ಹೊಸಕೋಟೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿರುವುದು ಸಂತಸದ ವಿಚಾರವಾಗಿದೆ. ತಾಲ್ಲೂಕಿನ ಎಲ್ಲಾ ಹೈನುಗಾರರು ಹಾಗೂ ಸಿಬ್ಬಂದಿ ವರ್ಗದವರು ಸುಖ, ಸಂತೋಷದಿAದ ಜೀವನ ನಡೆಸಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹಾರೈಸಿದರು

ಹೊಸಕೋಟೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿರುವುದು ಸಂತಸದ ವಿಚಾರವಾಗಿದೆ. ತಾಲ್ಲೂಕಿನ ಎಲ್ಲಾ ಹೈನುಗಾರರು ಹಾಗೂ ಸಿಬ್ಬಂದಿ ವರ್ಗದವರು ಸುಖ, ಸಂತೋಷದಿAದ ಜೀವನ ನಡೆಸಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹಾರೈಸಿದರು.

ತಾಲೂಕಿನ ಚಿಕ್ಕ ಹುಲ್ಲೂರು ಬಳಿ ಇರುವ ಬಮುಲ್ ಶಿಬಿರ ಕಚೇರಿಯಲ್ಲಿ ಬಮೂಲ್ ನಿರ್ದೇಶಕ ಬಿವಿ ಸತೀಶ್ ಗೌಡ ಆಯೋಜಿಸಿದ್ದ ದೀಪಾವಳಿ ಉಡುಗೊರೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಂ ನೌಕರರಾಗಿರಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಾಗಿರಲಿ, ಯಾರಲ್ಲಿಯೂ ಯಾವುದೇ ತಾರತಮ್ಯ ಮಾಡಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಿಬ್ಬಂದಿಗೆ ದೀಪಾವಳಿ ಉಡುಗೊರೆ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಿರುವ ಬಮುಲ್ ನಿರ್ದೇಶಕ ಬಿ.ವಿ. ಸತೀಶ್ ಗೌಡ ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಶಿಬಿರದ ಕಚೇರಿಯಲ್ಲಿ ಸುಮಾರು 400ಕ್ಕೂ ಅಧಿಕ ನೌಕರರು ವಿವಿಧ ಪಾಳಿಗಳಲ್ಲಿ ದಿನದ 24 ಗಂಟೆ ಕೆಲಸ ಮಾಡುತ್ತಿರುವ ಪರಿಣಾಮವಾಗಿ ತಾಲೂಕಿನಲ್ಲಿ ಹೈನೋದ್ಯಮ ಅಬಿವೃದ್ದಿಯಾಗಿ ಸಕಾಲಕ್ಕೆ ಹಾಲಿನ ಪ್ಯಾಕಿಂಗ್ ಆಗಿ ಹಾಲು ಸರಬರಾಜು ಮಾಡಲು ಸಾಧ್ಯವಾಗಿದೆ. ಎಂದರು.

ಬಮುಲ್ ನಿರ್ದೇಶಕ ಬಿವಿ. ಸತೀಶ್ ಗೌಡ ಮಾತನಾಡಿ ಬಮುಲ್ ಮತ್ತು ಕೆಎಂಎಫ್ ಸಂಸ್ಥೆಗಳ ಅಭಿವೃದ್ಧಿಗಾಗಿ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಕೈಗೊಳ್ಳುತ್ತಿರುವ ಕ್ರಮಗಳು ಗಮನಾರ್ಹವಾಗಿವೆ. ಪ್ರತಿ ಹಸುವಿನಿಂದ ಹಾಲಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ದಿನಕ್ಕೆ ೧೦ ಲೀಟರ್ ಹಾಲು ನೀಡುವ ಹಸುವಿನಿಂದ ೨೦ ಲೀಟರ್ ಹಾಲು ಪಡೆಯುವಂತಹ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು, ಸಾಗಾಣಿಕೆ ವೆಚ್ಚ ಕಡಿಮೆ ಮಾಡುವುದು ಹಾಗೂ ಹಾಲು ಸಂಸ್ಕರಣಾ ಘಟಕಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಬಮೂಲ್ ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ವಿನಯ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.

ಫೋಟೋ : 7 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಶಿಬಿರ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ದೀಪಾವಳಿ ಕಿಟ್ ಗಳನ್ನು ಶಾಸಕ ಶರತ್ ಬಚ್ಚೆಗೌಡ ವಿತರಿಸಿದರು.