ಪರಿಸರ ಸ್ನೇಹಿಯಾಗಿರುವ ಪಾರಂಪರಿಕ ವಸ್ತುಗಳು, ಪಂಚಲೋಹ ನಿರ್ಮಿತ ಹಳೆಕಾಲದ ಪಾತ್ರೆಗಳು, ಪರಿಣತರಿಂದ ಮೂಡಿಬಂದಿರುವ ಕಾಷ್ಠ ಶಿಲ್ಪದ ಕೆತ್ತನೆಯ ವಿವಿಧ ವಸ್ತುಗಳು ಹಾಗೂ ಪ್ರಾಚೀನ ಉಡುಗೆ ತೊಡುಗೆ ಇವೆಲ್ಲವೂ ಹಳೆಯ ಕಾಲದ ಜನಜೀವನವನ್ನು ನೆನಪಿಸುತ್ತದೆ. ದಸರಾ ಗೊಂಬೆಗಳು ಈ ನೆಲೆಯಲ್ಲಿ ಇಂದಿನ ಪೀಳಿಗೆಗೆ ಮಾರ್ಗದರ್ಶಿ ಸೂತ್ರವಾಗಬಲ್ಲುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಮಂಗಳೂರು: ಪರಿಸರ ಸ್ನೇಹಿಯಾಗಿರುವ ಪಾರಂಪರಿಕ ವಸ್ತುಗಳು, ಪಂಚಲೋಹ ನಿರ್ಮಿತ ಹಳೆಕಾಲದ ಪಾತ್ರೆಗಳು, ಪರಿಣತರಿಂದ ಮೂಡಿಬಂದಿರುವ ಕಾಷ್ಠ ಶಿಲ್ಪದ ಕೆತ್ತನೆಯ ವಿವಿಧ ವಸ್ತುಗಳು ಹಾಗೂ ಪ್ರಾಚೀನ ಉಡುಗೆ ತೊಡುಗೆ ಇವೆಲ್ಲವೂ ಹಳೆಯ ಕಾಲದ ಜನಜೀವನವನ್ನು ನೆನಪಿಸುತ್ತದೆ. ದಸರಾ ಗೊಂಬೆಗಳು ಈ ನೆಲೆಯಲ್ಲಿ ಇಂದಿನ ಪೀಳಿಗೆಗೆ ಮಾರ್ಗದರ್ಶಿ ಸೂತ್ರವಾಗಬಲ್ಲುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಗರದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿನ ಮಂಜು ಪ್ರಾಸಾದ ನಿಲಯದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ಪ್ರದರ್ಶನಕ್ಕೆ ಇರಿಸಿರುವ ದಸರಾ ಗೊಂಬೆಗಳು ಮತ್ತು ತುಳುನಾಡಿನ ಪಾರಂಪರಿಕ ವಸ್ತುಗಳ ಪ್ರದರ್ಶನದ ಕುರಿತು ಅವರು ಮಾತನಾಡಿದರು.

ಈ ಪ್ರದರ್ಶನ ಆಸಕ್ತರಿಗಾಗಿ ನ.5ರ ವರೆಗೂ ವೀಕ್ಷಿಸಲು ಮುಕ್ತವಾಗಿದೆ ಎಂದರು.

ವಿಜಯದಶಮಿಯಂದು ನಡೆದ ಮಧ್ವಾಚಾರ್ಯ ಜಯಂತಿಯ ಸಂದರ್ಭ ಪ್ರದರ್ಶನ ಈ ಬಾರಿಯ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿ ದೇವಿಯ ಮುಂದೆ ವೇದ ಪಠಣ ಮಾಡಿರುವ ರಘುರಾಮ ಮತ್ತು ಬಳಗದವರ ವೇದ ಘೋಷದೊಂದಿಗೆ ಆರಂಭಗೊಂಡಿತು. ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಸುಮಿತ್ರಾ ಆಚಾರ್, ಶಶಿಪ್ರಭಾ ಐತಾಳ್, ಧಾತ್ರಿ, ಪೂರ್ಣಿಮಾ ರಾವ್ ಪೇಜಾವರ ಮತ್ತಿತರರು ಇದ್ದರು.ದಯಾನಂದ ಕಟೀಲ್ ನಿರೂಪಿಸಿದರು.