ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆ ದೇಶದಲ್ಲಿಯೇ ಮಾದರಿಯಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರ ಉಚಿತವಾಗಿ ಬಸ್ ಪ್ರಯಾಣಕ್ಕೆ ಸೌಲಭ್ಯ ಕಲ್ಪಿಸಿ ಯಶಸ್ವಿಯಾಗಿ ೨ ವರ್ಷ ಕಳೆದಿದ್ದು, 500 ಕೋಟಿ ಶೂನ್ಯ ಬಿಲ್ ನೀಡಲಾಗಿದೆ.
ಕುಕನೂರು:
ಸಾರಿಗೆ ಸಂಸ್ಥೆಗೆ ಶಕ್ತಿ ಯೋಜನೆ ಲಾಭದಾಯವಾಗಿದೆ. ಇದರಿಂದ ನಷ್ಟದಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಭದಲ್ಲಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳಾ ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ 500 ಕೋಟಿಗೆ ತಲುಪಿದ ಹಿನ್ನಲೆ ಸಂಭ್ರಮಾಚರಿಸಿ ಮಾತನಾಡಿದ ಅವರು, ಕುಕನೂರು ಡಿಪೋಗೆ ಸಂಬಂಧಿಸಿದಂತೆ 2 ವರ್ಷದಲ್ಲಿ 92 ಲಕ್ಷ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಿಸಿದ್ದಾರೆ. ಇದಕ್ಕೆ ₹ 34 ಕೋಟಿಯನ್ನು ಸರ್ಕಾರ ಭರಿಸಿದೆ.ಮಹಿಳಾ ಉಚಿತ ಪ್ರಯಾಣದ ಹಣವನ್ನು ಸರ್ಕಾರ ಸಾರಿಗೆ ಸಂಸ್ಥೆಗೆ ಭರಿಸುತ್ತಿದ್ದು ಸಂಸ್ಥೆಯ ಲಾಭ ಸಹ ಹೆಚ್ಚಿದ್ದು, ಹೊಸ ಬಸ್ ಖರೀದಿಸಲಾಗುತ್ತಿದೆ ಎಂದರು.
ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು. ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಖಾಸಿಂಸಾಬ್ ತಳಕಲ್, ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆಳಿನ್, ಡಿಪೊ ವ್ಯವಸ್ಥಾಪಕ ಸೋಮಶೇಖರ ಬಿ, ಉಪತಹಸೀಲ್ದಾರ್ ಮುರುಳೀಧರಾವ್, ಕಂದಾಯ ನಿರೀಕ್ಷಕ ರಂಗನಾಥ, ಪಪಂ ಸದಸ್ಯರಾದ ಸಿರಾಜ್ ಕರಮುಡಿ, ರಾಮಣ್ಣ ಬಂಕದಮನಿ, ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ, ರೆಹೆಮಾನಸಾಬ್ ಮಕ್ಕಪ್ಪರ್ರರ್, ವೀರಯ್ಯ ತೋಂಟದಾರ್ಯಮಠ, ಸಂತೋಷ ಬಿನ್ನಾಳ, ಅಮರೇಶ ತಲ್ಲೂರು, ಮಂಜುನಾಥ ಯಡಿಯಾಪೂರ, ಹೊನ್ನಪ್ಪ ಮರಡಿ. ಡಿಪೋ ಸಿಬ್ಬಂದಿ, ಚಾಲಕರು, ನಿರ್ವಾಹಕರು ಹಾಗೂ ಇದ್ದರು.