ಸಾರಾಂಶ
ಶಿರಹಟ್ಟಿ:ರಾಜ್ಯ ಹಿಂದುಳಿದ ಆಯೋಗ ನಡೆಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ-ಹಿಂದೂ, ಜಾತಿಯ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಕ್ರಮ ಸಂಖ್ಯೆ ಎ- ೦೮೬೮ ಅಂತ ನಮೂದಿಸಬೇಕು ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ತುಳಿ ಹೇಳಿದರು.ತಾಲೂಕಿನ ಕಡಕೋಳ ಗ್ರಾಮದ ವೀರರಾಣಿ ಕಿತ್ತೂರ ಚನ್ನಮ್ಮಾಜಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗುರುಮಠದ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಬೆಂಗಳೂರು, ತಾಲೂಕು ಘಟಕ ಶಿರಹಟ್ಟಿ ಪದಗ್ರಹಣ ಕಾರ್ಯಕ್ರಮ ಹಾಗೂ ನೌಕರ ಘಟಕ, ಯುವ ಘಟಕ, ಮಹಿಳಾ ಘಟಕ, ರೈತ ಘಟಕ ಆಯ್ಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಹರಿಹರ ಪಂಚಮಸಾಲಿ ಶ್ರೀಗಳ ಆದೇಶದಂತೆ ಲಿಂಗಾಯತ ಪಂಚಮಸಾಲಿ ಜನಾಂಗದ ಬಂಧುಗಳು ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಕಡ್ಡಾಯವಾಗಿ ನಮೂದಿಸಬೇಕು. ರಾಜ್ಯ ಸರ್ಕಾರ ಸೆ. ೨೨ರಿಂದ ಹಮ್ಮಿಕೊಂಡಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಲಿಂಗಾಯತ ಪಂಚಮಸಾಲಿ ಜನಾಂಗದವರು ಯಾವುದೇ ಕುಲಪಂಗಡಗಳನ್ನು ಹೇಳದೆ ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು ಎಂದು ತಿಳಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಈರಣ್ಣ ಕರಿಬಿಷ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎಫ್.ವಿ. ಮರಿಗೌಡರ, ರಾಜ್ಯ ಸಂಚಾಲಕ ಸೋಮಣ್ಣ ಡಾಣಗಲ್ ಹಾಗೂ ಸಮಾಜದ ಹಿರಿಯರಾದ ಆರ್.ಬಿ. ಕಮತ್, ಬಸವಣ್ಣಪ್ಪ ತುಳಿ, ಬಿ.ಎಸ್. ಪಾಟೀಲ, ಎಂ.ಎಸ್. ಗೋದಿ, ಹಾಲಪ್ಪ ದುಗಾಣಿ, ತಿಪ್ಪಣ್ಣ ಕೊಂಚಿಗೇರಿ, ಗೌರವಾಧ್ಯಕ್ಷ ಎಂ.ಎ. ಪಾಟೀಲ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ತಾಲೂಕು ಉಪಾಧ್ಯಕ್ಷ ಗಂಗಾಧರ ಬೆಲಹುಣಸಿ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಎಮ್. ಹೊಂಬಳ, ಯಲ್ಲಪ್ಪ ಇಂಗಳಗಿ, ಫಕೀರೇಶ ಎಮ್ಮೆಯವರ, ಬಸವರಾಜ ಬಳೆಗೇರ ನೇತೃತ್ವದಲ್ಲಿ ರೈತ ಘಟಕದ ಅಧ್ಯಕ್ಷರಾಗಿ ರಾಮಣ್ಣ ಕೊಂಚಿಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಚನಬಸನಗೌಡ ಪಾಟೀಲ್, ನೌಕರ ಘಟಕದ ಅಧ್ಯಕ್ಷರಾಗಿ ಎಸ್.ಬಿ. ಹೊಸೂರ, ಪ್ರಧಾನ ಕಾರ್ಯದರ್ಶಿಯನ್ನಾಗಿ ಎಸ್.ಬಿ. ಮಜ್ಜಿಗುಡ್ಡದ ಅವರನ್ನು ನೇಮಕ ಮಾಡಲಾಯಿತು. ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಬಸಮ್ಮ ಗಂಗಾಧರ್ ಬೆಲಹುಣಿಸಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ರೇಣುಕಾ ಶಿವಜೋಗಿ ತುಳಿ, ಯುವ ಘಟಕದ ಅಧ್ಯಕ್ಷರಾಗಿ ರುದ್ರಗೌಡ ಡಿ. ಪಾಟೀಲ ಪ್ರಧಾನ ಕಾರ್ಯದರ್ಶಿಯಾಗಿ ಶರಣು ಹೊಸೂರು ಅವರುಗಳನ್ನು ನೇಮಕ ಮಾಡಿ ನೇಮಕ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಹೆಬ್ಬಾಳ, ಬೆಳ್ಳಟ್ಟಿ, ವಡವಿ ಹೊಸೂರು, ಕೊಂಚಿಗೇರಿ, ಸಾಸಲವಾಡ, ಶಿರಹಟ್ಟಿ, ಮಾಗಡಿ, ಕಡಕೋಳ, ಕಲ್ಲಾಗನೂರು, ರಣತೂರು ಗ್ರಾಮಗಳು ಸೇರಿದಂತೆ ಎಲ್ಲ ಊರಿನ ಸಮಾಜ ಬಾಂಧವರು ಹಿರಿಯರು ಉಪಸ್ಥಿತರಿದ್ದರು.