ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

| Published : Aug 26 2025, 01:04 AM IST

ಸಾರಾಂಶ

ಕಾಚಿಹಳ್ಳಿ ಗಡಿ ಅರಣ್ಯ ಪ್ರದೇಶದಲ್ಲಿ ಈ ವನ ಮಹೋತ್ಸವ ಮತ್ತು ಸೀಡ್ ಬಾಲ್‌ಗಳನ್ನು ಬಿತ್ತುವ ಕಾರ್ಯಕ್ರಮವನ್ನು ಶಾಸಕ ಎಚ್ ಕೆ ಸುರೇಶ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಲಯನ್ಸ್ ಪ್ರಾಂತ್ಯ 12 ಹಾಗೂ ಅರಣ್ಯ ಇಲಾಖೆ ಸಹಾಯದೊಂದಿಗೆ 8000 ವೃಕ್ಷ ಬೀಜಾಂಕುಶ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ಇಲ್ಲಿ ಕೆಲವು ಸ್ಥಳಗಳನ್ನು ಗುರುತಿಸಿ ಒಟ್ಟು ಸಸಿ ಹಾಗೂ ಬೀಜಗಳನ್ನು ಹಾಕುವುದರಿಂದ ಪರಿಸರ ಕಾಪಾಡುವುದಲ್ಲದೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಲಯನ್ಸ್ ಸಂಸ್ಥೆ ಪ್ರಾಂತೀಯ ೧೨ರ ವತಿಯಿಂದ ಪ್ರಸಾದಿಹಳ್ಳಿ ಹಾಗೂ ಮಲಸಾವರ ಅರಣ್ಯ ಪ್ರದೇಶದಲ್ಲಿ ಸಸಿ ನೆಡುವುದು ಮತ್ತು ವೃಕ್ಷ ಬೀಜಗಳನ್ನು ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲೂಕಿನ ಕಾಚಿಹಳ್ಳಿ ಗಡಿ ಅರಣ್ಯ ಪ್ರದೇಶದಲ್ಲಿ ಈ ವನ ಮಹೋತ್ಸವ ಮತ್ತು ಸೀಡ್ ಬಾಲ್‌ಗಳನ್ನು ಬಿತ್ತುವ ಕಾರ್ಯಕ್ರಮವನ್ನು ಶಾಸಕ ಎಚ್ ಕೆ ಸುರೇಶ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಲಯನ್ಸ್ ಪ್ರಾಂತ್ಯ 12 ಹಾಗೂ ಅರಣ್ಯ ಇಲಾಖೆ ಸಹಾಯದೊಂದಿಗೆ 8000 ವೃಕ್ಷ ಬೀಜಾಂಕುಶ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ಇಲ್ಲಿ ಕೆಲವು ಸ್ಥಳಗಳನ್ನು ಗುರುತಿಸಿ ಒಟ್ಟು ಸಸಿ ಹಾಗೂ ಬೀಜಗಳನ್ನು ಹಾಕುವುದರಿಂದ ಪರಿಸರ ಕಾಪಾಡುವುದಲ್ಲದೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಮರಗಿಡಗಳಿಲ್ಲದೆ ನಾವು ಉಸಿರಾಡಲು ಆಮ್ಲಜನಕವಿಲ್ಲದೆ ಸಾಕಷ್ಟು ತೊಂದರೆ ಆಗುತ್ತಿದ್ದು ಮುಂದೆ ಕಷ್ಟ ಪಡಬೇಕಾಗುತ್ತದೆ. ಅದನ್ನು ತಪ್ಪಿಸಲು ಈಗಿಂದಲೇ ನಾವೆಲ್ಲರೂ ಮರ ಗಿಡಗಳನ್ನು ಸಂರಕ್ಷಿಸಿ, ಪರಿಸರ ಕಾಡು ಉಳಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ನಿಟ್ಟಿನಲ್ಲಿ ಲಯನ್ಸ್‌ ಸೇವಾ ಸಂಸ್ಥೆ ಈ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ವಿಷಯವಾಗಿದೆ. ಪರಿಸರ ಉಳಿಸಿ ನಾವು ಕೂಡ ಇವರ ಸೇವಕಾರ್ಯಕ್ಕೆ ಕೈಜೋಡಿಸಿ ಅರಣ್ಯ ಪರಿಸರ ರಕ್ಷಿಸಿ ಪೋಷಣೆ ಮಾಡುವ ಕೆಲಸ ಮಾಡಬೇಕಾಗಿದ್ದು ಇದನ್ನು ಮುಂದೆ ಹೆಚ್ಚಿನ ಸಂಘಸಂಸ್ಥೆಗಳು ಬಂದು ಈ ಒಂದು ಮಹತ್ವ ಕಾರ್ಯಕ್ಕೆ ಮುಂದಾಗುವಂತೆ ತಿಳಿ ಹೇಳಿದರು.ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ಸ್ ಕುಡ್ಫಿ ಅರವಿಂದ ಶೆಣೈ ಮಾತನಾಡಿ, ನಮ್ಮ ಲಯನ್ ಸೇವಾ ಸಂಸ್ಥೆ ವತಿಯಿಂದ ಈ ಬಾರಿ ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ಮಂಗಳೂರು, ಕೊಡಗು, ಹಾಸನ ಸೇರಿದಂತೆ ಒಟ್ಟು 50,000 ಗಿಡ ನೆಡಬೇಕೆಂಬ ಸಂಕಲ್ಪ ಹೊಂದಿದ್ದು, ಅದರಲ್ಲಿ ಬೇಲೂರು ತಾಲೂಕು ಸೇರಿದಂತೆ ಒಟ್ಟು 10,000 ಗಿಡಗಳನ್ನು ನೆಡುವ ಕಾರ್ಯಕ್ಕೆ ಇಲ್ಲಿ ಮುಂದಾಗಿದ್ದು ಅದರಲ್ಲಿ ಎಂಟು ಸಾವಿರ ಬೀಜ ಬಿತ್ತಿ ಉಳಿದ 2000 ಗಿಡಗಳನ್ನು ನೆಡುತ್ತಿದ್ದೇವೆ. ನಮ್ಮ ಸಂಸ್ಥೆಯ ವೇದ ವಾಕ್ಯದಂತೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇನ್ನು ಮುಂದೆಯೂ ಹೆಚ್ಚಿನ ರೀತಿಯಲ್ಲಿ ನಾವು ಪರಿಸರ ಉಳಿಸುವ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ತಿಳಿಸಿದರು.ತಾಲೂಕು ಲಯನ್ಸ್‌ ಸೇವಾಸಂಸ್ಥೆಯ ಅಧ್ಯಕ್ಷೆ ತಾರಾಮಣಿ ಮಾತನಾಡಿ, ಬೀಜದ ಉಂಡೆಗಳನ್ನು ನಾವು ಚಿತ್ರದುರ್ಗ ಹಾಗೂ ಮಂಗಳೂರು ಕಡೆಯಿಂದ ತರಿಸಿ ಅವುಗಳನ್ನು ಒಂದು ವಾರದ ಕಾಲ ಸೀಡ್ಸ್ ಬೀಜಾಂಕುಶವಾಗಿ ಉಂಡೆಗಳನ್ನಾಗಿ ಮಾಡಿ ಗುಂಡಿ ತೋಡಿ ಅದಕ್ಕೆ ಹಾಕುತ್ತಿದ್ದೇವೆ. ಇದೇ ರೀತಿಯಾಗಿ ಪರಿಸರ ಕಾಳಜಿಯಿಂದ ನಾವು ಅವುಗಳನ್ನು ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ . ಅದರಂತೆ ನಾವು ಹೊಂಗೆ ಹುಣಿಸೆ ಮರ ಗಿಡಗಳನ್ನು ಹೆಚ್ಚಾಗಿ ಹಾಕುತ್ತಿದ್ದು ಇದರಿಂದ ಹೆಚ್ಚಾಗಿ ಜೇನು ನೊಣಗಳು ಉತ್ಪತ್ತಿಯಾಗುತ್ತದೆ. ಪರಿಸರ ಸಂರಕ್ಷಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು‌.ಈ ಸಂದರ್ಭದಲ್ಲಿ ಲಯನ್ಸ್ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷರಾದ ಡಾ. ಚಂದ್ರಮೌಳಿ, ಎಂ ಪಿ ಪೂವಯ್ಯ, ಕೆ ಎಲ್ ಸುರೇಶ್, ಅಬ್ದುಲ್ ಲತೀಫ್, ಚಾಮರಾಜ್, ಆದರ್ಶ, ದೊಡ್ಮನೆ ಪ್ರಭಾಕರ್, ಸಂತೋಷ್ ಮಂಜುನಾಥ್, ಬಿ ಸಿ ಉಮೇಶ್, ಸುರೇಶ್, ಅರಣ್ಯ ಇಲಾಖೆ ಆರ್‌ಎಫ್‌ಒ ಸೇರಿದಂತೆ ಇತರ ಹಾಜರಿದ್ದರು.