ಸಾರಾಂಶ
ಸುರಪುರ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶೇಷ ತರಗತಿಗಳು ಜರುಗಿದವು.
ಕನ್ನಡಪ್ರಭ ವಾರ್ತೆ ಸುರಪುರ
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ತೀವ್ರವಾಗಿ ಕುಸಿತಗೊಂಡ ಹಿನ್ನೆಲೆಯಲ್ಲಿ ಜೂನ್ ಮತ್ತು ಜುಲೈನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳಿಗೆ ಬುಧವಾರದಿಂದ ಆರಂಭವಾಗಿರುವ ವಿಶೇಷ ತರಗತಿಗಳಿಗೆ ನಿರುತ್ಸಾಹ ಎದುರಾಗಿದೆ.ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾದವರಿಗೆ ಉತ್ತಮ ಅಂಕ ಪಡೆಯಲು ವಿಶೇಷ ತರಗತಿಗಳನ್ನು ಶಿಕ್ಷಣ ಇಲಾಖೆಯ ಆದೇಶದಂತೆ ನಡೆಸಲಾಗುತ್ತಿದ್ದು, ಮೊದಲ ದಿನವೇ ಪೇಲಾದ ವಿದ್ಯಾರ್ಥಿಗಳು ತಾಲೂಕಿನ ಕೆಲ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳಿಗೆ ಹಾಜರಾಗಿದ್ದು ಕಂಡುಬಂದಿತು. ಪೋಷಕರ ದೂರವಾಣಿಯ ಸಂಪರ್ಕಿಸಿ ಮಕ್ಕಳನ್ನು ವಿಶೇಷ ತರಗತಿಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಲಾಗುತ್ತಿದೆ. ಪೋಷಕರು ಶಿಕ್ಷಕರ ಮನವಿಗೆ ಸ್ಪಂದಿಸಿ ಮಕ್ಕಳನ್ನು ಕಳುಹಿಸಿಕೊಟ್ಟರೆ ಮಕ್ಕಳ ಕಲಿಕೆಯು ಅಭಿವೃದ್ಧಿಗೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರೌಢಶಾಲೆ ಶಿಕ್ಷಕರು ತಿಳಿಸಿದ್ದಾರೆ.