ಸಾರಾಂಶ
ಬೆಂಗಳೂರು : ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ದಾಖಲಾತಿ ಅಂತ್ಯವಾಗಿದ್ದು, 23,055 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 2023-24ನೇ ಸಾಲಿನಲ್ಲಿ ಬರೋಬ್ಬರಿ 23 ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ದಾಖಲೆಯಲ್ಲಿ ಹಿನ್ನಡೆಯಾಗಿತ್ತು. ಅದಾದ ಬಳಿಕ ಬಿಬಿಎಂಪಿ ಶಿಕ್ಷಣ ವಿಭಾಗದಿಂದ ಮಕ್ಕಳ ದಾಖಲಾತಿ ಅಭಿಯಾನ ನಡೆಸುವುದು ಸೇರಿದಂತೆ ಮೊದಲಾದ ಕ್ರಮಗಳನ್ನು ಕೈಗೊಂಡ ಪರಿಣಾಮ ಅಂತಿಮವಾಗಿ ಜುಲೈ 31ಕ್ಕೆ 23,055 ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಈ ಮೂಲಕ ಶೈಕ್ಷಣಿಕ ದಾಖಲೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಈಗಾಗಲೇ ಸಮವಸ್ತ್ರ, ನೋಟ್ ಬುಕ್, ಪುಸಕ್ತ, ಬ್ಯಾಗ್ ವಿತರಣೆ ಮಾಡಲಾಗಿದೆ. ಉಳಿದಂತೆ ಶೂ ಮತ್ತು ಸಾಕ್ಸ್ ಗುತ್ತಿಗೆದಾರರಿಗೆ ಸರಬರಾಜು ಮಾಡುವುದಕ್ಕೆ ಕಾರ್ಯದೇಶ ನೀಡುವುದಷ್ಟೇ ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಶಾಲಾ-ಕಾಲೇಜು ದಾಖಲಾತಿ ವಿವರ
ಶಾಲಾ-ಕಾಲೇಜುದಾಖಲಾತಿ ಸಂಖ್ಯೆ
ಶಿಶು ವಿಹಾರ4837
ಪ್ರಾಥಮಿಕ ಶಾಲೆ3753
ಪ್ರೌಢಶಾಲೆ7465
ಪದವಿ ಪೂರ್ವ5442
ಪದವಿ ಮತ್ತು ಸ್ನಾತಕೋತ್ತರ1558
ಒಟ್ಟು23,058