ಕನ್ನಡಪ್ರಭ ವಾರ್ತೆ ಕೊಲ್ಹಾರ ಕನ್ನಡ ಭಾಷೆ ಜೊತೆಗೆ ಇಂಗ್ಲಿಷ್ ಭಾಷೆ ಮಕ್ಕಳಿಗೆ ಬೇಕು. ಆದರೆ, ವ್ಯವಹಾರ ಮಾಡಲು ಮಾತ್ರ ಇಂಗ್ಲೀಷ್ ಭಾಷೆ ಬಳಸಬೇಕು ಎಂದು ಮಾಜಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಕನ್ನಡ ಭಾಷೆ ಜೊತೆಗೆ ಇಂಗ್ಲಿಷ್ ಭಾಷೆ ಮಕ್ಕಳಿಗೆ ಬೇಕು. ಆದರೆ, ವ್ಯವಹಾರ ಮಾಡಲು ಮಾತ್ರ ಇಂಗ್ಲೀಷ್ ಭಾಷೆ ಬಳಸಬೇಕು ಎಂದು ಮಾಜಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಡಾ.ಎಪಿಜೆ ಅಬ್ದುಲ್ ಕಲಾಂ ಅಂಗ್ಲ ಮಾಧ್ಯಮ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇಂದು ನಮಗೆ ಆಂಗ್ಲ ಮಾಧ್ಯಮ ಶಾಲೆ ಅನಿವಾರ್ಯವಲ್ಲ, ಜಗತ್ತಿನಲ್ಲಿ ವ್ಯವಹಾರಗಳು ಇಂಗ್ಲೀಷ್ ಭಾಷೆಯಲ್ಲಿ ನಡೆಯುತ್ತವೆ. ವ್ಯವಹಾರ ಮಾಡಲು ಇಂಗ್ಲೀಷ್ ಭಾಷೆ ಅವಶ್ಯ. ಇಂಗ್ಲಿಷ್ ಬಲ್ಲವರಿದ್ರೆ ದೇಶದಲ್ಲಿ ಅಷ್ಟೇಯಲ್ಲ ಜಗತ್ತಿನಲ್ಲಿ ಸಾಧನೆ ಮಾಡಬಹುದು. ಇಂದು ವೈದ್ಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು, ತಂತ್ರಜ್ಞಾನಿಗಳು ಜಗತ್ತಿನ ನಾನಾ ಭಾಗದಲ್ಲಿ ಪಸರಿಸಿದ್ದಾರೆ. ಅದಕ್ಕೆ ಆಂಗ್ಲ ಮಾಧ್ಯಮ ಕಾರಣ. ಚೈನಾದವರು ಹಾಗೂ ರಷ್ಯಾದವರು ಇಂಗ್ಲಿಷ್ ಮಾತಾಡುವುದಿಲ್ಲ. ಇಂದು ರಾಜ್ಯದಲ್ಲಿ ಮಾತೃಭಾಷೆಯಲ್ಲಿ ಮಕ್ಕಳು ಒಂದು ಹೆಜ್ಜೆ ಮುಂದಿದ್ದಾರೆ ಎಂದರು.
ಹೆಣ್ಣು ಮಕ್ಕಳಿಗೆ ಜಗತ್ತಿನಲ್ಲಿ ಸಾಕಷ್ಟು ಪ್ರಾಧಾನ್ಯತೆ ಸಿಕ್ತಾಯಿದೆ. ಇವತ್ತು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಅರ್ಧದಷ್ಟು ಮೆಡಲ್ ಗಳನ್ನ ತಂದಿದ್ದಾರೆ. ಬಸವಣ್ಣನ ಆಚಾರ ವಿಚಾರಕ್ಕೆ ಅನುಗುಣವಾಗಿ ಸ್ತ್ರೀ ಮತ್ತು ಪುರುಷರಲ್ಲಿ ಭೇದಭಾವ ಇಲ್ಲ. ಗ್ರಾಮ ಪಂಚಾಯಿತಿ ಎಲೆಕ್ಷನ್ ಬಂದ್ರೆ ಶೇ.55 ರಿಂದ 60 ಹೆಣ್ಮಕ್ಳು ಇರ್ತಾರೆ ಎಂದು ತಿಳಿಸಿದರು.ದೇಶಕ್ಕೆ ಶಕ್ತಿ ತುಂಬಿರುವವರು ವ್ಯಕ್ತಿ ಡಾ.ಎಪಿಜೆ ಅಬ್ದುಲ್ ಕಲಾಂ. ಜಗತ್ತಿನ ಜಾತ್ಯತೀತ ಹಾಗೂ ಮನುಷ್ಯರ ಏಳಿಗೆಯನ್ನು ಬಯಸಿರುವ ವ್ಯಕ್ತಿತ್ವ. ಅವರನ್ನು ಮಿಸ್ಸೈಲ್ ಮ್ಯಾನ್ ಆದ್ರೂ ಕೂಡ ಜಗತ್ತಿನಲ್ಲಿ ಮಿಸೈಲ್ ಉಪಯೋಗ ಮಾಡದೇ ಇರುವ ವ್ಯಕ್ತಿತ್ವ ಅವರದು. ಯಾಕೆಂದರೆ ಶಕ್ತಿ ಸಾಮರ್ಥ್ಯವನ್ನು ಬಲ ಪ್ರಯೋಗ ಮಾಡಲಿಕ್ಕೆ ಮಾಡ್ಲಿಲ್ಲ. ಜಗತ್ತಿನ ಸಾಮ್ರಾಜ್ಯ ಕಾಪಾಡಲಿಕ್ಕೆ ಮಾಡಿ ಎರಡೇ ಎರಡು ದೇಶಗಳು ಒಂದು ಶಕ್ತಿ ಹೊಂದಿ ಬೇರೆಯವರನ್ನ ಇವತ್ತು ತಮ್ಮ ಆಧೀನದಲ್ಲಿ ಇಟ್ಟುಕೊಳ್ಳುವಂತ ಪ್ರಯತ್ನ ಮಾಡಿರುವ ದೇಶಕ್ಕೂ ಕೂಡ ಈ ಶಕ್ತಿ ಬರಲಿ ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಉಸ್ಮಾನ ಪಟೇಲ ಮಾತನಾಡಿ, ಇಂದು ಮಕ್ಕಳಿಗೆ ಕೊಠಡಿ ಅವಶ್ಯಕತೆ ಇತ್ತು. ಶಿವಾನಂದ ಪಾಟೀಲರು ಸರ್ಕಾರದಲ್ಲಿ ಸಚಿವರಾಗಿದ್ದಾಗ ಅನುದಾನದ ಬಗ್ಗೆ ಬೇಡಿಕೆ ಇಟ್ಟಾಗ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯಿಂದ ಒಂದು ಕೋಟಿ ಅನುದಾನವನ್ನು ನಮ್ಮ ಸಂಸ್ಥೆಗೆ ಒದಗಿಸಿಕೊಟ್ಟರು. ಹೀಗಾಗಿ, ಇವತ್ತು ಮಕ್ಕಳಿಗೆ ಶಿಕ್ಷಣ ಪಡೆಯಲು ಕೊಠಡಿಗಳನ್ನು ನಿರ್ಮಿಸಲಾಯಿತು. ಇದಕ್ಕೆ ಶಾಸಕ ಶಿವಾನಂದ ಪಾಟೀಲರ ಸಹಕಾರ ಕಾರಣ ಎಂದು ಹೇಳಿದರು.ಈ ವೇಳೆ ಮುಖಂಡರಾದ ಸಿ.ಎಂ.ಗಣಕುಮಾರ, ಎಸ್.ಬಿ.ಪತಂಗಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಪಟೇಲರು ಶಾಸಕ ಶಿವಾನಂದ್ ಪಾಟೀಲರನ್ನು ಸನ್ಮಾನಿಸಿದರು. ಶಿಕ್ಷಕರು ಹಾಗೂ ಮಕ್ಕಳು ಶಾಸಕರಿಗೆ ಸಾಹಿತ್ಯ ಹಾಗೂ ಪುಷ್ಪ ಸಮರ್ಪಣೆ ಮಾಡಿ ಅಭಿನಂದಿಸಿದರು.ಸಮಾರಂಭದ ಸಾನಿಧ್ಯವನ್ನು ದಿಗಂಬರೇಶ್ವರ ಮಠದ ಪೀಠಾಧಿಪತಿ ಕಲ್ಲಿನಾಥ ದೇವರು ಹಾಗೂ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಗಳು ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ದಸ್ತಗಿರ್ ಕಲಾದಗಿ, ಮಾಜಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ.ಪಕಾಲಿ, ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಪಟೇಲ್, ಆಡಳಿತಾಧಿಕಾರಿ ಕೆ.ಎಂ.ಪಟೇಲ್, ಪ್ರಾಂಶುಪಾಲ ಬಂಧನಾ ಬ್ಯಾನರ್ಜಿ ಉಪಸ್ಥಿತರಿದ್ದರು.