ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ಎಂಟ್ರಿ-ಎಕ್ಸಿಟ್‌ ಕಾಮಗಾರಿ ಶೀಘ್ರ ಆರಂಭ: ಡಾ.ಮಂಜುನಾಥ್‌

| Published : Sep 03 2025, 01:00 AM IST

ಬೆಂ-ಮೈ ಎಕ್ಸ್ ಪ್ರೆಸ್ ವೇನಲ್ಲಿ ಎಂಟ್ರಿ-ಎಕ್ಸಿಟ್‌ ಕಾಮಗಾರಿ ಶೀಘ್ರ ಆರಂಭ: ಡಾ.ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಎಂಟ್ರಿ ಎಕ್ಸಿಟ್ ಕಾಮಗಾರಿಗಳು ಇನ್ನು 15 ದಿನದಲ್ಲಿ ಆರಂಭವಾಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಎಂಟ್ರಿ ಎಕ್ಸಿಟ್ ಕಾಮಗಾರಿಗಳು ಇನ್ನು 15 ದಿನದಲ್ಲಿ ಆರಂಭವಾಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಶೇಷಗಿರಿ ಹಳ್ಳಿ ಹಾಗೂ ಲಕ್ಷ್ಮೀಸಾಗರ ಗೇಟ್ ಬಳಿ ಉಂಟಾಗಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಂಟ್ರಿ, ಎಕ್ಟಿಟ್ ಕಾಮಗಾರಿಗೆ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಚಾಲನೆ ನೀಡಿದ್ದಾರೆ. ಇನ್ನೂ 15 ದಿನದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದರು.

ಎಕ್ಸ್ ಪ್ರೆಸ್ ವೇನ ಶೇಷಾಗಿರಿಹಳ್ಳಿ ಹಾಗೂ ಲಕ್ಷ್ಮೀಸಾಗರ ಗೇಟ್ ಗಳ ಬಳಿ ವಾಹನ ಸಂಚಾರ ಹಾಗೂ ಸ್ಥಳೀಯರ ಓಡಾಟಕ್ಕೆ ತೊಂದರೆ ಉಂಟಾಗುತ್ತಿರುವ ಕುರಿತು ಸ್ಥಳೀಯರು ಮನವಿ ಸಲ್ಲಿಸಿ ಸ್ಕೈ ವಾಕ್ ಮಾಡಿಕೊಡಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ಧಾಗಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಕೋಟ್ .................

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರಲ್ಲಿ ತಮಿಳುನಾಡು ಮತ್ತು ಕೇರಳದವರ ಪಾತ್ರ ಇರುವ ಸಾಧ್ಯತೆಗಳಿವೆ. ಹಾಗಾಗಿ ಇದನ್ನು ಕೇಂದ್ರದ ಏಜೆನ್ಸಿಯಿಂದ ತನಿಖೆ ನಡೆಯಬೇಕಿದೆ. ಆ ಭಾಗದ ಸಂಸದರು ಈಗಾಗಲೇ ಕೇಂದ್ರ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಎಸ್ ಐಟಿ ತನಿಖೆಯ ವರದಿ ಬರಲಿ,ಕೇಂದ್ರದ ತನಿಖೆಯೂ ಆಗಲಿ.

- ಡಾ.ಸಿ.ಎನ್.ಮಂಜುನಾಥ್ , ಸಂಸದರು, ಬೆಂ.ಗ್ರಾಮಾಂತರ ಕ್ಷೇತ್ರ

2ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ತಾಲೂಕಿನ ಶೇಷಗಿರಿ ಹಳ್ಳಿ ಬಳಿ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿ ಸಮಸ್ಯೆಯ ಕುರಿತು ಸಾರ್ವಜನಿಕರಿಂದ ಸಂಸದರು ಅಹವಾಲು ಸ್ವೀಕರಿಸಿದರು.