ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಈಶ್ವರಪ್ಪ, ರಾಘವೇಂದ್ರ ಭೂಮಿ ಖರೀದಿಸಿಲ್ಲ

| Published : Dec 31 2023, 01:30 AM IST

ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಈಶ್ವರಪ್ಪ, ರಾಘವೇಂದ್ರ ಭೂಮಿ ಖರೀದಿಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ತುಂಗಭದ್ರಾ ಶುಗರ್ ಫ್ಯಾಕ್ಟರಿ ಜಾಗದಲ್ಲಿ ಈಶ್ವರಪ್ಪ, ರಾಘವೇಂದ್ರ ಯಾರೂ ಭೂಮಿ ಖರೀದಿ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇಷ್ಟು ದಿನ ಇಲ್ಲದ ವಿಷಯ ಪ್ರಸ್ತಾಪ ಆಗುತ್ತಿರಬಹುದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ಇರುವುದರಿಂದ ಶುಗರ್ ಫ್ಯಾಕ್ಟರಿ ವಿಚಾರ ಮುಂಚೂಣಿಗೆ ಬಂದಿದೆ. ಚುನಾವಣೆ ನಂತರ ಹೋರಾಟಗಾರರು ಕಾಣೆ ಆಗಬಹುದು. ನನ್ನ ಬಗ್ಗೆ ಮಾತನಾಡುವವರು ಸ್ವಲ್ಪ ಎಚ್ಚರದಿಂದ ಮಾತನಾಡಲಿ ಎಂದು ಖಾರವಾಗಿ ಹೇಳಿದರು.

ಸಕ್ಕರೆ ಕಾರ್ಖಾನೆ ಜಾಗದಲ್ಲಿ ಕಾರ್ಮಿಕ ಮುಖಂಡರು ಮನೆ ಒಡೆಸುವ ಪ್ರಶ್ನೆ ಉದ್ಭವ ಆಗಲ್ಲ. ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಪರಿಹಾರ ಕೊಟ್ಟಿದ್ದಾರೆ. ಪರಿಹಾರ ಪಡೆದವರು ಕಾರ್ಖಾನೆ ಸ್ವತ್ತು ಬಿಟ್ಟು ಕೊಡಬೇಕು. 900 ಜನ ಪರಿಹಾರ ತಗೊಂಡಿದ್ದಾರೆ. ಒಪ್ಪಂದದ ಪ್ರಕಾರ ಇವರು ಆ ಜಾಗದಲ್ಲಿ ಇದ್ದರೆ ಬಿಟ್ಟು ಕೊಡಬೇಕು ಎಂದರು.

ಸಕ್ಕರೆ ಕಾರ್ಖಾನೆ ಜಮೀನು ನಮಗೆ ಸಂಬಂಧ ಅಲ್ಲ. 26 ವರ್ಷಗಳ ವೇತನ, ಪಿಂಚಣಿ, ಶೇ.6ರ ಬಡ್ಡಿ ದರದಲ್ಲಿ ಕೊಡಿಸಿದ್ದೇವೆ. ನನ್ನ ಬಗ್ಗೆ ಮಾತನಾಡುವವರು ಇದನ್ನು ಮಾಡಿಲ್ಲ. ನಮ್ಮದು ಬುಡುಬುಡಿಕೆ ಸಮೂಹ ಅಲ್ಲ. ರಕ್ತ, ಬೆವರು ಕಾರ್ಮಿಕರು ಹರಿಸಿದ್ದಾರೆ. ಅವರಿಗೆ ನ್ಯಾಯ ಕೊಡಿಸಿದ್ದೇವೆ ಎಂದರು.- - -

(-ಫೋಟೋ: ಆಯನೂರು ಮಂಜುನಾಥ್‌)