ಸಾರಾಂಶ
ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಬೆರೆಯುತ್ತಿ ರುವುದರಿಂದ ಪರಿಸರ ಅಸಮತೋಲನದ ಜೊತೆಗೆ ಉತ್ತಮ ಪರಿಸರ ರಚನೆಗೆ ತೊಂದರೆಯಾಗುತ್ತಿದೆ ಎಂದು ಜೈನ್ ಎಂಜಿನಿಯರಿಂಗ್ ಕಾಲೇಜು ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಡಾ.ಎನ್.ರಘು ತಿಳಿಸಿದರು.
ಕನಕಪುರ: ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಬೆರೆಯುತ್ತಿ ರುವುದರಿಂದ ಪರಿಸರ ಅಸಮತೋಲನದ ಜೊತೆಗೆ ಉತ್ತಮ ಪರಿಸರ ರಚನೆಗೆ ತೊಂದರೆಯಾಗುತ್ತಿದೆ ಎಂದು ಜೈನ್ ಎಂಜಿನಿಯರಿಂಗ್ ಕಾಲೇಜು ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಡಾ.ಎನ್.ರಘು ತಿಳಿಸಿದರು.
ಜೈನ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ತಾಲೂಕಿನ ತೊಪ್ಪಗನಹಳ್ಳಿ ಮತ್ತು ಬಳೇಚನ್ನವಲಸೆ ಗ್ರಾಮಗಳಲ್ಲಿ ನೀರು ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ ಅರಿವು ಕಾರ್ಯಕ್ರಮದಲ್ಲಿ ಬಟ್ಟೆ ಬ್ಯಾಗ್‌ಗಳನ್ನು ಮನೆಮನೆಗೆ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಬಳಸಿದ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅದು ಪರಿಸರದೊಂದಿಗೆ ಬೆರೆಯುತ್ತದೆ. ಆದರೆ ಪ್ಲಾಸ್ಟಿಕ್ ವಸ್ತು ಗಳಲ್ಲಿ ಮಣ್ಣಲ್ಲಿ ನೀರಿನಲ್ಲಿ ಕರಗುವುದಿಲ್ಲ ಮತ್ತು ಹಾಳಾಗುವುದೂ ಇಲ್ಲ. ದನಕರುಗಳು, ಪ್ರಾಣಿ ಪಕ್ಷಿಗಳಿಗೆ ಇದರಿಂದ ತೊಂದರೆಯಾಗುವುದರ ಜೊತೆಗೆ ಮಣ್ಣಿನ ಫಲವತ್ತತೆಗೆ ಅಪಾಯಕಾರಿಯಾಗಿದೆ. ಆದ್ದರಿಂದ ಜನರು ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ವಸ್ತುಗಳನ್ನು ಶೇಖರಿಸಿ ಗ್ರಾಮ ಪಂಚಾಯತಿಯಿಂದ ಬರುವ ಕಸದ ವಾಹನಗಳಿಗೆ ನೀಡುವ ಮೂಲಕ ಪರಿಸರವನ್ನ ಕಾಪಾಡುವಂತೆ ಮನವಿ ಮಾಡಿದರು.ಉಪನ್ಯಾಸಕರಾದ ಆರ್.ನಿರ್ಮಲ, ಟಿ.ವಿಮಲ, ಕೀರ್ತನ ಘನಶ್ಯಾಮ್, ವಿಶ್ವನಾಥ್, ದೀಪಕ್, ಸಿಬ್ಬಂದಿಗಳಾದ ನಾಗೇಶ್ವರರಾವ್, ಶಶಿಕಲ, ಅನುಷಾ, ಚನ್ನಪ್ಪ, ಸುಮನ್, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.