದ ಆದೇಶದಂತೆ ಪುರಂದರ ಅವರು ಪುತ್ತೂರು ಹಾಗೂ ಫಿರೋಜ್ ಷಾ ಅವರು ಬ್ಯಾಡಗಿ ತಾಲೂಕಿಗೆ ವರ್ಗಾವಣೆಗೊಂಡರು. ಈ ಹಿನ್ನೆಲೆ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಎಲ್ಲ ನೌಕರರು ಉಭಯ ತಹಸೀಲ್ದಾರರನ್ನು ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಟ್ಟರು.ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಈ ಸಂದರ್ಭ ಮಾತನಾಡಿ, ಎಲ್ಲ ಸರ್ಕಾರಿ ಅಧಿಕಾರಿಗಳು, ನೌಕರರು ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲೇಬೇಕು. ಅದರಲ್ಲೂ ಚುನಾವಣೆಯಂತಹ ಮಹತ್ತರ ಸಂದರ್ಭ ಪರಸ್ಪರ ಸಹಕಾರ, ಅನ್ಯೂನ್ಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಚುನಾವಣೆಯಂಥ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎಂದರು.
ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಎಲ್ಲ ನೌಕರರು ಸೇರಿದಂತೆ ವರ್ಗಾವಣೆಯಾಗಿರುವ ಹೊನ್ನಾಳಿ ತಹಸೀಲ್ದಾರ್ ಪುರಂದರ ಮತ್ತು ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ ಅವರ ಕಾರ್ಯತತ್ಪರತೆ, ಪ್ರಾಮಾಣಿಕತೆ, ಅನ್ಯೂನ್ಯತೆಯನ್ನು ಅವಳಿ ತಾಲೂಕಿನ ಕಂದಾಯ ಇಲಾಖೆ ನೌಕರರು ಎಂದಿಗೂ ಮರೆಯುವಂತಿಲ್ಲ. ಅವರು ಕೆಲ ತಿಂಗಳಷ್ಟೇ ಇಲ್ಲಿ ಸೇವೆ ಸಲ್ಲಿಸಿರಬಹುದು. ಆದರೆ, ಅವರ ಕೆಲಸಗಳ ವಿಚಾರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಆಡಳಿತದಲ್ಲಿ ಮೂಡಿಸಿರುವುದು ಗಮನೀಯ ಎಂದು ಶ್ಲಾಘಿಸಿದರು.ಪುರಂದರ್ ಹಾಗೂ ಫಿರೋಜ್ ಷಾ ಅವರು ಮಾತನಾಡಿ, ಸ್ಥಳೀಯ ಅಧಿಕಾರಿಗಳು, ನೌಕರರು ಹಾಗೂ ಮಾಧ್ಯಮದವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾಗಿ ಸಹಕರಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಅಧಿಕಾರ ವಹಿಸಿಕೊಂಡ ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಹೊನ್ನಾಳಿ ಗ್ರೇಡ್-2 ತಹಸೀಲ್ದಾರ್ ಸುರೇಶ್ ಸೇರಿದಂತೆ ದಿನೇಶ್ ಬಾಬು, ಚಂದ್ರಪ್ಪ, ನಾಗರಾಜ್, ರಫೀಕ್, ಕಂದಾಯ ಇಲಾಖೆ ನೌಕರರು ಮಾತನಾಡಿದರು.- - - -15ಎಚ್.ಎಲ್.ಐ2.:
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಂದ ಬೇರೆಡೆಗೆ ವರ್ಗಾವಣೆಯಾದ ತಹಸೀಲ್ದಾರ್‌ಗಳಾದ ಪುರಂದರ ಹಾಗೂ ಫಿರೋಜ್ ಷಾ ಅವರಿಗೆ ಉಪವಿಭಾಗಾಧಿಕಾರಿ ಅಭಿಷೇಕ್ ನೇತೃತ್ವದಲ್ಲಿ ಕಂದಾಯ ಇಲಾಖೆ ನೌಕರರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.