ಮೊಸರಿನ ಗಡಿಗೆ ಒಡೆದು ರಂಗಿನಾಟ ಸಂಪನ್ನ

| Published : Mar 26 2024, 01:18 AM IST

ಸಾರಾಂಶ

ಹೊಳಿ ಹಬ್ಬದ ನಿಮಿತ್ತ ಸೋಮವಾರ ನಡೆದ ರಂಗಿನಾಟ, ಭಾರತ ಚೌಕನಲ್ಲಿ ಮೊಸರಿನ ಗಡಿಗೆ ಒಡೆಯುವದರೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭವಾರ್ತೆ ಶಹಾಬಾದ

ನಗರದಲ್ಲಿ ಹೊಳಿ ಹಬ್ಬದ ನಿಮಿತ್ತ ಸೋಮವಾರ ನಡೆದ ರಂಗಿನಾಟ, ಭಾರತ ಚೌಕನಲ್ಲಿ ಮೊಸರಿನ ಗಡಿಗೆ ಒಡೆಯುವದರೊಂದಿಗೆ ಸಂಪನ್ನಗೊಂಡಿತು.

ಭಾನುವಾರ ರಾತ್ರಿ ಪ್ರತಿ ವೃತ್ತ, ದೇವಸ್ಥಾನಗಳ ಮುಂದೆ ಕಾಮದಹನ ಮಾಡಿದರು. ಬೆಳಗ್ಗೆ ನಗರದ ವಿವಿಧ ವೃತ್ತಗಳಿಂದ ಯುವಕರು ಟ್ಯಾಕ್ಟರನಲ್ಲಿ ಬ್ಯಾರಗಳನ್ನು ಇಟ್ಟುಕೊಂಡು, ಕೋಲಾಟ, ಭಜನೆಯೊಂದಿಗೆ ವಿವಿಧ ಬಣ್ಣಗಳನ್ನು ಎರಚುತ್ತ ನಗರದ ಮುಖ್ಯ ರಸ್ತೆ, ಶ್ರೀರಾಮ ವೃತ್ತ, ತ್ರಿಶೂಲ ವೃತ್ತ, ಮಜೀದ ಚೌಕ, ಸೋಲಾಪೂರ ಹೋಟಲ್ ಚೌಕ ಮೂಲಕ ಭಾರತ ಚೌಕಗೆ ಆಗಮಿಸಿದರು.

ಭಾರತ ಚೌಕನಲ್ಲಿ ಎತ್ತಕ್ಕೆ ಕಟ್ಟಿದ್ದ ಮೊಸರಿನ ಗಡಿಗೆಯನ್ನು ಯುವಕರು ಮಾನವ ಪಿರಾಮಿಡ್ಡ ರಚಿಸಿ, ಒಡೆದ ನಂತರ ರಂಗಿನಾಟ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ವಿಹಿಂಪ ಅಧ್ಯಕ್ಷ ಕನಕಪ್ಪ ದಂಡಗುಕರ್, ಗೌರವ ಅಧ್ಯಕ್ಷ ಚಂದ್ರಕಾಂತ ಗೊಬ್ಬುರಕರ್, ಮಾಜಿ ಅಧ್ಯಕ್ಷ ಬಸವರಾಜ ಸಾತೀಹಾಳ, ನರೇಂದ್ರ ವರ್ಮಾ, ರಾಜೇಶ ವರ್ಮಾ, ಡಾ.ಅಶೋಕ ಜಿಂಗಾಡೆ, ನಾಗರಾಜ ಮೇಲಗಿರಿ, ಸುಭಾಷ ಚೌಧರಿ, ಸುಭಾಷ ಜಾಪೂರ, ಭಾನುದಾಸ ತುರೆ, ಸೋಮಶೇಖರ ಧನಶೆಟ್ಟಿ, ಸೂರ್ಯಕಾಂತ ಕೋಬಾಳ, ರಾಜು ಕೋಬಾಳ,ಅನೀಲ ಹೀಬಾರೆ, ಗಿರಿರಾಜ ಪವಾರ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಧೂಳಂಡಿ ಆಚರಣೆ ಹಿನ್ನೇಲೆಯಲ್ಲಿ ಎಎಸ್‍ಪಿ ಎಂ.ಶ್ರೀನಿಧಿ, ಡಿವೈಎಸ್‍ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ವಿಜಯಕುಮಾರ ಬಾವಗಿ, ಎಎಸ್‍ಐ ಶ್ರೀಕಾಂತ ನಾಯಕ, ಗುಂಡಪ್ಪ, ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಬಾರಿ ಹೊಳಿಯ ರಂಗಿನಾಟದಿಂದ ಹೆಚ್ಚು ಜನ ಚಿಣ್ಣರೂ ದೂರ ಉಳಿದರು. ಸೋಮವಾರ ದಿನವೆ, 10ನೇ ಪರೀಕ್ಷೆ ಮಧ್ಯಾಹ್ನ 5, 8.9 ನೇ ತರಗತಿಗಳಿಗೆ ಬೋರ್ಡ ಪರೀಕ್ಷೆ ಇದ್ದುದ್ದರಿಂದ ಹರ್ಷದಿಂದ ಬಣ್ಣ ಆಡಬೇಕಾದ ಮಕ್ಕಳು ಮನೆಯಿಂದ ಹೊರಗೆ ಬರಲಿಲ್ಲ, ಇದರಿಂದ ಬಣ್ಣ ಆಡುವನಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಂಡು ಬಂದಿತು.