ಸಾರಾಂಶ
ಈರೇಗೌಡನಹುಂಡಿ ಗ್ರಾಮದ ಮಹದೇವಯ್ಯ ಎಂಬವರ ಜಮೀನಿನಲ್ಲಿ ಕಾಡು ಹಂದಿ ಬೇಟೆಯಾಡುವ ಉದ್ದೇಶದಿಂದ ಅಕ್ರಮವಾಗಿ ಸಿಡಿಮದ್ದನ್ನು ಸಂಗ್ರಹಿಸಿ ಇಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಗ್ರಾಮಸ್ಥರೂ ಕೂಡ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಗ್ರಾಮಸ್ಥರ ಮಾತಿಗೆ ಕ್ಯಾರೆ ಎನ್ನದೆ ಅಕ್ರಮವಾಗಿ ಸಿಡಿಮದ್ದನ್ನು ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು.
ಕನ್ನಡಪ್ರಭ ವಾರ್ತೆ ನಂಜನಗೂಡು
ಕಾಡು ಹಂದಿ ಬೇಟೆಗಾಗಿ ಜಮೀನಿನಲ್ಲಿ ಇಡಲಾಗಿದ್ದ ಸಿಡಿಮದ್ದು ತಿನ್ನಲು ಹೋಗಿ ಸಿಡಿಮದ್ದು ಸ್ಫೋಟಗೊಂಡು ಎತ್ತು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ತಾಲೂಕಿನ ಈರೇಗೌಡನಹುಂಡಿ ಗ್ರಾಮದಲ್ಲಿ ಜರುಗಿದೆ.ಈರೇಗೌಡನಹುಂಡಿ ಗ್ರಾಮದ ಮಹದೇವಯ್ಯ ಎಂಬವರ ಜಮೀನಿನಲ್ಲಿ ಕಾಡು ಹಂದಿ ಬೇಟೆಯಾಡುವ ಉದ್ದೇಶದಿಂದ ಅಕ್ರಮವಾಗಿ ಸಿಡಿಮದ್ದನ್ನು ಸಂಗ್ರಹಿಸಿ ಇಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಗ್ರಾಮಸ್ಥರೂ ಕೂಡ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಗ್ರಾಮಸ್ಥರ ಮಾತಿಗೆ ಕ್ಯಾರೆ ಎನ್ನದೆ ಅಕ್ರಮವಾಗಿ ಸಿಡಿಮದ್ದನ್ನು ಜಮೀನಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು.
ಸೋಮವಾರ ಎತ್ತು ಜಮೀನಿನಲ್ಲಿ ಮೇಯುತ್ತಿದ್ದ ವೇಳೆ ಸಿಡಿಮದ್ದಿಗೆ ಬಾಯಿ ಹಾಕಿದ ಪರಿಣಾಮ ಸಿಡಿಮದ್ದು ಸ್ಫೋಟಗೊಂಡು ಎತ್ತಿನ ಬಾಯಿ ಸಂಪೂರ್ಣವಾಗಿ ಸಿಡಿದು ಹೋಗಿದ್ದು, ಎತ್ತು ಸಾವು ಮತ್ತು ಬದುಕಿನ ನಡುವೆ ಹೋರಾಡುತ್ತಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.