ಕರಾವಳಿ ಉತ್ಸವ ಹಾಗೂ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಛಾಯಾಗ್ರಹಣ, ವೀಡಿಯೋಗ್ರಹಣ ಹಾಗೂ ಫೋಟೋ/ರೀಲ್ಸ್ ಸ್ಪರ್ಧೆಗಳ ಆಯೋಜನೆ ಜವಾಬ್ದಾರಿಯನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. - ಉಡುಪಿ ಜಿಲ್ಲೆ (ಎಸ್ಕೆಪಿಎ) ಸಂಸ್ಥೆಗೆ ನೀಡುವಂತೆ ಸಂಸ್ಥೆಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಮಂಗಳೂರು : ಕರಾವಳಿ ಉತ್ಸವ ಹಾಗೂ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಛಾಯಾಗ್ರಹಣ, ವೀಡಿಯೋಗ್ರಹಣ ಹಾಗೂ ಫೋಟೋ/ರೀಲ್ಸ್ ಸ್ಪರ್ಧೆಗಳ ಆಯೋಜನೆ ಜವಾಬ್ದಾರಿಯನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. - ಉಡುಪಿ ಜಿಲ್ಲೆ (ಎಸ್ಕೆಪಿಎ) ಸಂಸ್ಥೆಗೆ ನೀಡುವಂತೆ ಸಂಸ್ಥೆಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಮನವಿ ಸಲ್ಲಿಸಲಾಗಿದೆ.ದ.ಕ. ಜಿಲ್ಲೆಯ ನೂರಾರು ವೃತ್ತಿಪರ ಛಾಯಾಗ್ರಾಹಕರು ಮತ್ತು ವೀಡಿಯೋಗ್ರಾಹಕರನ್ನು ಪ್ರತಿನಿಧಿಸುತ್ತಿದ್ದೇವೆ. ಕರಾವಳಿ ಭಾಗದಲ್ಲಿ ನಡೆಯುವ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಯಶಸ್ಸಿಗೆ ನಮ್ಮ ಸಂಘಟನೆಯ ಸದಸ್ಯರು ನಿರಂತರ ಶ್ರಮಿಸುತ್ತಿದ್ದಾರೆ. ಮಂಗಳೂರಿನಲ್ಲಿ ಪ್ರತಿವರ್ಷ ಒಂದು ತಿಂಗಳ ಕಾಲ ವಿಜೃಂಭಣೆಯಿಂದ ನಡೆಯುವ ಕರಾವಳಿ ಉತ್ಸವ, ಬೀಚ್ ಉತ್ಸವ, ಕ್ರೀಡೋತ್ಸವ, ರಸಮಂಜರಿ, ಸಾಂಸ್ಕೃತಿಕ ನೈಟ್ ಸೇರಿದಂತೆ ವಿವಿಧ ಬೃಹತ್ ಕಾರ್ಯಕ್ರಮಗಳು ಜಿಲ್ಲೆಯ ಹೆಮ್ಮೆಯ ಪ್ರತೀಕಗಳಾಗಿವೆ. ಮುಂಬರುವ ಕರಾವಳಿ ಉತ್ಸವ, ಬೀಚ್ ಉತ್ಸವ ಹಾಗೂ ಜಿಲ್ಲಾಡಳಿತ/ಪ್ರವಾಸೋದ್ಯಮ ಇಲಾಖೆ ಆಯೋಜಿಸುವ ಎಲ್ಲ ಸರ್ಕಾರಿ ಕಾರ್ಯಕ್ರಮಗಳ ಛಾಯಾಗ್ರಹಣ ಹಾಗೂ ವೀಡಿಯೋಗ್ರಹಣದ ಜವಾಬ್ದಾರಿ ಮತ್ತು ಕಾರ್ಯಾದೇಶವನ್ನು ಆದ್ಯತೆಯ ಮೇರೆಗೆ ನಮ್ಮ ‘ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್’ನ ಮಂಗಳೂರು ವಲಯದ ಸದಸ್ಯರಿಗೆ ನೀಡಬೇಕು. ಕರಾವಳಿ ಉತ್ಸವದ ಅಂಗವಾಗಿ ಸಾರ್ವಜನಿಕರು ಹಾಗೂ ಯುವಜನತೆಯನ್ನು ಆಕರ್ಷಿಸಲು ಆಯೋಜಿಸಲಾಗುವ ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್ ಸ್ಪರ್ಧೆಗಳನ್ನು ನಮ್ಮ ಸಂಸ್ಥೆಯ ವತಿಯಿಂದಲೇ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಲು ಅವಕಾಶ ನೀಡಬೇಕು. ಸ್ಥಳೀಯ ವೃತ್ತಿಪರರಿಗೆ ಪ್ರೋತ್ಸಾಹ ನೀಡುವ ಮೂಲಕ ಇದೇ ವೃತ್ತಿಯನ್ನು ನಂಬಿಕೊಂಡಿರುವ ನೂರಾರು ಕುಟುಂಬಗಳ ಆರ್ಥಿಕತೆಗೆ ಬೆಂಬಲ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಸಚಿವ ಯು.ಟಿ.ಖಾದರ್ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಯಿತು.
