ಕ್ರೀಡೆಯಿಂದ ಮನರಂಜನೆ ಜತೆಗೆ ಆರೋಗ್ಯದ ರಕ್ಷಣೆ

| Published : Jun 21 2024, 01:05 AM IST

ಕ್ರೀಡೆಯಿಂದ ಮನರಂಜನೆ ಜತೆಗೆ ಆರೋಗ್ಯದ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನರಂಜನೆಯ ಜತೆಗೆ ಆರೋಗ್ಯದ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಕೆ.ಹರೀಶ್ ತಿಳಿಸಿದರು. ಹಾಸನದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಯಾಡ್ಮಿಂಟನ್ ಪಂದ್ಯಾವಳಿ । ಕ್ರೀಡಾ ಇಲಾಖೆಯ ಸಿ.ಕೆ.ಹರೀಶ್ । ಪತ್ರಿಕಾ ದಿನಾಚರಣೆ । ಎ.ಬಿ.ಮುರಳಿ ಸ್ಮರಣಾರ್ಥ ಪತ್ರಕರ್ತರಿಗಾಗಿ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಹಾಸನ

ಸದಾ ಮಾನಸಿಕ ಒತ್ತಡದ ನಡುವೆ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಯೂ ಗಮನಹರಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನರಂಜನೆಯ ಜತೆಗೆ ಆರೋಗ್ಯದ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಕೆ.ಹರೀಶ್ ತಿಳಿಸಿದರು.

ಡೆಯಲ್ಲಿ ಭಾಗವಹಿಸುವುದರಿಂದ ಮನರಂಜನೆಯ ಜತೆಗೆ ಆರೋಗ್ಯದ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಕೆ.ಹರೀಶ್ ತಿಳಿಸಿದರು. ಹಾಸನದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ಹಾಸನವಾಣಿ ವ್ಯವಸ್ಥಾಪಕ ಸಂಪಾದಕ ಎ.ಬಿ.ಮುರಳಿ ಅವರ ಸ್ಮರಣಾರ್ಥ ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಜತೆಗೆ ಸಹಕಾರ ಮನೋಭಾವ, ಇತರರನ್ನು ಗೌರವಿಸುವುದು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವು ಬೆಳೆಯುತ್ತದೆ. ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

‘ಪ್ರತಿಯೊಬ್ಬರೂ ದಿನವೂ ಒಂದು ಗಂಟೆ ಬಿಡುವು ಮಾಡಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಉತ್ತಮ. ಪತ್ರಕರ್ತರು ತಮ್ಮ ವೃತ್ತಿ ಜತೆಗೆ ಕೌಟುಂಬಿಕ ಬದುಕಿನ ಏಳಿಗೆಗೆ ಸಮಯ ಮೀಸಲಿಡಬೇಕು. ಪ್ರತಿ ವರ್ಷ ಕ್ರೀಡಾ ಚಟುವಟಿಕೆಗೆ ನಮ್ಮ ಸಹಕಾರ ಇರಲಿದೆ. ಕ್ರೀಡಾಕೂಟ ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದರು .

ವಿಜೇತ ಮೂರು ತಂಡಗಳಿಗೆ ವೈಯಕ್ತಿಕವಾಗಿ ೩೦೦೦ ರು., ೨೦೦೦ ರು. ಹಾಗೂ ೧೦೦೦ ರು. ನಗದು ಬಹುಮಾನ ಘೋಷಣೆ ಮಾಡಿದರು.

ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಮಾತನಾಡಿ, ಪತ್ರಕರ್ತರ ಸಂಘವು ಸಂಘಟಿತವಾಗಿ ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ಸಂತಸ ವಿಷಯ. ಇದೇ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿ ಎಂದರು.

ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ.ಬಶೀರ್ ಮಾತನಾಡಿ, ಪತ್ರಕರ್ತರು ವಾರ್ಷಿಕ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹಕ್ಕೆ, ಮನಸ್ಸಿಗೆ ಉತ್ತಮ ವ್ಯಾಯಾಮವಾಗಲಿದೆ. ಸ್ನೇಹಿತರೊಂದಿಗೆ ಜತೆಗೂಡಿದಲ್ಲಿ ಸಂಬಂಧ ವೃದ್ಧಿಗೂ ಸಹಕಾರಿಯಾಗಲಿದೆ. ಮಾಧ್ಯಮ ಸಮುದಾಯದ ಭಾವನೆ ಬೆಳವಣಿಗೆಗೆ ಇದು ಉತ್ತಮ ವೇದಿಕೆ ಎಂದು ತಿಳಿಸಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್ ವೇಣು ಕುಮಾರ್ ಮಾತನಾಡಿ, ‘ಪ್ರತಿ ವರ್ಷವೂ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದು ಈ ಬಾರಿ ನಮ್ಮೆಲ್ಲರ ಹಿತೈಷಿ, ಸ್ನೇಹಿತ ಎ.ಬಿ ಮುರಳಿ ಅವರ ಸ್ಮರಣಾರ್ಥ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆ ಸಹಕಾರಿಯಾಗಿದ್ದು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸತ್ಯದ ಹೊನಲು ಪತ್ರಿಕೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ ತರುಣ್ ಭಾರತೀಯ ಸೇನೆಗೆ ನೇಮಕಗೊಂಡ ಹಿನ್ನೆಲೆ ಸಂಘದಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .

ಪತ್ರಕರ್ತರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿಯ ರವಿನಾಕಲಗೂಡು, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್, ಉಪಾಧ್ಯಕ್ಷ ಕೆ.ಎಂ.ಹರೀಶ್, ಎಚ್.ಟಿ.ಮೋಹನ್, ಕಾರ್ಯದರ್ಶಿ ಸಿ.ಬಿ.ಸಂತೋಷ್, ವೀರಶೈವ ಮುಖಂಡ, ಕ್ರೀಡಾಪಟು ಸಂಗಮ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ಕಿರಿಯ ಸದಸ್ಯರು ಹಾಜರಿದ್ದರು.