ಸಾರಾಂಶ
ಗ್ರಂಥಾಲಯ ಮೇಲ್ವಿಚಾರಕರಿಗೆ ಸದ್ಯ ನೀಡುತ್ತಿರುವ ವೇತನವನ್ನು ಕೇಂದ್ರ ಸರ್ಕಾರದ ಆದೇಶದಂತೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಸೇವೆಯಲ್ಲಿ ಮರಣ ಹೊಂಡುವ ಮೇಲ್ವಿಚಾರಕರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗ್ರಂಥಾಲಯ ಮೇಲ್ವಿಚಾರಕರಿಗೆ ಸದ್ಯ ನೀಡುತ್ತಿರುವ ವೇತನವನ್ನು ಕೇಂದ್ರ ಸರ್ಕಾರದ ಆದೇಶದಂತೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಸೇವೆಯಲ್ಲಿ ಮರಣ ಹೊಂಡುವ ಮೇಲ್ವಿಚಾರಕರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.ಈಚೆಗೆ ಸರ್ಕಾರಿ ನೌಕರರಿಗೆ ಸರ್ಕಾರ ಹೊರಡಿಸಿದ ಆದೇಶದಂತ ಗ್ರಂಥಾಲಯ ಮೇಲ್ವಿಚಾರಕಿಯರಿಗೂ ಹೆರಿಗೆ ರಜೆ ನೀಡಬೇಕು. ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಹೊಂದಲು ನಿವೇಶನ ಒದಗಿಸಬೇಕು. ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.ಮೇಲ್ವಿಚಾರಕ ಕಲ್ಲಬಸವಯ್ಯ ಎ.ಪಿ.ಸಂಘಟನಾ ಕಾರ್ಯದರ್ಶಿ ಕೆಂಚಪ್ಪ ಹಾರೂಗೇರಿ, ಗುರುನಾಥ ಬೋರಗಂವಿ, ಸರೋಜಿನಿ ಕಿತ್ತೂರು, ಗಂಗಮ್ಮ ಕುಡಚಿ, ಅಹ್ಮದ್ ಬೆಳಗಾವಿ ಬೆಳಗಾವಿ ಸೇರಿದಂತೆ ಇತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.