ಕನ್ನಡಪ್ರಭ ವಾರ್ತೆ ಹಾಸನ
ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಹೌಸ್ ಆಫ್ ಭಾರತ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಾಲಗಾಮೆ ಸಮೀಪದ ಸೀಗೆಬೆಟ್ಟದಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತಾ ಅಭಿಯಾನವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು. ಮಳೆ ಮಲ್ಲೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿರುವ ಮೂಲ ಶಿವನ ಗುಡಿ ಪರಿಸರದಲ್ಲಿ ಶಾಶ್ವತ ಡಸ್ಟ್‌ಬಿನ್ ಅಳವಡಿಸಿ, ಬೆಟ್ಟದ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅಲ್ಲದೆ, ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ವಿವಿಧ ಜಾತಿಯ ಉಪಯುಕ್ತ ಗಿಡಗಳನ್ನು ನೆಡಲಾಯಿತು. ಬೆಟ್ಟದ ವಿವಿಧ ಪ್ರದೇಶಗಳಲ್ಲಿ ಬೀಜದ ಉಂಡೆ (ಸೀಡ್ ಬಾಲ್)ಗಳನ್ನು ಚದುರಿಸುವ ಮೂಲಕ ಹಸಿರು ವನಸಿರಿ ಬೆಳೆಸುವ ಕಾರ್ಯಕ್ಕೂ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಳೆ ಮಲ್ಲೇಶ್ವರ ದೇವಸ್ಥಾನದ ಪ್ರವೇಶ ದ್ವಾರ ಹಾಗೂ ಸೀಗೆ ಮಠದ ಆವರಣದಲ್ಲಿ ತಲಾ ಒಂದು ಸೇರಿ ಒಟ್ಟು ಎರಡು ಶಾಶ್ವತ ಡಸ್ಟ್‍ಬಿನ್‍ಗಳನ್ನು ಅಳವಡಿಸಲಾಯಿತು. ಕಾರ್ಯಕ್ರಮದ ಬಳಿಕ ಭಾಗವಹಿಸಿದ್ದ ಎಲ್ಲ ಸದಸ್ಯರು ಹಾಗೂ ಕುಟುಂಬಸ್ಥರು ಉಪಾಹಾರ ಸೇವಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.ಕಾರ್ಯಕ್ರಮದಲ್ಲಿ ರೋಟರಿ ವಲಯದ ಝೋನಲ್ಲೆ ಲೆಫ್ಟಿನೆಂಟ್ ರೋ. ಡಾ. ತೇಜಸ್ವಿ, ಹಾಸನ ಆಕಾಶವಾಣಿ ಕೃಷಿ ವಿಭಾಗದ ಮುಖ್ಯಸ್ಥ ವಿ. ಮಧುಸೂದನ, ಯೋಗಗುರು ಚೇತನ್ ಗುರೂಜಿ, ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದಿಕ್ಕಾ ಲೇಜಿನ ಡಾ. ಬಸವರಾಜ ಯಲಗಚ್ಚಿ ಭಾಗವಹಿಸಿದ್ದರು.
ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ. ಕೆ.ಎಸ್.ಯೋಗೇಶ್, ಕಾರ್ಯದರ್ಶಿ ರೋ. ಬಿ.ಎಂ. ದರ್ಶನ್, ನಿಕಟಪೂರ್ವ ಅಧ್ಯಕ್ಷ ರೋ. ಎಚ್.ಡಿ. ವಜ್ರಕುಮಾರ್, ನಿರ್ದೇಶಕರಾದ ರೋ.ಭುವನೇಶ್, ರೋ. ವೇಣುಗೋಪಾಲ್, ರೋ. ಎ.ಸಿ. ಗುರುಮೂರ್ತಿ, ರೋ. ಗವಿಗೌಡ, ರೋ. ಮಧು, ರೋ. ಕರುಣೇಶ್ ಸೇರಿದಂತೆ ಕ್ಲಬ್‍ನ ಸದಸ್ಯರು ಕುಟುಂಬ ಸಮೇತರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಇದೇ ವೇಳೆ ಹೌಸ್ ಆಫ್ ಭಾರತ್ ಸಂಸ್ಥಾಪಕರಾದ ಕಿರಣ್, ದರ್ಶನ್,ರಮೇಶ್ ಆಚಾರಿ, ಪೂರ್ಣಿಮಾ, ಹೇಮರಾಜು, ನಿಖಿಲ್, ಕು. ಸಖಿ, ಯುವ ಮೋರ್ಚಾ ಮುಖಂಡ ಹರ್ಷಿತ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.