ಎಸ್ಸೆಸ್ಸೆಲ್ಸಿ: ವಿದ್ಯಾರಶ್ಮಿ ಶಾಲೆಗೆ ಶೇಕಡಾ ಶೇ ೧೦೦ ಫಲಿತಾಂಶ

| Published : May 05 2025, 12:48 AM IST

ಎಸ್ಸೆಸ್ಸೆಲ್ಸಿ: ವಿದ್ಯಾರಶ್ಮಿ ಶಾಲೆಗೆ ಶೇಕಡಾ ಶೇ ೧೦೦ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಶೇ ೧೦೦ ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ೪೧ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ೧೬ ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು ೨೫ ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಶೇ ೧೦೦ ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ೪೧ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ೧೬ ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು ೨೫ ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.ಸುಧೀರ್ ಕೆ ಮತ್ತು ಸುಪ್ರಿಯ ದಂಪತಿ ಪುತ್ರ ಸೃಜನ್.ಕೆ ಅವರು ೬೧೮ ಅಂಕ, ಎಚ್ ಶ್ರೇಯಾಂಸ ಕುಮಾರ್ ಇಂದ್ರ ಮತ್ತು ಶ್ವೇತ ಬಿ.ಎಸ್ ದಂಪತಿ ಪುತ್ರಿ ಎಚ್.ಎಸ್.ಶ್ರುತಜೈನ್ ಅವರು ೬೧೭ ಅಂಕ, ಲಕ್ಷ್ಮೀಶ ಮತ್ತು ರಾಧಿಕ ಎಂ ದಂಪತಿ ಪುತ್ರಿ ಎಂ.ವೈಷ್ಣವಿ ಅವರು ೬೧೬ ಅಂಕ, ವಿಶ್ವನಾಥ ಶೆಟ್ಟಿ ಮತ್ತು ಶಶಿಕಲಾ ದಂಪತಿ ಪುತ್ರಿ ಮಾನ್ವಿ ವಿ ಅವರು ೬೧೦ ಅಂಕ, ಪ್ರೇಮಚಂದ್ರ ಎಂ ಮತ್ತು ವಿ,ಪ್ರತಿಮಾ ದಂಪತಿ ಪುತ್ರಿ ಎಂ.ಲಾಸ್ಯ ಅವರು ೬೦೭ ಅಂಕ, ಪ್ರಭಾಚಂದ್ರ ಎಂ.ಕೆ ಮತ್ತು ಉಮಾವತಿ ದಂಪತಿ ಪುತ್ರಿ ಪ್ರಾಪ್ತಿ.ಪಿ ಅವರು ೬೦೩ ಅಂಕಗಳನ್ನು ಪಡೆದಿದ್ದಾರೆ.

ಅಬ್ದುಲ್ ರಹಿಮಾನ್ ಮತ್ತು ರೆಹಮತ್ ದಂಪತಿ ಪುತ್ರಿ ಆಯಿಷತ್ ಹನ್ನಾ ಎ.ಎ ಅವರು ೫೯೨,ಎಂ.ಅಶ್ರಫ್ ಮತ್ತು ಅಬ್ಸಾ ಕೆ ದಂಪತಿ ಪುತ್ರ ಮಹಮ್ಮದ್ ಅವಾದ್ ಶಾ ಅವರು ೫೯೦ ಅಂಕ, ಬಾಲಚಂದ್ರ ಕೆ ಮತ್ತು ಲೋಹಿತಾಕ್ಷಿ ದಂಪತಿ ಪುತ್ರಿ ವಿದಿಶಾ ಬಿ.ಕೆ ಅವರು ೫೭೦ ಅಂಕ, ರಾಘವೇಂದ್ರ ಬೈಪಡಿತ್ತಾಯ ಮತ್ತು ಅನುಪಮ ದಂಪತಿ ಪುತ್ರ ಅವರು ಶ್ರೀರಾಮ್ ಬೈಪಡಿತ್ತಾಯ ಅವರು ೫೬೬ ಅಂಕ, ಬಿ.ಸಂಜೀವ ಶೆಟ್ಟಿ ಮತ್ತು ಬಿ,ದೇವಿ ದಂಪತಿ ಪುತ್ರ ಬಿ.ವಿಘ್ನೇಶ್ ಶೆಟ್ಟಿ ಅವರು ೫೫೯ ಅಂಕ, ಪ್ರದೀಪ್ ಕೆ.ಸಿ ಮತ್ತು ಪ್ರತಿಮಾ ಎಂ.ಎಸ್ ದಂಪತಿ ಪುತ್ರಿ ಸಾನ್ವಿ ಪಿ ಗೌಡ ಅವರು ೫೫೨ ಅಂಕ, ದಿನೇಶ್ ಮತ್ತು ಗೀತಾ ದಂಪತಿ ಪುತ್ರಿ ಕಾವ್ಯಶ್ರೀ ಅವರು ೫೫೦ ಅಂಕ, ತಾರಾನಾಥ ಮತ್ತು ಸೌಮ್ಯ ದಂಪತಿ ಪುತ್ರ ಹಸ್ತೇಶ್.ಪಿ ಶೆಟ್ಟಿ-೫೩೭ ಅಂಕ, ಪ್ರಭಾ ಚಂದ್ರ ಎಂ.ಕೆ ಮತ್ತು ಉಮಾವತಿ ದಂಪತಿ ಪುತ್ರ ಪ್ರಾರ್ಥನ್ ಪಿ ಅವರು ೫೩೭ ಅಂಕ, ದಿ. ಮಾಧವ ಪಿ.ಎಸ್ ಮತ್ತು ವನಿತಾ ದಂಪತಿ ಪುತ್ರಿ ಅಭಿಜ್ಞ ಅವರು ೫೩೬ ಅಂಕ ಗಳಿಸಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ಮತ್ತು ಬೋಧಕ ವರ್ಗ ಹಾಗೂ ಸಿಬ್ಬಂದಿಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಕೆ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ತಿಳಿಸಿದ್ದಾರೆ.