ಸಾರಾಂಶ
ಉಡುಪಿ: ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ (ಯುಸಿಇಎ) ವತಿಯಿಂದ ಬುಧವಾರ ಸರ್ ಎಂ.ವಿ. ವಿಶ್ವೇಶರಯ್ಯ ಅವರ ಹುಟ್ಟಹಬ್ಬ - ಇಂಜಿನಿಯರ್ಸ್ ದಿನಾಚರಣೆ ಉಡುಪಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಮಂಗಳೂರು ಅಸೋಸಿಯೇಶನ್ ಆಫ್ ವ್ಯಾಲ್ಯುವರ್ಸ್‌ನ ಅಧ್ಯಕ್ಷ ಸತೀಶ್ ರಾವ್ ಭಾಗವಹಿಸಿ ಮಾತನಾಡಿ, ಮಾಡುವ ವೃತ್ತಿಯನ್ನು ಪ್ರಾಮಾಣಿಕತೆ, ನಿರ್ವಂಚನೆಯಿಂದ ಮಾಡಿದಾಗ ಸತ್ಫಲ ದೊರೆಯುತ್ತದೆ. ಆದ್ದರಿಂದ ಗ್ರಾಹಕರೊಂದಿಗೆ ಸದಾ ಖುಷಿಯಿಂದ, ಪ್ರೀತಿಯಿಂದ ಬೆರೆತು ಸೇವೆ ನೀಡಬೇಕು ಎಂದರು.ಮಣಿಪಾಲದ ಎಂಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಕಿರಣ್ ಕಾಮತ್ ಅವರು, ಸರ್.ಎಂ.ವಿ.ಸವರ ಆದರ್ಶ ಗುಣಗಳನ್ನು ಯುವ ಎಂಜಿನಿಯರ್ ಗಳು ಮೈಗೂಡಿಸಿಕೊಂಡಾಗ ಹೊಸದನ್ನು ಆವಿಷ್ಕಾರ ಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಬಹುದು, ಇದು ಸರ್.ಎಂ.ವಿ. ಅವರಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದರು.
ಕಿದಿಯೂರು ಹೊಟೇಲ್ ಪ್ರವರ್ತಕ ಭುವನೇಂದ್ರ ಕಿದಿಯೂರು, ಸಂಘದ ಉಪಾಧ್ಯಕ್ಷ ಗಣೇಶ್ ಬೈಲೂರು, ಕೋಶಾಧಿಕಾರಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್.ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಇಂಜಿನಿಯರ್ ಸತೀಶ್ ಪೈ ಮಾತನಾಡಿದರು.ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ಎಂಜಿನಿಯರ್‌ಗಳಾದ ಕಿರಣ್ ಕಾಮತ್, ಸತೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ಭರತ್ ಭೂಷಣ್, ಗಣೇಶ್ ಸಾಲ್ಯಾನ್ ಪರಿಚಯಿಸಿದರು. ಸ್ವಾತಿ ಆಚಾರ್ಯ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಕುಮಾರ್ ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೃತ್ತಿನಿರತ ನೂರಾರು ಎಂಜಿನಿಯರ್‌ಗಳು ಭಾಗವಹಿಸಿದ್ದರು.