ಹೊಸಕೋಟೆ: ಪರಿಸರ ರಕ್ಷಣೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಪರಿಸರ ಸಂರಕ್ಷಣೆ ಸಂಕಲ್ಪ ತೊಡಬೇಕು ಎಂದು ಬಮೂಲ್‌ ಒಕ್ಕೂಟದ ನಿರ್ದೇಶಕ ಬಿ.ವಿ.ಸತೀಶ್‌ಗೌಡ ತಿಳಿಸಿದರು

ಹೊಸಕೋಟೆ: ಪರಿಸರ ರಕ್ಷಣೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಪರಿಸರ ಸಂರಕ್ಷಣೆ ಸಂಕಲ್ಪ ತೊಡಬೇಕು ಎಂದು ಬಮೂಲ್‌ ಒಕ್ಕೂಟದ ನಿರ್ದೇಶಕ ಬಿ.ವಿ.ಸತೀಶ್‌ಗೌಡ ತಿಳಿಸಿದರು.

ತಾಲೂಕಿನ ಚಿಕ್ಕ ಹುಲ್ಲೂರು ಬಳಿ ಇರುವ ಬಮುಲ್ ಹೊಸಕೋಟೆ ಶಿಬಿರ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಗಿಡ ನೆಟ್ಟು ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೈಗಾರಿಕೆಗಳ ವ್ಯಾಪಕ ಸ್ಥಾಪನೆ, ನಗರೀಕರಣ ಹೆಸರ ಮರಗಳ ಹನನದ ಪರಿಣಾಮ ಹಸಿರು ವಾತಾವರಣ ಕಡಿಮೆಯಾಗುತ್ತಿದೆ. ಮರ ಗಿಡಗಳನ್ನು ಬೆಳೆಸುವ ಜವಾಬ್ದಾರಿ ಭೂಮಿ ಮೇಲೆ ವಾಸಿಸುತ್ತಿರುವ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಕೇವಲ ಗಿಡ ನೆಡುವುದು, ಭಾಷಣ ಮಾಡುವುದನ್ನು ಬಿಟ್ಟು ಹಸಿರು ಕ್ರಾಂತಿ ಮಾಡುವ ದೃಢ ಸಂಕಲ್ಪ ತೊಡಬೇಕು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್, ಬಮುಲ್ ಶಿಬಿರ ಉಪವ್ಯವಸ್ಥಾಪಕ ಡಾ.ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಸೌಮ್ಯ ಸಿಎನ್, ವಿಸ್ತರಣಾಧಿಕಾರಿ ರಮೇಶ್, ವಿನಯ್, ರಘುನಾಥ್, ಪವಿತ್ರ, ಆನಂದ್, ವಿದ್ಯಾಶ್ರೀ ಹಾಜರಿದ್ದರು.

ಫೋಟೋ : 6 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ಚಿಕ್ಕ ಹುಲ್ಲೂರು ಬಳಿ ಇರುವ ಬಮೂಲ್ ಶಿಬಿರ ಕಚೇರಿ ಅವರಣದಲ್ಲಿ ಬಮೂಲ್ ನಿರ್ದೇಶಕ ಬಿವಿ ಸತೀಶ್‌ಗೌಡ ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.