ಸಾರಾಂಶ
ಪ್ರಕೃತಿಯ ಮಕ್ಕಳಾದ ನಮಗೆ ಪ್ರಕೃತಿ ಸಂರಕ್ಷಿಸುವ ಹೊಣೆಗಾರಿಕೆ ಬೇಕು. ಮನುಷ್ಯ ನಿಸರ್ಗದ ಮೂಲಕ ಅವಶ್ಯಕವಾದುದನ್ನು ಪಡೆಯಬೇಕು
ಗಂಗಾವತಿ: ಪರಿಸರ ನಾಶ ನಿಸರ್ಗದ ಮೇಲಿನ ಮಾನವ ದೌರ್ಜ್ಯನ್ಯ ಎಂದು ಪ್ರೊ. ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಪರಿಸರ ಪ್ರೇಮಿಗಳ ವತಿಯಿಂದ ಕಾಲೇಜಿನ ಆವರಣದಲ್ಲಿ ವಿವಿಧ ಬಗೆಯ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರಕೃತಿಯ ಮಕ್ಕಳಾದ ನಮಗೆ ಪ್ರಕೃತಿ ಸಂರಕ್ಷಿಸುವ ಹೊಣೆಗಾರಿಕೆ ಬೇಕು. ಮನುಷ್ಯ ನಿಸರ್ಗದ ಮೂಲಕ ಅವಶ್ಯಕವಾದುದನ್ನು ಪಡೆಯಬೇಕು ಹಾಗೂ ಎಲ್ಲ ಜೀವಿಗಳಿಗೂ ಅವರವರ ನ್ಯಾಯ ಸಮ್ಮತ ಪಾಲು ಸಿಗುವಂತೆ ನೋಡಿಕೊಳ್ಳಬೇಕು. ತನ್ನ ಧನಲಾಭದ ಉದ್ದೇಶಕ್ಕಾಗಿ ನಿಸರ್ಗವನ್ನು ಅನಾವಶ್ಯಕವಾಗಿ ಶೋಷಣೆ ಮಾಡಬಾರದು. ಏಕೆಂದರೆ ಅದು ದೌರ್ಜನ್ಯವಾಗುತ್ತದೆ ಎಂದರು.
ಈ ವೇಳೆ ಡಾ. ಕೆ.ಎಸ್. ಶೋಭಾ, ಸಹಾಯಕ ಪ್ರಾಧ್ಯಾಪಕರಾದ ವಿರೂಪಾಕ್ಷ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ತಾತಪ್ಪ ಕೆ., ಇಕೋ ಕ್ಲಬ್ ಸಂಯೋಜಕರಾದ ಡಾ. ಶಶಿಕುಮಾರ, ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ರವಿಕುಮಾರ, ಅಧ್ಯಾಪಕರಾದ ಶಂಕ್ರಪ್ಪ, ಜಬೀನಾ, ವಿನಾಯಕ, ವೆಂಕಟರಾಜು,ಸಂಧ್ಯಾ, ಡಾ. ದೇವರಾಜ್, ರಾಧಾ ಇದ್ದರು.;Resize=(128,128))
;Resize=(128,128))
;Resize=(128,128))