ಮನೆಗೊಂದು ಮರ ಬೆಳೆಸಿದರೆ ಪರಿಸರ ರಕ್ಷಣೆ ಸಾಧ್ಯ: ಡಾ.ಧರ್ಮರಾಯ ಇಂಗಳೆ

| Published : Jun 06 2024, 12:31 AM IST

ಸಾರಾಂಶ

ಬಾಡಗಂಡಿಯ ಎಸ್.ಆರ್.ಪಾಟೀಲ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗೂ ಸಂಶಧೋನಾ ಕೇಂದ್ರ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿಗಳನ್ನು ನೆಡಲಾಯಿತು.

ಕನ್ನಡಪ್ರಭ ವಾರ್ತೆ ಬೀಳಗಿ

ಜೀವ ಸಂಕಲು ಆರೋಗ್ಯವಾಗಿ ಇರಬೇಕಾದರೆ ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ಪರಿಸರ ಉಳಿಸಲು ಪ್ರತಿಯೊಬ್ಬರು ಮನೆಗೊಂದು ಮರ ಬೆಳೆಸುವ ಘೋಷಣೆ ಮಾಡುವ ಮೂಲಕ ಅವುಗಳ ರಕ್ಷಣೆ ಮಾಡಿದರೆ ಮಾತ್ರ ಉತ್ತಮವಾದ ಪರಿಸರ ಪಡೆದು ಆರೋಗ್ಯವಾಗಿ ಇರಲು ಸಾಧ್ಯ ಎಂದು ಎಸ್.ಆರ್.ಪಾಟೀಲ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗೂ ಸಂಶೋದನಾ ಕೇಂದ್ರ ಡೀನ್ ಡಾ.ಧರ್ಮರಾಯ ಇಂಗಳೆ ಹೇಳಿದರು.

ಬಾಡಗಂಡಿಯ ಎಸ್.ಆರ್.ಪಾಟೀಲ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಗೂ ಸಂಶಧೋನಾ ಕೇಂದ್ರ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚಾರಣೆ ನಿಮಿತ್ತ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಪರಿಸರ ರಕ್ಷಣೆಯ ಜವಾಬ್ದಾರಿ ಜತೆಗೆ ಕಾಡು ಬೆಳಸಿ ನಾಡು ಉಳಿಸಬೇಕಾಗಿದೆ ಎಂದರು.

ವೈದ್ಯಕಿಯ ಅಧೀಕ್ಷಕ ಡಾ,ಎಂ.ಎಸ್.ಹಳ್ಳಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ನಾವೆಲ್ಲರೂ ಪರಿಸರ ಮಾಲಿನ್ಯ ತಡೆಗಟ್ಟುವ ಪರಿಸರ ಕುರಿತಾದ ನಿಯಮಗಳನ್ನು ಪಾಲನೆ ಮಾಡಿ ಪರಿಸರ ರಕ್ಷಣೆ ಮುಂದಾಗಬೇಕು ಎಂದರು.

ವೈದ್ಯಕಿಯ ನರ್ದೇಶಕ ಡಾ.ರಾಘವೇಂದ್ರ ಪಾಟೀಲ ಮಾತನಾಡಿ, ಪರಿಸರ ಉಳಿದರೆ ಮಾತ್ರ ಮನುಕೂಲ ಉಳಿಯಲು ಸಾಧ್ಯ. ಹಸಿರೇ ನಮ್ಮ ಉಸಿರುವಾಗಲಿದೆ. ಮನುಷ್ಯ, ಪ್ರಾಣಿ, ಪಕ್ಷಿ ಹಾಗೂ ಜೀವ ಸಂಕುಲ ಬದಕಲು ಆಮ್ಲಜನಕಬೇಕು. ಆಮ್ಲಜನಕ ಉತ್ಪತ್ತಿಯಾಗಲು ಗಿಡಮರಗಳನ್ನು ಇನ್ನು ಹೆಚ್ಚಾಗಿ ಬೆಳಯಬೇಕಾಗಿದೆ ಎಂದರು. ಡಾ.ಸಂಗಮೇಶ ರಕರಡ್ಡಿ, ಡಾ, ಲೋಹಿತ ಶಾ, ಕಾರ್ಯಾಲಯ ಅಧೀಕ್ಷಕ ಪ್ರವೀಣ ಕಂಟಿ ಹಾಗೂ ಇನ್ನೂ ಅನೇಕರು ಇದ್ದರು.