ಜ್ಞಾನೋದಯ ವಿದ್ಯಾರ್ಥಿಗಳು ಕರಾಟೆಯಲ್ಲಿ ಚಾಂಪಿಯನ್

| Published : Jan 01 2024, 01:15 AM IST

ಜ್ಞಾನೋದಯ ವಿದ್ಯಾರ್ಥಿಗಳು ಕರಾಟೆಯಲ್ಲಿ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಕರಾಟೆ ಆಟ ಆಡುವುದರಿಂದ ಮಕ್ಕಳು ಸದೃಢ ದೇಹ ಮತ್ತು ಜ್ಞಾನವನ್ನು ಸಂಪಾದನೆ ಮಾಡುತ್ತಾರೆ. ಜತೆಗೆ ಆಟದ ಪ್ರಮಾಣಪತ್ರಗಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಪಾಲಕರು ಕ್ರೀಡೆಗಳಿಗೆ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು.

ಹನುಮಸಾಗರ: ಇಂದಿನ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಟ-ಪಾಠಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವಿಷ್ಣು ರಜಪೂತ ಹೇಳಿದರು.ಗ್ರಾಮದ ಜ್ಞಾನೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ನಡೆದ ಇಂಟರ್‌ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ಕರಾಟೆಯಲ್ಲಿ ಚಾಂಪಿಯನ್ ಆಗಿ ಬಂದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರಾಟೆ ಆಟ ಆಡುವುದರಿಂದ ಮಕ್ಕಳು ಸದೃಢ ದೇಹ ಮತ್ತು ಜ್ಞಾನವನ್ನು ಸಂಪಾದನೆ ಮಾಡುತ್ತಾರೆ. ಜತೆಗೆ ಆಟದ ಪ್ರಮಾಣಪತ್ರಗಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಪಾಲಕರು ಕ್ರೀಡೆಗಳಿಗೆ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ 4 ಚಿನ್ನದ ಪದಕ, 12 ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕರಾಟೆ ಶಿಕ್ಷಕರಾದ ಈರಣ್ಣ ಬದಾಮಿ, ಗುರುದೇವ ರಜಪೂತ, ಮುಖ್ಯ ಶಿಕ್ಷಕ ಮಹೇಶ ರಜಪೂತ, ತಾರಾ ರಜಪೂತ, ಪ್ರೇಮ, ಸರೋಜಾ, ಗ್ರೀಷ್ಮ, ಅಂಬಿಕಾ, ರಾಜಲಕ್ಷ್ಮಿ, ರೂಪ, ಲಕ್ಷ್ಮಿ ರಜಪೂತ, ಸುಶ್ಮಿತಾ, ಲಕ್ಷ್ಮಿ ಲಮಾಣಿ, ಆಫ್ರಾತ ಮಹೀಂದ್ರ, ಶಾಲೆಯ ಅಧ್ಯಕ್ಷ ಪರಶುರಾಮ ರಜಪೂತ, ಶಾಂತಾಬಾಯಿ ರಜಪೂತ, ಅಬ್ದುಲ್ ರಜಾಕ ಟೇಲರ, ಅಬ್ದುಲಕರೀಂ ವಂಟೆಳಿ ಇದ್ದರು.