ಸಮಾನತೆಗೆ ಆದ್ಯತೆ ಬೇಕು: ಶಾಂತನಗೌಡ

| Published : Aug 16 2025, 12:00 AM IST

ಸಾರಾಂಶ

ಮಹಾನ್‌ ನಾಯಕರು ಸೇರಿದಂತೆ ತೆರೆಮರೆಯ ಸಾವಿರಾರು ಜನರ ತ್ಯಾಗ ಬಲಿದಾನ ಪರಿಣಾಮವಾಗಿ ಬ್ರಿಟಿಷರ ದಾಸ್ಯದಿಂದ ಸ್ವತಂತ್ರರಾಗಿದ್ದೇವೆ. ಯಾರದೇ ಅಧಿಕಾರಿಕ್ಕೆ ಒಳಗಾಗದೇ ಬದುಕುತ್ತಿದ್ದೇವೆ. ದೇಶ ಸ್ವಾತಂತ್ರ್ಯ ಗಳಿಸಿ 79 ವರ್ಷಗಳು ಸಂದಿದ್ದು, ನಾವೆಲ್ಲರೂ ಸಮಾನತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

ನ್ಯಾಮತಿ: ಮಹಾನ್‌ ನಾಯಕರು ಸೇರಿದಂತೆ ತೆರೆಮರೆಯ ಸಾವಿರಾರು ಜನರ ತ್ಯಾಗ ಬಲಿದಾನ ಪರಿಣಾಮವಾಗಿ ಬ್ರಿಟಿಷರ ದಾಸ್ಯದಿಂದ ಸ್ವತಂತ್ರರಾಗಿದ್ದೇವೆ. ಯಾರದೇ ಅಧಿಕಾರಿಕ್ಕೆ ಒಳಗಾಗದೇ ಬದುಕುತ್ತಿದ್ದೇವೆ. ದೇಶ ಸ್ವಾತಂತ್ರ್ಯ ಗಳಿಸಿ 79 ವರ್ಷಗಳು ಸಂದಿದ್ದು, ನಾವೆಲ್ಲರೂ ಸಮಾನತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶುಕ್ರವಾರ ಆಯೋಜಿಸಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಮಹತ್ತರ ಸಾಧನೆ ಮಾಡುತ್ತಿದ್ದಾರೆ. ಇಂದು ಭಾರತ ವಿಶ್ವಕ್ಕೆ ಮಾರ್ಗಸೂಚಿ ದೇಶವಾಗಿ ಬೆಳೆಯುತ್ತಿದೆ. ಅಂಬೇಡ್ಕರ್‌ ಅವರ ಅಪಾರ ಜ್ಞಾನ ದೂರದೃಷ್ಠಿಯಿಂದಾಗಿ ರಚಿಸಿದ ಸಂವಿಧಾನದ ಫಲವಾಗಿ ಸಮಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ಎಲ್ಲರೂ ಒಟ್ಟಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

ಸ್ವಾತಂತ್ರ್ಯವನ್ನೇನೋ ಗಳಿಸಿದ್ದೇವೆ. ಆದರೆ ಭಾರತದಲ್ಲಿ ದೌರ್ಜನ್ಯ, ಕಿರುಕುಳ, ಹಿಂಸಾಚಾರ, ಕೋಮುವಾದ, ಭ್ರಷ್ಟಾಚಾರದಂತಹ ಅನೇಕ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಪಣತೊಡಬೇಕಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನ್ಯಾಮತಿ ತಾಲೂಕು ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ನೆರವೇರಿಸಿ ಮಾತನಾಡಿದರು. ಗ್ರೇಡ್‌-2 ತಹಶೀಲ್ದಾರ್‌ ಹೆಚ್‌.ಬಿ.ಗೋವಿಂದಪ್ಪ, ಇಒ.ರಾಘವೇಂದ್ರ, ನ್ಯಾಮತಿ ಪೊಲೀಸ್‌ ಠಾಣೆಯ ಪಿಐ ರವಿ ಎನ್‌.ಎಸ್‌., ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ, ಪ.ಪಂ. ಮುಖ್ಯಾಧಿಕಾರಿ ಪಿ.ಗಣೇಶ್‌ ರಾವ್‌, ಶಿವರಾಮ್‌ ನಾಯ್ಕ, ಶಾಲಾ -ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕಿಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

- - -

-ಚಿತ್ರ: