ಸಾರಾಂಶ
ಬಾಗಲಕೋಟೆ: ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಭಾರತ ಸಂಸ್ಕೃತಿಯ ಬುನಾದಿಯಾಗಿವೆ ಎಂದು ಮಹಾವಿದ್ಯಾಲಯದ ಕನ್ನಡ ಸಂಘದ ಕಾರ್ಯಧ್ಯಕ್ಷ ಡಾ.ಎಂ.ನಂಜುಂಡಸ್ವಾಮಿ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ರಾಮಾಯಣ, ಮಹಾಭಾರತ ಹಾಗೂ ವಚನ ಕಮ್ಮಟ ಪರೀಕ್ಷೆಗಳ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಭಾರತ ಸಂಸ್ಕೃತಿಯ ಬುನಾದಿಯಾಗಿವೆ ಎಂದು ಮಹಾವಿದ್ಯಾಲಯದ ಕನ್ನಡ ಸಂಘದ ಕಾರ್ಯಧ್ಯಕ್ಷ ಡಾ.ಎಂ.ನಂಜುಂಡಸ್ವಾಮಿ ಹೇಳಿದರು.ನಗರದ ಬವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ರಾಮಾಯಣ, ಮಹಾಭಾರತ ಹಾಗೂ ವಚನ ಕಮ್ಮಟ ಪರೀಕ್ಷೆಗಳ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಅಪಾರವಾದ ವೈಶಿಷ್ಟ್ಯ ಒಳಗೊಂಡಿದೆ. ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಿರುತ್ತದೆ, ರಾಮಾಯಣ ಮಹಾಭಾರತ ಇವೆರಡು ಮಹಾಕಾವ್ಯಗಳು ಬದುಕಿನ ತಾತ್ವಿಕತೆಯನ್ನು ಕಟ್ಟಿಕೊಡುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ವಚನಗಳ ಮೂಲಕ ನಾಡಿನ ಜನರಿಗೆ ಬದುಕಿನ ಪಾಠಗಳನ್ನು ಹೇಳಿದ ವಚನಕಾರರು ವಿದ್ಯಾರ್ಥಿಗಳಿಗೆ ನಾಡಿನ ಜನತೆಗೆ ಆದರ್ಶ ವಾಗಿದ್ದಾರೆ ಎಂದರು.