ಮನರಂಜನೆಯಿಂದ ಮನೋಲ್ಲಾಸ: ನ್ಯಾ. ಅನುಪಮ

| Published : Mar 09 2025, 01:46 AM IST

ಸಾರಾಂಶ

ಮೊಬೈಲ್, ಟಿವಿಗಳ ಬಳಕೆ ಹೆಚ್ಚಿಗೆ ಇರುವಂತಹ ಸಂದರ್ಭದಲ್ಲಿ ವಕೀಲರು ಕಲೆಯನ್ನು ಅಭಿನಯಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷದಾಯಕ ಎಂದು ನ್ಯಾಯಾಲಯದ ಪ್ರಧಾನ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಅನುಪಮ ಡಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಮೊಬೈಲ್, ಟಿವಿಗಳ ಬಳಕೆ ಹೆಚ್ಚಿಗೆ ಇರುವಂತಹ ಸಂದರ್ಭದಲ್ಲಿ ವಕೀಲರು ಕಲೆಯನ್ನು ಅಭಿನಯಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷದಾಯಕ ಎಂದು ನ್ಯಾಯಾಲಯದ ಪ್ರಧಾನ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಅನುಪಮ ಡಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಚನ್ನಬಸವೇಶ್ವರ ಕೃಪ ಪೋಷಿತ ನಾಟಕ ಮಂಡಳಿ ಹಾಗೂ ಗುಬ್ಬಿ ತಾಲೂಕು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ದಿನಗಳಲ್ಲಿ ನಾವುಗಳ ಅಂಗುಲಿಮಾಲ, ಗೌತಮ ಬುದ್ಧ ನಾಟಕಗಳನ್ನು ಆಡಿದ ಜ್ಞಾಪಕ ಆಗುತ್ತಿದೆ. ಇಂದು ರಾತ್ರಿಯಲ್ಲ ನಾಟಕ ಅಭಿನಯ ಮಾಡುವುದು ಆಶ್ಚರ್ಯ. ಒತ್ತಡದ ಕೆಲಸದ ನಡುವೆ ಇಂತಹ ಮನೋರಂಜನೆ ಕಾರ್ಯಕ್ರಮಗಳು ಮಾಡಿದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಮಧುಸೂದನ್ ಮಾತನಾಡಿ, ನಾಟಕದಲ್ಲಿ ಬರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕು ಸಾಗಿಸಬೇಕು. ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ನಾಟಕ ಕಲೆಯನ್ನು ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಉತ್ತಮ ಮೌಲ್ಯ ಹಾಗೂ ಸಂದೇಶಗಳನ್ನು ಸಾರುವ ಪೌರಾಣಿಕ ನಾಟಕಗಳು ಪೂರ್ವಜರ ಕೊಡುಗೆಗಳಾಗಿವೆ ಎಂದರು. ವಕೀಲರ ಸಂಘದ ಅಧ್ಯಕ್ಷ ಬಿ.ಕೆ ಚಿದಾನಂದ್ ಮಾತನಾಡಿ, ಕೋವಿಡ್ ಬಂದ ಕಾರಣ ನಾಟಕದ ಅಭ್ಯಾಸ ನಿಲ್ಲಿಸಿದ್ದೆವು. ಈಗ ಇದು ಕೈಗೂಡಿರುವುದರಿಂದ ವಕೀಲರೆಲ್ಲರೂ ಸೇರಿ ಅಭಿನಯಿಸುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಅಧಿಕ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಪೂರ್ಣಿಮಾ ಕೆ ಯಾದವ್, ಪ್ರಧಾನ ನ್ಯಾಯಾಧೀಶರಾದ ಡಿ.ಎಸ್.ವಿನೂತ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಆರ್.ರಾಜಣ್ಣ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೇಮ್ ಕುಮಾರ್, ಉಮೇಶ್, ಷಡಕ್ಷರಿ, ಸರ್ಕಾರಿ ವಕೀಲ ನಿರಂಜನಮೂರ್ತಿ, ಶಿವಯೋಗಿ, ಸುಧೀಂದ್ರ, ಮುಖಂಡರಾದ ಜಿಎನ್ ಬೆಟ್ಟಸ್ವಾಮಿ, ಹೊನ್ನಗಿರೆ ಗೌಡ, ದಕ್ಷಿಣಾಮೂರ್ತಿ, ಪಟ್ಟಣ ಪಂಚಾಯತಿ ಸದಸ್ಯರಾದ ಶಿವಕುಮಾರ್,ಕೃಷ್ಣಮೂರ್ತಿ, ಮಾಜಿ ಸದಸ್ಯ ಕೃಷ್ಣಪ್ಪ, ಪಾಪಂ ಮುಖ್ಯ ಅಧಿಕಾರಿ ಮಂಜುಳಾದೇವಿ, ಕಲಾವಿದ ಕರಿಯಪ್ಪ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಕಲಾವಿದರು ಇತರರು ಇದ್ದರು.