''ಯುವನಿಧಿ'' ನೋಂದಣಿಗೆ ನಿರುದ್ಯೋಗಿಗಳ ಉತ್ಸಾಹ!

| Published : Jan 10 2024, 01:46 AM IST

ಸಾರಾಂಶ

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿಗೆ ಚಾಲನೆ ದೊರೆತು 14 ದಿನಗಳು ಕಳೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರದಲ್ಲಿ ನೋಂದಣಿ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ.

ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿಗೆ ಚಾಲನೆ ದೊರೆತು 14 ದಿನಗಳು ಕಳೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ರಾಮನಗರದಲ್ಲಿ ನೋಂದಣಿ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ.

ಜಿಲ್ಲೆಯಲ್ಲಿ 2023ರಲ್ಲಿ ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ಇನ್ನೂ ಕೆಲಸಕ್ಕೆ ಸೇರದ, ಸ್ವಯಂ ಉದ್ಯೋಗವಿಲ್ಲದ ಅಥವಾ ಬೇರೆ ಕೋರ್ಸ್‌ಗಳಿಗೆ ದಾಖಲಾಗದ ನಿರುದ್ಯೋಗಿಗಳು ಯುವನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಪದವಿ ಮುಗಿಸಿದವರಿಗೆ ಮಾಸಿಕ 3000 ರು. ಮತ್ತು ಡಿಪ್ಲೊಮಾ ಮಾಡಿದವರಿಗೆ 1500 ರು. ನೀಡಲಾಗುತ್ತದೆ.

708 ಅರ್ಜಿಗಳು ಸಲ್ಲಿಕೆ :

ಜಿಲ್ಲೆಯ 5 ತಾಲೂಕುಗಳಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಅನೇಕ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳಿವೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಂದ ತೇರ್ಗಡೆ ಹೊಂದುತ್ತಾರೆ. 2023ರಲ್ಲೂ ಅನೇಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಅನೇಕರಿಗೆ ಯುವನಿಧಿ ಸೌಲಭ್ಯ ಪಡೆಯಲು ಅವಕಾಶವಿದೆ. ಡಿ.26 ರಿಂದ ಜ. 9ರವರೆಗೆ ಒಟ್ಟು 708 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಯೋಜನೆಯ ಪ್ರಚಾರ:

ಯುವನಿಧಿ ಯೋಜನೆಯನ್ನು ಯಶಸ್ವಿಗೊಳಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ನಿರೀಕ್ಷೆಯಷ್ಟು ನೋಂದಣಿಯಾಗದ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಹೆಚ್ಚಿಸಲಾಗಿದೆ. ಯೋಜನೆ ಕುರಿತು ಉದ್ಯೋಗ ವಿನಿಮಯ ಮತ್ತು ಕೌಶಲಾಭಿವೃದ್ಧಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದಿಂದ ಪೋಸ್ಟರ್‌ ಮತ್ತು ಜಾಹೀರಾತಿನ ಮೂಲಕವೂ ಮಾಹಿತಿ ನೀಡಲಾಗುತ್ತಿದೆಯಾದರೂ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ತೀರಾ ಕಡಿಮೆಯಿದೆ.

ಇದೀಗ ಜಿಲ್ಲೆಯಲ್ಲಿ ಪ್ರತಿ ಕಾಲೇಜು, ಗ್ರಾಮಗಳಲ್ಲೂ ಯುವನಿಧಿ ಯೋಜನೆಯ ನೋಂದಣಿ, ಅದರ ಉಪಯೋಗದ ಬಗ್ಗೆ ಪ್ರಚಾರ ಮಾಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಮೂಲಕ ನೋಂದಣಿ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕೆಲವರು ದಾಖಲೆಗಳ ಕೊರತೆಯಿಂದ ನೋಂದಣಿಯಿಂದ ದೂರು ಉಳಿಯುತ್ತಿದ್ದು, ನೋಂದಣಿ ಹೆಚ್ಚಿಸುವ ಸಾಕಷ್ಟು ಕ್ರಮವನ್ನು ಗ್ರಾಮ, ತಾಲೂಕು ಮಟ್ಟದಲ್ಲಿ ಮಾಡಲಾಗಿದೆ.

5ನೇ ಗ್ಯಾರಂಟಿಗೂ ಕಾಡುತ್ತಿದೆ ದಾಖಲೆಗಳ ಸಮಸ್ಯೆ:

ಸರ್ಕಾರದ ಮೊದಲ 4 ಯೋಜನೆಗಳ ಪೈಕಿ ಶಕ್ತಿ ಯೋಜನೆಯನ್ನು ಬಿಟ್ಟರೆ ಉಳಿದ ಮೂರು ಯೋಜನೆಗಳಿಗೂ ದಾಖಲೆಗಳ ಸಮಸ್ಯೆ ಕಾಡಿತ್ತು. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯಕ್ಕೆ ಬ್ಯಾಂಕ್‌ ಖಾತೆ ಲಿಂಕ್‌ ಆಗದಿರುವುದು, ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದಿರುವ ಸಮಸ್ಯೆಗಳಾದರೆ ಗೃಹಜ್ಯೋತಿ ಯೋಜನೆಗೆ ವಿದ್ಯುತ್‌ ಸಂಪರ್ಕ ಮತ್ತೊಬ್ಬರ ಹೆಸರಿನಲ್ಲಿರುವ ಸಮಸ್ಯೆ ಆರಂಭದಲ್ಲಿ ಕಾಡಿತ್ತು. ಅದರಂತೆ ಈಗ ಯುವ ನಿಧಿಗೂ ಇಂತಹದ್ದೇ ಸಮಸ್ಯೆಯಾಗುತ್ತಿದೆ.

ವಿಶ್ವವಿದ್ಯಾನಿಲಯಗಳು ನ್ಯಾಷನಲ್ ಅಕಾಡಮಿಕ್ ಡೆಪೋಸಿಟರಿ (ನ್ಯಾಡ್) - ಡಿಜಿಲಾಕರ್ ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಮಾಡದಿರುವ ಕಾರಣ ಯುವಕರು ಅರ್ಜಿ ಸಲ್ಲಿಸಲು ನಿರಾಸಕ್ತಿ ತೋರಲು ಕಾರಣ ಎಂದು ಹೇಳಲಾಗುತ್ತಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ವಿವಿಗಳು ನ್ಯಾಡ್ - ಡಿಜಿಲಾಕರ್ ನಲ್ಲಿ ಶೈಕ್ಷಣಿಕ ದಾಖಲೆಗಳ್ನು ಸಂಗ್ರಹಿಸಿ ಇಡಬೇಕಾಗುತ್ತದೆ. ಆದರೆ, ಬಹುತೇಕ ವಿವಿಗಳು 2022-23ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ನ್ಯಾಡ್ - ಡಿಜಿಲಾಕರ್ ನಲ್ಲಿ ಸಂಗ್ರಹಿಸಿಲ್ಲ. ಹಾಗಾಗಿ ಯುವನಿಧಿಗೆ ಅರ್ಜಿಗಳನ್ನು ಸಲ್ಲಿಸಲು ಫಲಾನುಭವಿಗಳು ಪರದಾಡುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಬಾಕ್ಸ್ ...

ಯುವನಿಧಿಗೆ ಯಾರು ಅರ್ಹರು?

ಕಾಂಗ್ರೆಸ್‌ ಸರಕಾರದ 5ನೇ ಮತ್ತು ಕೊನೆಯ ಗ್ಯಾರಂಟಿ ಯುವನಿಧಿಯಾಗಿದೆ. 2022-23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಪದವಿ ಪಡೆದು 6 ತಿಂಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಮಾಸಿಕ ಭತ್ಯೆ ಪಡೆಯಲು ಅರ್ಹರಾಗುತ್ತಾರೆ. ಇವರು ಯುವನಿಧಿ ಯೋಜನೆಗೆ ನೋಂದಾಯಿಸಿಕೊಂಡು, ಯೋಜನೆಯ ಅನುಕೂಲ ಪಡೆಯಬಹುದು.

ಪದವೀಧರರಿಗೆ ಮಾಸಿಕ 3 ಸಾವಿರ ರು. ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1,500 ರು. ಮಾಸಿಕ ಭತ್ಯೆ ಲಭ್ಯವಾಗಲಿದೆ. ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಈ ಮಾಸಿಕ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗ ಲಭಿಸದಿದ್ದರೆ 2 ವರ್ಷಗಳ ತನಕ ಈ ಭತ್ಯೆ ಪಡೆಯಬಹುದು. ಒಂದು ವೇಳೆ ಮುಂಚಿತವಾಗಿಯೇ ಉದ್ಯೋಗ ಲಭಿಸಿದರೆ ಮಾಸಿಕ ಭತ್ಯೆ ನಿಂತು ಹೋಗುತ್ತದೆ.

ಬಾಕ್ಸ್ ....................

ಯಾರು ಅರ್ಹರಲ್ಲ?

ಎಲ್ಲ ಪದವೀಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ-ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವವರು, ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಯುವನಿಧಿಗೆ ಅರ್ಹರಲ್ಲ.ಬಾಕ್ಸ್ .....

ಅರ್ಜಿ ಸಲ್ಲಿಕೆ ಹೇಗೆ?

ಯುವನಿಧಿ ಯೋಜನೆಗೆ ಕನಿಷ್ಠ 6 ವರ್ಷಗಳವರೆಗೆ ಕರ್ನಾಟಕದಲ್ಲಿ ವಾಸವಿದ್ದು, ಪದವಿ, ಡಿಪ್ಲೊಮಾ ಮಾಡಿದವರು ಅರ್ಹರಾಗಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಜತೆಗೆ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ ಕಡ್ಡಾಯವಾಗಿ ಇರಬೇಕಾಗಿದ್ದು, ಸೇವಾಸಿಂಧು ಪೋರ್ಟಲ್‌ ಮೂಲಕ ಅಥವಾ ಬಾಪೂಜಿ ಸೇವಾಕೇಂದ್ರ ಮತ್ತು ಗ್ರಾಮ ಒನ್‌ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕೋಟ್ ...

ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ರಾಮನಗರ ಜಿಲ್ಲೆಯಲ್ಲಿ ನಿರುದ್ಯೋಗಿಗಳು ಯುವನಿಧಿಗೆ ಅರ್ಜಿ ಸಲ್ಲಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವು ದಾಖಲೆಗಳ ಸಮಸ್ಯೆಯಿಂದ ಮತ್ತು ಸರಿಯಾದ ಮಾಹಿತಿ ಇಲ್ಲದೇ ನಿರುದ್ಯೋಗಿಗಳು ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕುತ್ತಿರಬಹುದು. ಆದ್ದರಿಂದ ಯೋಜನೆ ಮತ್ತು ಅರ್ಜಿ ಸಲ್ಲಿಕೆ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕುವಾರು ನೋಂದಣಿ ಮೇಳ ಆಯೋಜಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಳಿಸಲು ಕ್ರಮ ವಹಿಸಲಾಗುವುದು.

- ಎಂ.ಆರ್. ಗೋವಿಂದರಾಜ್, ಜಿಲ್ಲಾ ಉದ್ಯೋಗಾಧಿಕಾರಿ, ರಾಮನಗರ.

ಬಾಕ್ಸ್ ....................

ತಾಲೂಕು ಅರ್ಜಿ ಸಲ್ಲಿಕೆ

ಚನ್ನಪಟ್ಟ..

151

ಕನಕಪು..

242

ರಾಮನಗ..

183

ಮಾಗಡ..

132

------------------------------------

ಒಟ್ಟ..

708

-----------------------------------

9ಕೆಆರ್ ಎಂಎನ್‌ 2.ಜೆಪಿಜಿ

ಯುವನಿಧಿ ಲೋಗೋ