ಸಾರಾಂಶ
ಮುಂಡರಗಿ: ಸಾಮಾಜಿಕ ಕಾರ್ಯಕರ್ತ ದೇವು ಹಡಪದ ಅವರ 44ನೇ ಜನ್ಮದಿನದ ಅಂಗವಾಗಿ ಜು. 1ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಕೆಇಬಿ ಬಳಿಯ ಶುದ್ಧ ನೀರಿನ ಘಟಕ ಬಳಿ ಇರುವ ಸಮುದಾಯ ಭವನದಲ್ಲಿ ಶ್ರೀಬಸವೇಶ್ವರ ರಕ್ತ ಕೇಂದ್ರ, ದೇವು ಅಭಿಮಾನಿಗಳ ಬಳಗ, ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ರಕ್ತದಾನ ದಿನಾಚರಣೆ, ಪತ್ರಿಕಾ ದಿನಾಚರಣೆ, ವೈದ್ಯ ದಿನಾಚರಣೆ, ಯೋಗ ದಿನಾಚರಣೆ, ಪರಿಸರ ದಿನಾಚರಣೆ ಆಚರಿಸಲಾಗುವುದು ಎಂದು ಸಂಘಟನೆ ಮುಖ್ಯಸ್ಥ ಶಿವು ವಾಲಿಕಾರ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಂಘಟನೆಯ 15ನೇ ವಾರ್ಷಿಕೋತ್ಸವ ನಿಮಿತ್ತ 15 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬೆಳಗ್ಗೆ ಅನ್ನದಾನೀಶ್ವರ ಮಠದ ವಟುಗಳಿಗೆ ಉಚಿತ ನೋಟ್ ಬುಕ್, ಪೆನ್ನು ವಿತರಣೆ ಹಾಗೂ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಗುವುದು.ನಂತರ ಜರುಗುವ ಕಾರ್ಯಕ್ರಮದಲ್ಲಿ ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ, ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಕಲ್ಲಯ್ಯಜ್ಜನವರು, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಲಿದ್ದಾರೆ. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ ರಕ್ತದಾನ ಶಿಬಿರ ಉದ್ಘಾಟಿಸುವರು. ಸುರೇಶ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಶಿಳ್ಳಿಕ್ಯಾತರ, ಶಿವಾನಂದ ಹಡಪದ, ಸಿ.ಕೆ.ಎಸ್.ಕಡಣಿಶಾಸ್ತ್ರಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವೈ.ಎನ್. ಗೌಡರ, ಕರಬಸಪ್ಪ ಹಂಚಿನಾಳ, ಶೋಭಾ ಮೇಟಿ, ಹೇಮಗಿರೀಶ ಹಾವಿನಾಳ, ಶಿವಕುಮಾರಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ವೀರಯ್ಯಸ್ವಾಮಿ, ಎಂ.ಜಿ. ಗಚ್ಚಣ್ಣವರ, ಡಾ.ನಿಂಗು ಸೊಲಗಿ, ಎಸ್.ಎಸ್. ಗಡ್ಡದ, ಕೊಟ್ರೇಶಪ್ಪ ಅಂಗಡಿ, ಅಂದಪ್ಪ ಹಾರೋಗೇರಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.ಇದೇ ಸಂದರ್ಭದಲ್ಲಿ ಡಾ. ಲಕ್ಷ್ಮಣ ಪೂಜಾರ ಅವರಿಂದ ರಕ್ತದಾನ ಮಹತ್ವ ಕುರಿತು ಉಪನ್ಯಾಸ ಜರುಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಲಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ದೇವು ಹಡಪದ, ವೀರಣ್ಣ ಹಡಪದ, ಶರಣಪ್ಪ ಹೊಸಮನಿ, ಹನುಮಂತ ವಾಲಿಕಾರ, ಮಹಾಂತೇಶ ವಾಲಿಕಾರ, ವೀರಣ್ಣ ಬಸಾಪೂರ, ಬಸವರಾಜ ಹಡಪದ ಉಪಸ್ಥಿತರಿದ್ದರು.