ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ಅಪರಾಧಗಳಿಗೆ ಸರ್ಕಾರ ಕಾರಣವಲ್ಲ. ಇಂತಹ ಪ್ರಕರಣಗಳಿಗೆ ಪ್ರಚೋದನೆ ನೀಡುವುದಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಆರೋಪ ಬೇಡ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಧಾರವಾಡ:

ಸರ್ಕಾರ ಸಮಾಜಕ್ಕೆ ಎಲ್ಲ ರೀತಿಯ ಸೌಲಭ್ಯ ನೀಡಿದರೂ ಉಳ್ಳವರು ಸರ್ಕಾರದ ಆಸ್ಪತ್ರೆ ಹಾಗೂ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ರಾಜಕಾರಣಿ, ಅಧಿಕಾರಿಗಳ ಮಕ್ಕಳು ಹೊರ ದೇಶದಲ್ಲಿ ಓದುತ್ತಿದ್ದು, ಸಾಮಾನ್ಯ, ಬಡ ಜನರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಈ ರೀತಿ ಆಗದಂತೆ ಕಾನೂನುಗಳು ಜಾರಿಯಾಗಬೇಕಿದೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯವೆಂದು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ಅಪರಾಧಗಳಿಗೆ ಸರ್ಕಾರ ಕಾರಣವಲ್ಲ. ಇಂತಹ ಪ್ರಕರಣಗಳಿಗೆ ಪ್ರಚೋದನೆ ನೀಡುವುದಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಆರೋಪ ಬೇಡ ಎಂದ ಸಚಿವರು, ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ಪಾಲಕರು ಕಡ್ಡಾಯವಾಗಿ ಕಣ್ಣಿಡಬೇಕಾದ ಸ್ಥಿತಿ ಇದೆ. ಸಮಾಜದಲ್ಲಿ ನಡೆಯುವ ಇಂತಹ ಕೃತ್ಯಗಳಿಗೆ ಸರ್ಕಾರದ ಮೇಲೆ ಅನವಶ್ಯಕ ಆರೋಪ ಬೇಡ. ಮಕ್ಕಳು ಚಟಕ್ಕೆ ದಾಸರಾಗದಂತೆ ಪಾಲಕರು ಬೆಳೆಸಬೇಕು. ಸಮಾಜದಲ್ಲಿ ಈ ವಿಷಯವಾಗಿ ತುಂಬ ಬದಲಾವಣೆ ಆಗಬೇಕಿದೆ ಎಂದರು.

ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ದೇಶದಲ್ಲಿ ಹೊಸ ಕಾನೂನುಗಳು ಜಾರಿಯಾಗಬೇಕು ಎಂದು ಹೇಳಿದರು.