ಸದಾಶಿವ ಮುತ್ಯಾನ ದರ್ಶನ ಪಡೆದ ಈಶ್ವರಪ್ಪ

| Published : Sep 09 2024, 01:39 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಬಬಲಾದಿ ಸದಾಶಿವ ಮಠಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭೇಟಿನೀಡಿ ಸದಾಶಿವ ಮುತ್ಯಾನ ದರ್ಶನ ಪಡೆದರು. ಮಠದಲ್ಲಿ ಕೆ.ಎಸ್.ಈಶ್ವರಪ್ಪ, ಪುತ್ರ ಕಾಂತೇಶ, ಮಾಜಿ ಶಾಸಕ ವೀರಭದ್ರಪ್ಪ ಹಾಲಳ್ಳಿ ಅವರಿಗೆ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಅವರು, ಪವಾಡಪುರುಷ ಸದಾಶಿವ ಮುತ್ಯಾನ ಮಠಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿ ಮುಂದೆ ಏನಾಗುತ್ತದೆ ಎಂದು ಕಾಲಜ್ಞಾನ ಹೇಳುತ್ತಾರೆ. ಇಲ್ಲಿ ನುಡಿಯುವ ಕಾಲಜ್ಞಾನ ನಿಜವಾಗುತ್ತದೆ, ಹೋಗಿ ಬಂದವರ ಅಪೇಕ್ಷೆ ಇಡೇರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾನು ಬಂದಿದ್ದೇನೆ ಎಂದರು.

ಪ್ರಸ್ತುತ ರಾಜಕೀಯ ಸರಿಯಿಲ್ಲ, ರಾಜ್ಯದಲ್ಲಿ ಕೆಟ್ಟ ರಾಜಕಾರಣ ನಡೆಯುತ್ತಿದ್ದು, ವೈಯಕ್ತಿಕ ದ್ವೇಷ ಹೆಚ್ಚುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ. ಕುಟುಂಬ ರಾಜಕಾರಣದಿಂದಾಗಿ ಪಕ್ಷಕ್ಕೆ ದುಡಿದವರಿಗೆ ನೋವಿದೆ, ಹಿಂದೂ ಧರ್ಮದ ಮೇಲೆ ಆಗಿರುವ ಆಘಾತಗಳ ಬಗ್ಗೆ ಗಮನಹರಿಸಿ, ಹಿಂದುತ್ವ ಉಳಿಸು, ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದನ್ನು ಮಾಡು ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಈ ವೇಳೆ ಛಾಯಾಗ್ರಾಹಕ ಮೋಹನ, ಸ್ಥಳೀಯರಾದ ಕಾಶಿನಾಥ ಬಿರಾದಾರ, ಪ್ರಕಾಶ ಒಡೆಯರ, ರಾಜೂ ಬಿರಾದಾರ ಇತರರು ಉಪಸ್ಥಿತರಿದ್ದರು.