ಜಾತ್ರೆ ಮುಗಿಸಿ ಮಸಣ ಸೇರಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ

| Published : Mar 26 2025, 01:36 AM IST

ಜಾತ್ರೆ ಮುಗಿಸಿ ಮಸಣ ಸೇರಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಣಿಗಲ್: ಗ್ರಾಮದ ಹಬ್ಬ ಮುಗಿಸಿ ಅಣ್ಣನ ಜೊತೆ ಕಾಲೇಜಿಗೆ ಹೊರಟ ಎಂಜಿನಿಯರಿಂಗ್ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ಕುಣಿಗಲ್ ಪಟ್ಟಣದ ಅಂಚೆಪಾಳ್ಯದ ಬಳಿ ನಡೆದಿದೆ.

ಕುಣಿಗಲ್: ಗ್ರಾಮದ ಹಬ್ಬ ಮುಗಿಸಿ ಅಣ್ಣನ ಜೊತೆ ಕಾಲೇಜಿಗೆ ಹೊರಟ ಎಂಜಿನಿಯರಿಂಗ್ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ಕುಣಿಗಲ್ ಪಟ್ಟಣದ ಅಂಚೆಪಾಳ್ಯದ ಬಳಿ ನಡೆದಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಸಬಾ ಹೋಬಳಿಯ ಬ್ಯಾಡರಹಳ್ಳಿ ವಾಸಿ ಸಿದ್ದರಾಜು ಮತ್ತು ಜಗದಾಂಬ ಈ ದಂಪತಿಗಳ ಮಗಳಾದ ಧನುಶ್ರೀ (20) ಮೃತಪಟ್ಟ ವಿದ್ಯಾರ್ಥಿನಿ. ಮಂಗಳೂರಿನ ಸಪ್ತಪದಿ ಕಾಲೇಜಿನಲ್ಲಿ ಬಿಇ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಕ್ಕೆ ಬಂದಿದ್ದಳು. ತನ್ನ ನೆಚ್ಚಿನ ದೇವರಿಗೆ ಆರತಿ ಮಾಡಿ ಹಬ್ಬ ಮುಗಿಸಿ ಮಂಗಳವಾರ ಕಾಲೇಜಿಗೆ ಹೋಗಲೆಂದು ಮಂಗಳೂರಿಗೆ ತೆರಳಲು ಅಣ್ಣನ ಜೊತೆ ದ್ವಿಚಕ್ರ ವಾಹನದಲ್ಲಿ ಕುಣಿಗಲ್ ರೈಲ್ವೆ ನಿಲ್ದಾಣಕ್ಕೆ ಹೋಗುವಾಗ ಅಂಚೆಪಾಳ್ಯದ ಬಳಿ ಸರ್ವಿಸ್ ರಸ್ತೆಯಲ್ಲಿ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರಳಾಗಿದ್ದ ಧನುಶ್ರೀ ಕೆಳಗೆ ಬಿದ್ದಿದ್ದು ಈ ವೇಳೆ ಕ್ಯಾಂಟರ್ ಟೈಯರ್ ಆಕೆಯ ಹರಿದು ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಅಣ್ಣ ರೇಣುಕೇಶಗೂ ಗಾಯಗಳಾಗಿದ್ದು ಆತನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ಕ್ಯಾಂಟರ್ ಅನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ