ವೀರಶೈವ ಸಮಾಜದಿಂದ ಸಮಾನತೆ

| Published : Jan 05 2025, 01:33 AM IST

ಸಾರಾಂಶ

ಗುಬ್ಬಿ: ವೀರಶೈವ ಲಿಂಗಾಯತ ಸಮುದಾಯವು ಎಲ್ಲಾ ಜಾತಿ ಧರ್ಮಗಳಿಗೂ ಕೂಡ ಸಮಾನತೆಯನ್ನು ತೋರುತ್ತದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಹೇಳಿದರು

ಗುಬ್ಬಿ: ವೀರಶೈವ ಲಿಂಗಾಯತ ಸಮುದಾಯವು ಎಲ್ಲಾ ಜಾತಿ ಧರ್ಮಗಳಿಗೂ ಕೂಡ ಸಮಾನತೆಯನ್ನು ತೋರುತ್ತದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಧನುರ್ಮಾಸದ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಗುಬ್ಬಿ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸುಮಾರು ಒಂದು ಎಕರೆ ಪಟ್ಟಣದ ಹೃದಯ ಭಾಗದಲ್ಲಿ ಭೂಮಿ ಇದ್ದು ಅಲ್ಲಿ ವಿಶೇಷ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ಮತ್ತಷ್ಟು ಭದ್ರ ಬುನಾದಿ ಹಾಕಿ ಸಾಮಾಜಿಕ ಮತ್ತು ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡಲು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಹ ಅನುಕೂಲವಾಗುತ್ತದೆ. ಈ ಕಾರ್ಯಕ್ಕೆ ಎಲ್ಲರೂ ಸಹ ತನು ಮನ ಧನ ಸಹಾಯವನ್ನು ಮಾಡಿದಾಗ ಖಂಡಿತವಾಗಿ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುಬ್ಬಿ ನಗರ ವೀರಶೈವ ಯುವ ಸೇವಾ ಸಮಿತಿ ಅಧ್ಯಕ್ಷ ಅರ್ಜುನ್, ಕಾರ್ಯದರ್ಶಿ ನಿರಂಜನ, ಉಪಾಧ್ಯಕ್ಷ ನಾಗರಾಜು, ತೊಂಟೇಶ್, ಭುವನ್, ತೇಜಸ್, ಕಿರಣ್, ಧನು, ಪ್ರೀತಮ್, ಚಂದು, ಸಂಘದ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಸದಸ್ಯ ಜಿ ಆರ್ ಶಿವಕುಮಾರ್, ಅಖಿಲ ಭಾರತ ವೀರಶೈವ ಅಧ್ಯಕ್ಷ ಮಂಜುನಾಥ್, ಅರಳಿಮರ ಕಾಂತರಾಜು, ಕಾಯಿ ಸುರೇಶ್, ಚಂದು ಕಾಫಿ ಗಂಗಾಧರ, ಅನಿಲ್ ಹಾಗೂ ಮುಂತಾದವರು ಇದ್ದರು.