ಎಲ್ಲಾರೂ ಸಮಾನತೆಯಿಂದ ಬಾಳಬೇಕು ಎನ್ನುವ ಉದ್ದೇಶದಿಂದ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಎಲ್ಲಾರೂ ಸಮಾನತೆಯಿಂದ ಬಾಳಬೇಕು ಎನ್ನುವ ಉದ್ದೇಶದಿಂದ ಕಾನೂನನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಏರ್ಪಡಿಸಲಾಗಿದ್ದ ೭೭ನೇ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತದಂತಹ ವೈವಿಧ್ಯಮಯ ಕಲೆ, ಸಾಹಿತ್ಯ ಧಾರ್ಮಿಕ ಹಾಗೂ ದೇಶದ ಪ್ರತಿಯೊಬ್ಬರು ಕೂಡಿ ಬಾಳುವಂತಹ ಸಂವಿಧಾನವನ್ನು ರಚನೆ ಮಾಡಿ ನಮಗೆ ಕೊಟ್ಟಿದ್ದಾರೆ. ಅದನ್ನ ನಾವುಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದರು. ಸಮಾಜದಲ್ಲಿನ ತುಳಿತಕ್ಕೂಳಗಾದವರು, ಮಹಿಳೆಯರು ಮತ್ತು ಕಾರ್ಮಿಕ ಹಕ್ಕುಗಳಿಗೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ. ೨೦೪೭ನೇ ಇಸವಿಗೆ ಭಾರತವನ್ನ ವಿಕಸಿತ ಭಾರತವನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಭಾರತದ ಯೋಜನೆಯಲ್ಲಿ ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನದಲ್ಲಿ ಭಾರತ ಇಂದು ಬೇರೆ ಬೇರೆ ದೇಶಗಳನ್ನು ಮೀರಿ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಈ ವರ್ಷದ ಪೇರಡ್‌ನಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊಡ್ಡ ನರಸಪ್ಪ, ಆಯುರ್ವೇದದಲ್ಲಿ ಸಾಧನೆ ಮಾಡಿದ ಚಿಕ್ಕಿರಪ್ಪ, ಪತ್ರಕರ್ತ ಸಂಘದ ಅಧ್ಯಕ್ಷ ಎನ್.ಮೂರ್ತಿ, ಪೊಲೀಸ್ ಇಲಾಖೆಯ ಶಶಿಕುಮಾರ್, ನಿವೃತ್ತ ಯೋಗ ಶಿಕ್ಷಕಿ ನಾಗರತ್ನಮ್ಮ, ಆಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೋಮ್ ಗಾರ್ಡ್ ಲಕ್ಷ್ಮೀಪತಿ ಅವರಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ನಿಶ್ಚಿತ.ಕೆ, ಮದನ್, ಧನುಷ್‌ಗೌಡ ಅವರಿಗೆ ತಾಲೂಕು ಆಡಳಿತ ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ಅಪೂರ್ವ ಅನಂತರಾಮು, ಪಪಂ ಸಿಇಒ ಉಮೇಶ್, ಫೈರೋಜ್ ಬೇಗಂ, ಸಿಪಿಐ ಅನಿಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಸಾಹಿತ್ಯ ಪರಿಷತ್ ಅಧ್ಯಕ್ಷ ಈರಣ್ಣ, ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮೀಪುತ್ರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಂಗರಾಜು, ಪಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್, ಮುಖಂಡರಾದ ನಯಾಜ್, ಅಟಿಕನಾಗರಾಜು, ಮಾರುತಿ, ಅಧಿಕಾರಿಗಳಾದ ಗುರುಮೂರ್ತಿ, ರಾಮಪ್ರಸಾದ್, ಆರ್‌ಐ ಬಸವರಾಜು, ಮಧುಸೂದನ್, ರಘು, ಸೇರಿದಂತೆ ಇತರರು ಇದ್ದರು.