ದೇವಲಾಪುರ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯರಿಗೆ ಸತ್ಕಾರ

| Published : Jul 15 2025, 01:08 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ದೇವಲಾಪುರ ಮಾದರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ನೂತನವಾಗಿ ಆಯ್ಕೆಯಾದ ಸದಸ್ಯರುಗಳು ಶಾಲೆಯ ವತಿಯಿಂದ ಸತ್ಕರಿಸಿ ವಿದ್ಯಾರ್ಥಿಗಳಿಂದ ಸಂಸತ್ತನ್ನು ರಚಿಸಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ದೇವಲಾಪುರ

ಬೈಲಹೊಂಗಲ ತಾಲೂಕಿನ ದೇವಲಾಪುರ ಮಾದರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ನೂತನವಾಗಿ ಆಯ್ಕೆಯಾದ ಸದಸ್ಯರುಗಳು ಶಾಲೆಯ ವತಿಯಿಂದ ಸತ್ಕರಿಸಿ ವಿದ್ಯಾರ್ಥಿಗಳಿಂದ ಸಂಸತ್ತನ್ನು ರಚಿಸಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕ ಉದಯ ಬೆಳಗಾವಿ ಮಾತನಾಡಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಾಲೆಯ ಹೆಮ್ಮೆಯನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ಎಲ್ಲ ಶಿಕ್ಷಕರ ವೃಂದ ಹಾಗೂ ಸದಸ್ಯರು ಸೇರಿ ಉತ್ತಮ ಫಲಿತಾಂಶ ನೀಡಲು ಶ್ರಮಿಸಬೇಕು ಎಂದು ಕೋರಿದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಈಶ್ವರ ಉಳ್ಳೆಗಡ್ಡಿ ಮಾತನಾಡಿ, ಶಾಲೆಗೆ ಉತ್ತಮ ಫಲಿತಾಂಶ ಬರಬೇಕೆಂದರೇ ವಿದ್ಯಾರ್ಥಿ, ಶಿಕ್ಷಕರು, ಪಾಲಕರ ಪಾತ್ರದ ಮಹತ್ವದ್ದಾಗಿದೆ ಎಂದು ವಿವರಿಸಿದರು.ಮುಖ್ಯೋಪಾಧ್ಯಾಯ ಗಾಂಧಿ ಮರೆನ್ನವರ್ ಮಾತನಾಡಿ, ಶಾಲೆಗೆ ಈ ವರ್ಷವೂ ಉತ್ತಮ ಫಲಿತಾಂಶ ನೀಡಲು ಎಲ್ಲ ಶಿಕ್ಷಕರು ಶ್ರಮಿಸುತ್ತೇವೆ. ಇದಕ್ಕೆ ಎಲ್ಲ ಗುರು-ಹಿರಿಯರ ಮತ್ತು ಪಾಲಕರ ಸಹಕಾರ ಅಗತ್ಯವಿದೆ ಎಂದು ಕೋರಿದರು.ಈ ವೇಳೆ ಎಸ್‌ಡಿಎಂಸಿಯ ಎಲ್ಲ ಸದಸ್ಯರು ಗ್ರಾಮದ ಗುರು-ಹಿರಿಯರು, ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಯಶಸ್ವಿಗೆ ಯುವ ಆವೃತ್ತಿ ಪೂರಕ

ಕನ್ನಡಪ್ರಭ ಯುವ ಆವೃತ್ತಿ ವಿತರಣೆಯಲ್ಲಿ ಈಶ್ವರ ಉಳ್ಳೆಗಡ್ಡಿ ಅಭಿಪ್ರಾಯಕನ್ನಡಪ್ರಭ ವಾರ್ತೆ ದೇವಲಾಪುರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿಯೇ ಹೊರ ತಂದಿರುವ ಕನ್ನಡಪ್ರಭದ ಯುವ ಆವೃತ್ತಿ ವಿದ್ಯಾರ್ಥಿಗಳ ಯಶಸ್ವಿಗೆ ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಈಶ್ವರ ಉಳ್ಳೆಗಡ್ಡಿ ಹೇಳಿದರು.ಬೈಲಹೊಂಗಲ ತಾಲೂಕಿನ ದೇವಲಾಪುರ ಮಾದರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ವಿತರಿಸಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಳೆದ 4 ವರ್ಷಗಳಿಂದ ಪ್ರೊ.ವಿಜಯ ಮರೆಪ್ಪ ಮರೆಪ್ಪನವರು ನೀಡುತ್ತ ಬಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ತೆಗೆದುಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಡಿ.ಜಿ.ಜಿಡ್ಡಿಮನಿ, ಇಂಗ್ಲಿಷ್ ಶಿಕ್ಷಕಿ ಮಂಜುಳಾ ತಡಾಳ್, ಕನ್ನಡ ಶಿಕ್ಷಕಿ ಎಂ.ಆರ್.ರೋಡಬಸನ್ನವರ, ಸಮಾಜ ವಿಜ್ಞಾನ ಶಿಕ್ಷಕ ಎಸ್.ಎಸ್.ಚಳಕೊಪ್ಪ, ಹಿಂದಿ ಶಿಕ್ಷಕ ಮಹಾದೇವ ಕರಾಳ, ವಿಜ್ಞಾನ ಶಿಕ್ಷಕಿ ಮುಗಸಖಾನ್‌ ಬಾಗೇವಾಡಿ, ಚಿತ್ರಕಲಾ ಶಿಕ್ಷಕ ಎ.ಆರ್‌.ಯರಗಟ್ಟಿ, ಎಸ್‌ಡಿಎಂಸಿ ಸದಸ್ಯರುಗಳಾದ ಶಶಿಧರ್ ಹಣಬರಟ್ಟಿ, ಮಕ್ತುಂ ನದಾಫ, ರಾಜು ಪಾಟೀಲ, ಜಗದೀಶ್ ಹಂಚಿಮನಿ, ಯಲ್ಲಪ್ಪ ಬೈರಣ್ಣವರ, ದೀಪಾ ಸಾಧುನವರ, ಭಾರತಿ ಭಾಂವಿ, ಬಸಮ್ಮ ಗಣಾಚಾರಿ, ಗ್ರಾಮದ ಹಿರಿಯರಾದ ಶಂಭು ರುದ್ರಾಪುರ, ಶೇಖನಗೌಡ ಪಾಟೀಲ, ರಾಮ ದಳವಾಯಿ, ರಮೇಶ ನಾಯ್ಕರ್, ಬಾಲೇಶ್ ಉಪ್ಪಾರ, ಶಶಿಧರ್ ಬಂದಕ್ಕನವರ, ಸುರೇಶ ನಾಯ್ಕರ್, ಬಿ.ಎಸ್.ಪಾಟೀಲ, ಗುರುದೇವ್ ಮೂಲಿಮನಿ, ಶಾಂತಿನಾಥ ಉಪಾಧ್ಯ, ಪತ್ರಕರ್ತ ವಿನೋದ ಮರೆಪ್ಪನವರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಳೆದ 4 ವರ್ಷಗಳಿಂದ ಪ್ರೊ.ವಿಜಯ ಮರೆಪ್ಪ ಮರೆಪ್ಪನವರು ನೀಡುತ್ತ ಬಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು.

-ಈಶ್ವರ ಉಳ್ಳೆಗಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು.