ರಾಷ್ಟ್ರಕ್ಕಾಗಿ ದುಡಿದರೆ ಭ್ರಷ್ಟಾಚಾರ ನಿರ್ಮೂಲನೆ: ವಿನಯಕುಮಾರ್

| Published : Jun 02 2024, 01:48 AM IST

ರಾಷ್ಟ್ರಕ್ಕಾಗಿ ದುಡಿದರೆ ಭ್ರಷ್ಟಾಚಾರ ನಿರ್ಮೂಲನೆ: ವಿನಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಹಾಗೂ ಇನ್ ಸೈಟ್ಸ್ ಐಎಎಸ್ ಸಹಯೋಗದಲ್ಲಿ, ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಉಪನ್ಯಾಸ ಕಾರ್ಯಕ್ರಮವು ಮದ್ರಾಸ್ ನ ಐಐಟಿ ಸಭಾಂಗಣದಲ್ಲಿ ನಡೆಯಿತು.

- ಮದ್ರಾಸ್ ಐಐಟಿಯಲ್ಲಿ ಐಎಎಸ್, ಐಪಿಎಸ್ ವಿದ್ಯಾರ್ಥಿಗಳು, ಆಕಾಂಕ್ಷಿಗಳಿಗೆ ಉಪನ್ಯಾಸ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಹಾಗೂ ಇನ್ ಸೈಟ್ಸ್ ಐಎಎಸ್ ಸಹಯೋಗದಲ್ಲಿ, ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಉಪನ್ಯಾಸ ಕಾರ್ಯಕ್ರಮವು ಮದ್ರಾಸ್ ನ ಐಐಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ ಕುಮಾರ್ ಅವರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ರಾಜಕೀಯ ತಟಸ್ಥತೆ ಉಳಿಸಿಕೊಂಡು ರಾಷ್ಟ್ರದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ಆಗ ಮಾತ್ರ ಆಡಳಿತದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದಲ್ಲದೇ, ಜನಪರ ನೀತಿಗಳನ್ನು ಜಾರಿಗೊಳಿಸಬಹುದು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಹುದು ಎಂದು ಸಲಹೆ ನೀಡಿದರು.

ಐಐಟಿ ವಿದ್ಯಾರ್ಥಿಗಳಲ್ಲಿ ಯುಪಿಎಸ್ಸಿ ಪರೀಕ್ಷೆ ಬಗ್ಗೆ ಹೆಚ್ಚಾಗುತ್ತಿರುವ ಜಾಗೃತಿ, ಪರೀಕ್ಷೆ ಬಗೆಗಿನ ಅವರ ಸಮರ್ಪಣಾ ಮನೋಭಾವ, ಶಿಸ್ತುಬದ್ಧ ಶೈಕ್ಷಣಿಕ ಜೀವನ ಸೇರಿದಂತೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ವಿನಯ್ ಕುಮಾರ್‌ ಅವರು ಉತ್ತರಿಸಿದರು.

- - - -1ಕೆಡಿವಿಜಿ32ಃ:

ಮದ್ರಾಸ್‌ನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ, ಇನ್ ಸೈಟ್ಸ್ ಐಎಎಸ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಬಿ.ವಿನಯಕುಮಾರ್ ಉಪನ್ಯಾಸ ನೀಡಿದರು.