ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಿ: ಯಲ್ಲಮ್ಮ ಹಂಡಿ

| Published : Feb 23 2024, 01:48 AM IST

ಸಾರಾಂಶ

ಜನರು ಮೂಢನಂಬಿಕೆಗಳನ್ನು ಆಚರಣೆ ಮಾಡುತ್ತಿರುವುದು ವಿಷಾದನೀಯ. ಅನಿಷ್ಟ ಪದ್ಧತಿಗಳ ಆಚರಣೆ ಕಾನೂನು ಬಾಹಿರವಾಗಿದ್ದರೂ ಜನರು ಮೂಢನಂಬಿಕೆಗೆ ಬಲಿಯಾಗಿ ಸಮಾಜದಲ್ಲಿ ಪಾಲಿಸುತ್ತಿದ್ದಾರೆ.

ಹನುಮಸಾಗರ: ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅತ್ಯವಶ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ ಹೇಳಿದರು.ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಮತ್ತು ಗ್ರಾಪಂ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಡತನ ನಿರ್ಮೂಲನೆ ಅನುಷ್ಠಾನ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರಿಗೆ ಕಾನೂನು ಹರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನರು ಮೂಢನಂಬಿಕೆಗಳನ್ನು ಆಚರಣೆ ಮಾಡುತ್ತಿರುವುದು ವಿಷಾದನೀಯ. ಅನಿಷ್ಟ ಪದ್ಧತಿಗಳ ಆಚರಣೆ ಕಾನೂನು ಬಾಹಿರವಾಗಿದ್ದರೂ ಜನರು ಮೂಢನಂಬಿಕೆಗೆ ಬಲಿಯಾಗಿ ಸಮಾಜದಲ್ಲಿ ಪಾಲಿಸುತ್ತಿದ್ದಾರೆ. ದೇವದಾಸಿ ಪದ್ಧತಿ ಎಲ್ಲಾದರೂ ಕಂಡುಬಂತು ತಕ್ಷಣ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ.ತಾಲೂಕಾ ಯೋಜನೆಯ ಅನುಷ್ಠಾನಾಧಿಕಾರಿ ಮರಿಯಪ್ಪ ಮುಳ್ಳರು ಮಾತನಾಡಿ, ಮಾಜಿ ದೇವದಾಸಿಯರಿಗೆ ವಿವಿಧ ಇಲಾಖೆಗಳ ಮೂಲಕ ವಸತಿ ಸೌಲಭ್ಯ, ಮಾಸಾಶನ ಸೌಲಭ್ಯ, ಲೋನ್ ಸೌಲಭ್ಯ ನೀಡಿ ಮುಖ್ಯವಾಹಿನಿಗೆ ತರವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ವಕೀಲರಾದ ಎಸ್.ಈ. ಚಿನಿವಾಲರ, ಲಿಂಗರಾಜ ಅಗಸಿಮುಂದಿನ, ಪ್ರಭುರಾಜ ಎನ್. ಸೂಡಿ, ಪಿಡಿಒ ದೇವೇಂದ್ರಪ್ಪ ಕಮತರ, ಜಿಲ್ಲಾ ಯೋಜನಾ ಅನುಷ್ಠಾನಾಧಿಕಾರಿ ಸಕ್ಕುಬಾಯಿ, ವೀರನಗೌಡ ಪೊಲೀಸ್ ಪಾಟೀಲ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.