ಸಾರಾಂಶ
ಪರಿಶಿಷ್ಟ ಜಾತಿಯಲ್ಲಿ ಉಪಜಾತಿಯನ್ನು ಗುರುತಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್‌ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಹೊಲಯ, ಆದಿ ಕರ್ನಾಟಕ, ಆದಿ ದ್ರಾವಿಡ, ಮಾಲ, ಛಲವಾದಿ, ಬಲಗೈ, ಮಹರ್, ಬೇಗರ್, ಮಾಲ, ಮೂಲದಾಸರ್, ಹೊಲೆಯ ದಾಸರ್, ಪರಯ, ಆದಿ ಆಂಧ್ರ ಈ ರೀತಿಯಾಗಿ ನಾನಾ ಹಳ್ಳಿಗಳಲ್ಲಿ ಕರೆಯುತ್ತಾರೆ.
ಹೊಸಕೋಟೆ: ಸುಪ್ರೀಂಕೋರ್ಟ್ ಆದೇಶದನ್ವಯ ಪರಿಶಿಷ್ಟರಿಗೆ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಜನಗಣತಿ ಮಾಡಲು ನಿರ್ಧರಿಸಿದ್ದು ಸರ್ಕಾರದ ವತಿಯಿಂದ ಜಾತಿ ಗಣತಿ ಮಾಡಲು ಬಂದಾಗ ಪರಿಶಿಷ್ಟ ಜಾತಿಯವರು ‘ಹೊಲಯ’ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ದಲಿತಪರ ಹೋರಾಟಗಾರ ದೊಡ್ಡಹರಳಗೆರೆ ನಾಗೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 1ನೇ ಆಗಸ್ಟ್ 2024ರ ಸುಪ್ರೀಂಕೋರ್ಟ್ ಆದೇಶದ ಅನ್ವಯ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದು, ಪರಿಶಿಷ್ಟ ಜಾತಿಯಲ್ಲಿ ಉಪಜಾತಿಯನ್ನು ಗುರುತಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್‌ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಹೊಲಯ, ಆದಿ ಕರ್ನಾಟಕ, ಆದಿ ದ್ರಾವಿಡ, ಮಾಲ, ಛಲವಾದಿ, ಬಲಗೈ, ಮಹರ್, ಬೇಗರ್, ಮಾಲ, ಮೂಲದಾಸರ್, ಹೊಲೆಯ ದಾಸರ್, ಪರಯ, ಆದಿ ಆಂಧ್ರ ಈ ರೀತಿಯಾಗಿ ನಾನಾ ಹಳ್ಳಿಗಳಲ್ಲಿ ಕರೆಯುತ್ತಾರೆ. ಈ ಗೊಂದಲಗಳನ್ನು ನಿವಾರಣೆ ಮಾಡಲು ಸಮೀಕ್ಷೆ ನಡೆಸಬೇಕೆಂದು ಆಯೋಗವು ಮಧ್ಯಂತರ ವರದಿ ನೀಡಿರುತ್ತಾರೆ. ಆದ್ದರಿಂದ ನಿಮ್ಮ ಊರು, ನಿಮ್ಮ ಗ್ರಾಮ, ಕಾಲೋನಿಗಳಿಗೆ, ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಲು ಬಂದಾಗ ಕಡ್ಡಾಯವಾಗಿ ಮೂಲ ಜಾತಿಯಾದ ‘ಹೊಲಯ’ ಎಂದು ನಮೂದಿಸಬೇಕಾಗಿ ತಿಳಿಸಿದರು.