ಜಾತಿ ಕಲಂ 9ರಲ್ಲಿ ಉಪ್ಪಾರ ಎಂದು ನಮೂದಿಸಿ

| Published : Sep 19 2025, 01:00 AM IST

ಸಾರಾಂಶ

ಜಾತಿ ಗಣತಿಯ ಜಾತಿ ಕಲಂ 9ರಲ್ಲಿ ಉಪ್ಪಾರ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಜಮ್ಮಾಪುರ ಬಿ.ಆರ್. ರಂಗಪ್ಪ ಮನವಿ ಮಾಡಿದ್ದಾರೆ.

- ಜಗಳೂರಿನಲ್ಲಿ ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಬಿ.ಆರ್. ರಂಗಪ್ಪ ಮನವಿ । ಸಮೀಕ್ಷೆದಾರರಿಗೆ ಸ್ಪಷ್ಟ ಮಾಹಿತಿ ನೀಡಲು ಮನವಿ - - -

ಕನ್ನಡಪ್ರಭವಾರ್ತೆ ಜಗಳೂರು

ಜಾತಿ ಗಣತಿಯ ಜಾತಿ ಕಲಂ 9ರಲ್ಲಿ ಉಪ್ಪಾರ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಜಮ್ಮಾಪುರ ಬಿ.ಆರ್. ರಂಗಪ್ಪ ಮನವಿ ಮಾಡಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಉಪ್ಪಾರ ಸಮಾಜದಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವ್ಯಾಪಿ 2025ನೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ನಡೆಯಲಿದೆ. ಸಮೀಕ್ಷೆದಾರರಿಗೆ ಉಪ್ಪಾರ ಸಮುದಾಯದವರು ಜಾತಿಯನ್ನು ''''''''ಉಪ್ಪಾರ'''''''' ಎಂದು ನಮೂದಿಸಲು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ರಾಜ್ಯದ ಉತ್ತರ, ದಕ್ಷಿಣ, ಮಧ್ಯ ಕರ್ನಾಟಕಗಳಲ್ಲಿ ವಿಭಿನ್ನ ಕಸುಬುಗಳ ಆಧಾರಿತವಾಗಿ ಉಪ್ಪಾರ ಸಮುದಾಯ ವಿಭಜನೆಗೊಂಡು ಸುಣ್ಣ ಉಪ್ಪಾರ, ಉಪ್ಪಳಿಗ ಶೆಟ್ಟಿ, ಗಾವಾಡಿ, ಸುಣಗಾರ, ಸಗರ, ಚುನಾರ, ಲೋನಾರಿ ಎಂದು ಕರೆಯಲಾಗುತ್ತಿದೆ. ಈ ಬಗ್ಗೆ ಗೊಂದಲ ಸೃಷ್ಠಿ ಮಾಡಿಕೊಳ್ಳದೇ ಜಾತಿ ಕಾಲಂ 9ರಲ್ಲಿ ''''''''ಉಪ್ಪಾರ'''''''' ಒಂದುವೇಳೆ ಉಪ ಜಾತಿ ಮೇಲಿನ ಉಪ ಜಾತಿಗಳಿದ್ದಲ್ಲಿ ಮಾತ್ರ ಕಾಲಂ ನಂ.10ರಲ್ಲಿ ಬರೆಸಬೇಕು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಯು.ಎಂ. ಗುರುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಉಪ್ಪಾರ ಸಮುದಾಯದವರು 25 ಲಕ್ಷ ಜನಸಂಖ್ಯೆ ಹೊಂದಿದೆ. ಕೇವಲ 7ರಿಂದ 8 ಲಕ್ಷ ಸಂಖ್ಯೆ ಎಂದು ಬಿಂಬಿಸುತ್ತಾರೆ. ಉಪ್ಪಾರ ಸಮಾಜದಿಂದ ಐ.ಎ.ಎಸ್., ಐಪಿಎಸ್ ನಂತಹ ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಶೋಚನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡಿನಲ್ಲಿ ನಡೆದ ರಾಜ್ಯಮಟ್ಟದ ಉಪ್ಪಾರ ಸಮಾವೇಶದಲ್ಲಿ ಎಸ್‌ಟಿ ಪಟ್ಟಿಗೆ ಸೇರಿಸುವ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಉಪ್ಪಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಗಿಡ್ಡನಕಟ್ಟೆ ಕಾಂತರಾಜ್ ಮಾತನಾಡಿ, ಜಾತಿ ಗಣತಿಯಲ್ಲಿ ಉಪ್ಪಾರ ಸಮಾಜದ ಕೋಡ್ ನಂಬರ್ ಎ 1465 ಆಗಿದೆ. ಯಾವುದೇ ಕಾರಣಕ್ಕೂ 1464 ಬರೆಸಬೇಡಿ. ಅದು ಬಲಿಜ ಜಾತಿಗೆ ಸೇರುತ್ತದೆ. ರಾಜ್ಯದಲ್ಲಿ ಉಪ್ಪಾರ ಸಮುದಾಯದ ನಿರ್ದಿಷ್ಟ ಜನಸಂಖ್ಯೆಯ ಅಂಕಿಸಂಕೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಂವಿಧಾನಬದ್ಧ ಹಕ್ಕುಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಗೌರವ ಅಧ್ಯಕ್ಷ ಬಸವಣೆಪ್ಪ, ತಾಲೂಕು ನಿಕಟಪೂರ್ವ ಅಧ್ಯಕ್ಷ ಎಸ್.ಬಂಗಾರಪ್ಪ, ಪದಾಧಿಕಾರಿಗಳಾದ ಉದ್ದಗಟ್ಟ ಹನುಮಂತಪ್ಪ, ಬಂಗಾರಪ್ಪ, ನಾಗೇಂದ್ರಪ್ಪ, ಗುರುಸಿದ್ದಪ್ಪ, ಪುಟ್ಟಪ್ಪ, ನರಸಿಂಹಪ್ಪ, ಸಿ.ತಿಪ್ಪೇಸ್ವಾಮಿ, ಚೌಡಪ್ಪ ಇತರರು ಉಪಸ್ಥಿತರಿದ್ದರು.

- - -

-18ಜೆ.ಜಿ.ಎಲ್.1:

ಜಗಳೂರು ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಜಮ್ಮಾಪುರ ಬಿ.ಆರ್.ರಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.