ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿ : ಡಾ.ಟಿ.ತಮಿಜ್‌ಮಣಿ

| Published : Nov 13 2024, 12:03 AM IST

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿ : ಡಾ.ಟಿ.ತಮಿಜ್‌ಮಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ರಾಮಾಯಾಣದಲ್ಲಿಯೂ ಕೂಡ ಸೇರ್ಪಡೆಯಾಗಿದ್ದು, ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದುವ ಮೂಲಕ ಶ್ರೀಮಂತ ಭಾಷೆಯಾಗಿ ಹೊರಹೊಮ್ಮುತ್ತಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಪಂಪ, ರನ್ನ, ಕುವೆಂಪು, ದಾ.ರಾ.ಬೇಂದ್ರೆ ಸೇರಿದಂತೆ ನೂರಾರು ಕವಿಗಳು ಕನ್ನಡ ಭಾಷೆಯಲ್ಲಿ ಹಲವು ಸಾಹಿತ್ಯಗಳನ್ನು ಬರೆಯುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಭಾರತೀ ಕಾಲೇಜಿನ ಹೆಲ್ತ್ ಸೈನ್ಸಸ್‌ನ ನಿರ್ದೇಶಕರಾದ ಡಾ.ಟಿ.ತಮಿಜ್‌ಮಣಿ ತಿಳಿಸಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿ.ಮಾದೇಗೌಡ ಔಷಧ ವಿದ್ಯಾಲಯ ಕಿರುಗಾವಲು ಮತ್ತು ಭಾರತಿ ಔಷಧ ವಿದ್ಯಾಲಯ ಭಾರತೀನಗರ ವತಿಯಿಂದ ನಡೆದ ಕನ್ನಡ ಉತ್ಸವದಲ್ಲಿ ಮಾತನಾಡಿ, ರಾಜ್ಯದಲ್ಲೇ ಅತಿಹೆಚ್ಚು ಕನ್ನಡ ಮಾತನಾಡುವ ಜನತೆಯನ್ನು ಮಂಡ್ಯ ಜಿಲ್ಲೆ ಹೊಂದಿದೆ. ಬೇರೆ ಜಿಲ್ಲೆಗಳಿಗಿಂತ ಈ ಜಿಲ್ಲೆ ಕಲೆ, ಸಂಸ್ಕೃತಿಯಲ್ಲಿ ಮಾದರಿಯಾಗಿದೆ ಎಂದು ತಿಳಿಸಿದರು.

ಕನ್ನಡ ಭಾಷೆ ರಾಮಾಯಾಣದಲ್ಲಿಯೂ ಕೂಡ ಸೇರ್ಪಡೆಯಾಗಿದ್ದು, ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದುವ ಮೂಲಕ ಶ್ರೀಮಂತ ಭಾಷೆಯಾಗಿ ಹೊರಹೊಮ್ಮುತ್ತಿದೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ಪ್ರೊ.ಎಂ.ಮಾಯಪ್ಪ ಮಾತನಾಡಿ, ಇಂದಿನ ಯುವ ಪೀಳಿಗೆ ಪರಭಾಷೆ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡ ಭಾಷೆಯನ್ನು ಕ್ಷೀಣಿಸುವಂತೆ ಮಾಡುತ್ತಿದ್ದಾರೆ. ಕನ್ನಡ ಭಾಷೆ ಉಳಿಸಲು ಯುವ ಜನತೆ ನಾಡು- ನುಡಿ ಭಾಷೆಗಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಭಾರತೀ ಔಷಧ ವಿದ್ಯಾಲಯದ ಪ್ರಾಂಶುಪಾಲ ಡಾ.ಡಿ.ಬಾಲಸುಭ್ರಮಣ್ಯಂ, ಕಿರುಗಾವಲು ಜಿ.ಮಾದೇಗೌಡ ಔಷಧ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್.ಜಗದೀಶ್, ನರ್ಸಿಂಗ್ ಕಾಲೇಜಿನ ಮಹೇಶ್‌ಕುಮಾರ್ ಜಿ.ಲೋನಿ, ಡಾ.ಶಾಂತಕುಮಾರ್ ಸೇರಿದಂತೆ ಹಲವರಿದ್ದರು.