ಸಮಬಲ ಹೋರಾಟ: ಕಾಳಿಮಾಡ ವಿರುದ್ಧ ಚಂದುರ ಗೆಲವು

| Published : Apr 16 2024, 01:02 AM IST

ಸಾರಾಂಶ

ಚೆರಿಯಪರಂಬುವಿನ ಜನರಲ್‌ ಕೆ.ಎಸ್‌. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಕಿ ನಮ್ಮೆಯಲ್ಲಿ ಬಿರುಸಿನ ಸ್ಪರ್ಧೆ ನಡೆಯಿತು.ಸಮಬಲದ ಹೋರಾಟ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಸೋಮವಾರ ವಿವಿಧ ತಂಡಗಳ ನಡುವೆ ಬಿರುಸಿನ ಸ್ಪರ್ಧೆ ನಡೆಯಿತು. ತೀತಮಾಡ ಕುಂಡ್ಯೋಳಂಡ ವಿರುದ್ಧ 5-2 ಅಂತರದ ಜಯ ಗಳಿಸಿತು. ಮಂಡೇಟಿರ ವಿರುದ್ಧ ಮೇವಡ 2-0 ಅಂತರದ ಜಯ ಗಳಿಸಿದರೆ ಚೆಕ್ಕೆರ ತಂಡ ಪೊಂಜಂಡ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಚೆಕ್ಕೇರ ಆದರ್ಶ, ಉತ್ತಯ್ಯ ಹಾಗೂ ಆಕಾಶ್ ಹೊಡೆದ ಆರು ಗೋಲುಗಳಿಂದ ಚೆಕ್ಕೆರ ತಂಡ ಪೊಂಜಂಡ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಚಂದುರ ತಂಡಕ್ಕೆ ಕಾಳಿಮಾಡ ವಿರುದ್ಧ 6-5 ಅಂತರದ ಜಯ ಲಭಿಸಿತು. ಸಮಬಲದ ಹೋರಾಟ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಚಂದುರ 6-5 ಅಂತರದಿಂದ ಕಾಳಿಮಾಡ ವಿರುದ್ಧ ಜಯ ಸಾಧಿಸಿತು. ಕಂಬೀರಂಡ ಮತ್ತು ಮಲ್ಲಜಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಬಿರಂಡ ಪುದಿಯೋಕ್ಕಡ ಬೊಟ್ಟಂಗಡ ವಿರುದ್ಧ 3-0 ಅಂತರದಿಂದ ಕೊಂಗೆಟಿರ ಅಲ್ಲಾರಮಡ ವಿರುದ್ಧ 4-0 ಅಂತರದಿಂದ, ಅಮ್ಮಣಿಚಂಡ ಚೋಕಿರ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.

ಚೇಂದಂಡ ತಂಡವು ಕಂಗಂಡ ವಿರುದ್ಧ 3- 0 ಅಂತರದ ಜಯಗಳಿಸಿತು. ಕಾಂಡೇರ ಮತ್ತು ಕೋಡಿಮಣಿಯಂಡ ತಂಡಗಳ ನಡುವೆ ರೋಚಕ ಸ್ಪರ್ಧೆ ಏರ್ಪಟ್ಟಿತು. ಟೈ ಬ್ರೇಕರಿನಲ್ಲಿ ಕೋಡಿಮಣಿಯಂಡ ಕಾಂಡೇರ ವಿರುದ್ಧ 5-4 ಅಂತರದ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೇಲೆಟಿರ ಪಾಲಂದಿರ 3- 0 ಅಂತರದಿಂದ ಜಯಗಳಿಸಿದರೆ ಮುಕ್ಕಾಟಿರ (ಬೋಂದ) ತಂಡವು ಅಳಮೇಂಗಡ ವಿರುದ್ಧ 5-4 ಅಂತರದ ಜಯ ಸಾಧಿಸಿತು .

ಇಂದಿನ ಪಂದ್ಯಗಳು: ಮೈದಾನ 1: 10 ಗಂಟೆಗೆ ಪಟ್ಟಡ-ಚೋಯಮಂಡ, 11 ಗಂಟೆಗೆ ಮಲ್ಲಂಗಡ-ಪಾಡೆಯಂಡ, 1 ಗಂಟೆಗೆ ಮಲ್ಲಮಾಡ-ಕರಿನೆರವಂಡ, 2 ಗಂಟೆಗೆ ಬೊವ್ವೇರಿಯಂಡ-ಚಿಮ್ಮಣಮಾಡ, 3 ಗಂಟೆಗೆ ಗಂದಂಗಡ-ಅಪ್ಪನೆರವಂಡ

ಮೈದಾನ 2: 9 ಗಂಟೆಗೆ ಬಿದ್ದಂಡ-ಮೇಕೇರಿರ, 10 ಗಂಟೆಗೆ ಪುಟ್ಟಿಚಂಡ-ಕುಲ್ಲಚಂಡ, 11 ಗಂಟೆಗೆ ಮೇಚಿಯಂಡ-ಕೋಟೇರ(ನೆಲಜಿ), 1 ಗಂಟೆಗೆ ಬೊಟ್ಟೋಳಂಡ-ಚೊಟ್ಟೇರ, 2 ಗಂಟೆಗೆ ಕೊಂಗಂಡ-ನೆರವಂಡ, 3 ಗಂಟೆಗೆ ಮಂಡೀರ(ನೆಲಜಿ) –ಕಾಳಿಯಂಡ