ಸಾರಾಂಶ
ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ. ಶಿಕ್ಷಣವೇ ನೀವು ಮಕ್ಕಳಿಗೆ ನೀಡುವ ದೊಡ್ಡ ಆಸ್ತಿ. ಜ್ಞಾನದ ಸಂಪತ್ತನ್ನು ಅವರಿಗೆ ನೀಡುವುದರಿಂದ ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ. ಖಾಸಗಿ ಶಾಲೆಯ ವ್ಯಾಮೋಹವನ್ನು ಮೊದಲು ಪೋಷಕರು ಬಿಡಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿದಾಗ ಮಾತ್ರ ಶಾಲೆಗಳ ಉಳಿವು ಸಾಧ್ಯ.
ಕನ್ನಡಪ್ರಭ ವಾರ್ತೆ ದೇವಲಾಪುರ
ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿದಾಗ ಮಾತ್ರ ಶಾಲೆಗಳ ಉಳಿವು ಸಾಧ್ಯ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.ನಾಗಮಂಗಲ ತಾಲೂಕು ದೇವಲಾಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಿರಿ ಸಂಭ್ರಮ ಶಾಲಾ ವಾರ್ಷಿಕೋತ್ಸವವನ್ನು ನಗಾರಿ ಬಾರಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ. ಶಿಕ್ಷಣವೇ ನೀವು ಮಕ್ಕಳಿಗೆ ನೀಡುವ ದೊಡ್ಡ ಆಸ್ತಿ. ಜ್ಞಾನದ ಸಂಪತ್ತನ್ನು ಅವರಿಗೆ ನೀಡುವುದರಿಂದ ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ ಎಂದರು.
ಖಾಸಗಿ ಶಾಲೆಯ ವ್ಯಾಮೋಹವನ್ನು ಮೊದಲು ಪೋಷಕರು ಬಿಡಬೇಕು. ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ದಾಖಲಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಯೊಂದಿಗೆ ಅವರ ಉಜ್ವಲ ಭವಿಷ್ಯಕ್ಕೆ ಹೊಸ ಮುನ್ನುಡಿ ಬರೆಯಲು ಪೋಷಕರು ಸಹಕರಿಸುವಂತೆ ಮನವಿ ಮಾಡಿದರು.ಮಂಡ್ಯ ಡಯಟ್ ಪ್ರಾಚಾರ್ಯ ಮಹೇಶ್, ತಾಲೂಕು ಶಿಕ್ಷಣಾಧಿಕಾರಿ ಯೋಗೇಶ್, ಸಂಪನ್ಮೂಲ ಸಮನ್ವಯಾಧಿಕಾರಿ ರವೀಶ್, ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಡಿ.ಕೆ.ಸುರೇಶ್ ವಹಿಸಿದ್ದು ಸಮಾಜ ಸೇವಕ ಡಿ.ಕೆ ಕೋದಂಡರಾಮ. ಎನ್. ಜೆ.ರಾಜೇಶ್ ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಚಂದ್ರಕಲಾ. ಗಾಪಂ ಸದಸ್ಯರಾದ ಶ್ರೀನಿವಾಸ್. ಮತ್ತು ಕುಮಾರ್, ಗ್ರಾಪಂ ಅಧ್ಯಕ್ಷ ಬೋರಯ್ಯ ಇತರರಿದ್ದರು.