ಸಾರಾಂಶ
ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏಕರೂಪದ ಸೇವಾ ಷರತ್ತುಗಳನ್ನು ಜಾರಿಗೆ ತರಬೇಕು
ಕನ್ನಡಪ್ರಭ ವಾರ್ತೆ ತಿಪಟೂರು
ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏಕರೂಪದ ಸೇವಾ ಷರತ್ತುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ತಾಲೂಕು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಯೂನಿಯನ್, ಸಿಐಟಿಯು, ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಧಿಕಾರಿ ಸಪ್ತಶ್ರೀಗೆ ಮನವಿ ಸಲ್ಲಿಸಿದರು.ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅನುಸೂಯಮ್ಮ ಮಾತನಾಡಿ, ಕಳೆದ ಐದು ದಶಕಗಳಿಂದಲೂ ನಿಸ್ವಾರ್ಥವಾಗಿ ದುಡಿಯುತ್ತಿರುವ ಸುಮಾರು 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕಾರ್ಮಿಕರನ್ನಾಗಿ ಗುರುತಿಸಲು ಸರ್ಕಾರ ಸಿದ್ದಿವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲಾ ಯೋಜನಾ ಕಾರ್ಮಿಕರಿಗೆ ಅನ್ವಯವಾಗುವಂತೆ ಕೂಡಲೇ ವೇತನ ಆಯೋಗ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಾಂತ ರೈತ ಸಂಘದ ಹೋರಾಟಗಾರ ಚನ್ನಬಸವಣ್ಣ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಿ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು ಎಂದರು. ಸೌಹಾರ್ದ ವೇದಿಕೆಯ ಅಲ್ಲಾಬಕಾಷ್ , ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ, ಗಾಯತ್ರಿ, ಪುಪ್ಪ, ಶಾಂತ, ಶಿವಮ್ಮ, ಅನುಸೂಯ, ಚಂದ್ರಕಲಾ, ಭಾಗ್ಯಮ್ಮ, ಕಮಲಮ್ಮ, ಮಂಜುಳಮ್ಮ, ನಾಗರತ್ನಮ್ಮ ಹಾಜರಿದ್ದರು.