ಸಾರಾಂಶ
ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದು, ಪರಿಸರ ನಾಶಮಾಡಿ ನಿರಂತರವಾಗಿ ಭೂಮಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗಿ ಕಾಲ ಕಾಲಕ್ಕೆ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ವಿಶ್ವ ಭೂಮಿ ದಿನವನ್ನು ಆಚರಿಸುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕೋದಂಡರಾಮಯ್ಯ ಎಂದು ಹೇಳಿದರು. ತಾಲೂಕಿನ ಮಾವಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಭೂವಿಜ್ಙಾನ ಇಲಾಖೆ ಕೋಲಾರವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಜೀವಸಂಕುಲಕ್ಕೆ ಅಪಾಯ
ಅತಿಯಾದ ಅಭಿವೃದ್ಧಿ ಕಾರ್ಯಗಳ ಪರಿಣಾಮ ಭೂಮಿ ಅಪಾಯದ ಅಂಚಿನಲ್ಲಿದೆ. ಮಾನವನನ್ನು ಒಳಗೊಂಡಂತೆ, ಪ್ರಾಣಿ, ಪಕ್ಷಿ ಮತ್ತು ಇನ್ನಿತರ ಜೀವ ಸಂಕುಲಗಳನ್ನು ಕೋಟ್ಯಂತರ ವರ್ಷಗಳಿಂದ ಸಲಹುತ್ತಿರುವ ಭೂಮಿಯ ಅಗಾಧತೆ ಅನನ್ಯ. ಕೋಟ್ಯಂತರ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗಿದೆ. ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ, ನೀರು, ಆಹಾರ ಗಳೆಲ್ಲವನ್ನೂ ಪರಿಸರ ನೀಡಿದೆ ಎಂದು ಅವರು ಹೇಳಿದರು.ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದು, ಪರಿಸರ ನಾಶಮಾಡಿ ನಿರಂತರವಾಗಿ ಭೂಮಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗಿ ಕಾಲ ಕಾಲಕ್ಕೆ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು ಎಂದರು.
ಭೂಮಿಯನ್ನು ಕಾಪಾಡಬೇಕುಹಿರಿಯ ವಕೀಲರಾದ ಅಮರೇಶ್ ಮಾತನಾಡಿ, ನಮ್ಮ ದೇಶದಲ್ಲಿ ಭೂಮಿಯನ್ನು ತಾಯಿ ರೂಪದಲ್ಲಿ ಕಂಡು ಗೌರವಿಸುವ ಸಂಸ್ಕೃತಿ. ಹಸಿರು ಬೆಳೆಸುವ ಮೂಲಕ ಪರಿಸರವನ್ನು, ಭೂಮಿಯನ್ನು ಕಾಪಾಡಬೇಕು. ಮಳೆ ನೀರಿನ ಮರುಬಳಕೆ ಮಾಡುವ ಮೂಲಕ ಜಲಸಂರಕ್ಷಣೆ ಮಾಡಿ ಭೂಮಿಯ ಸಂರಕ್ಷಣೆಗೆ ಪಣತೊಡಬೇಕು ಮತ್ತು ಭೂಮಿಯ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಏ.22ರಂದು ‘ವಿಶ್ವಭೂಮಿ ದಿನ’ವನ್ನು ಆಚರಿಸಲಾಗುತ್ತದೆ. ಮುಂದಿನ ಪೀಳಿಗೆಗೂ ನಮ್ಮ ಭೂಮಿಯನ್ನು ಉಳಿಸಬೇಕು ಎಂಬುದೇ ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರಿನ್ನು ಎರೆಯಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಸ್ಕರ್, ವಕೀಲರಾದ ಅಂಬರೀಶ್,ವಿಜಯ್ ಕುಮಾರ್ , ಭಾಗವಹಿಸಿದ್ದರು..